Telegram Join My Telegram WhatsApp Join My WhatsApp

ಹಳೆಯ mAadhaar  ಆ್ಯಪ್  ಬಂದ್..! ಹೊಸAadhaar  App ನಲ್ಲಿ ಸೂಪರ್ ಫೀಚರ್ಸ್  – OTP ಇಲ್ಲದೆ ಲಾಗಿನ್, Face Authentication ಸೌಲಭ್ಯ

ಹೊಸAadhaar  AppಹೊಸAadhaar  Appಹಳೆಯ mAadhaar  ಆ್ಯಪ್  ಬಂದ್..! ಹೊಸAadhaar  App ನಲ್ಲಿ ಸೂಪರ್ ಫೀಚರ್ಸ್  – OTP ಇಲ್ಲದೆ ಲಾಗಿನ್, Face Authentication ಸೌಲಭ್ಯ

ದೇಶದ ಎಲ್ಲ ಆಧಾರ್  ಬಲಕ್ಕೆದಾರರಿಗೆ ಮಹತ್ವದ ಅಪ್ಡೇಟ್ 

ಭಾರತದಲ್ಲಿ ಡಿಜಿಟಲ್ ಸೇವೆಗಳ ಬಳಕೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆ ಆಧಾರ್ ಕಾರ್ಡ್ ದೇಶದ ಪ್ರಮುಖ ಗುರುತಿನ ದಾಖಲೆಯಾಗಿ ಪರಿಣಮಿಸಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಲಾಭ ಪಡೆಯುವವರೆಗೆ ಅನೇಕ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇದೀಗ UIDAI ದೇಶದ ಕೋಟ್ಯಾಂತರ ಆಧಾರ್ ಬಳಕೆದಾರರಿಗೆ ಮಹತ್ವದ ಅಪ್ಡೇಟ್ ನೀಡಿದ್ದು, ಹಲವು ವರ್ಷಗಳಿಂದ ಬಳಕೆಯಲ್ಲಿದ್ದ mAdadhaar ಆ್ಯಪ್  ಅನ್ನು ಹಂತ ಹಂತವಾಗಿ ಸ್ಥಗಿತಗೊಳಿಸಿ ಅದರ ಬದಲಿಗೆ ಹೊಸ Aadhaar App ಅನ್ನು ಪರಿಚಯಿಸಿದೆ. ಹೊಸ ಆ್ಯಪ್ ನಲ್ಲಿ  ಭದ್ರತೆ, ವೇಗ ಹಾಗೂ ಬಲಕೆದಾರರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಸುಧಾರಿತ ಸೌಲಭ್ಯಗಳನ್ನು ಸೇರಿಸಲಾಗಿದೆ. ಭಾರತದಲ್ಲಿ ಡಿಜಿಟಲ್ ಇಂಡಿಯ ಅಭಿಮಾನಿಯಾದ ಭಾಗವಾಗಿ ಅನೇಕ ಸೇವೆಗಳು ಈಗ ಸಂಪೂರ್ಣವಾಗಿ ಆನ್ಲೈನ್ ಆಗುತ್ತಿವೆ. ಈ ಸಂದರ್ಭದಲ್ಲಿ ಆಧಾರ್ ವ್ಯವಸ್ಥೆಯು ಸುರಕ್ಷಿತ ಮತ್ತು ವಿಶ್ವಾಸವಾಗಿರುವುದು ಅಗತ್ಯ. ಹೊಸ Aadhaar App ಈ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆ ಆಗಿದೆ. ಸರ್ಕಾರದ ವಿವಿಧ ಯೋಜನೆಯ ಪ್ರಯೋಜನ ಪಡೆಯಲು ಫಲಾನುಭವಿಗಳು, ವಿದ್ಯಾರ್ಥಿಗಳು,  ಉದ್ಯೋಗಿಗಳು,  ವ್ಯಾಪಾರಿಗಳು ಹಾಗೂ ಸಾಮಾನ್ಯ ನಾಗರಿಕರಿಗೆಲ್ಲರಿಗೂ ಇದರ ಲಾಭ ಪಡೆಯಬಹುದು.

ಯಾಕೆ mAdadhaar ಆ್ಯಪ್ ಬಂದ್  ಮಾಡಲಾಗುತ್ತಿದೆ ?

ಹಳೆಯ mAdadhaar ಆ್ಯಪ್ ಹಲವು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳು, ಡೇಟಾ ಕಳ್ಳತನ ಹಾಗೂ ವೈಯಕ್ತಿಕ ಮಾಹಿತಿಯ ದುರುಪಯೋಗದ ಪ್ರಕರಣಗಳು ಹೊಸ ಭದ್ರತೆ ಭದ್ರತಾ ವ್ಯವಸ್ಥೆಯ ಅಗತ್ಯವನ್ನು ಹೆಚ್ಚಿಸಿವೆ. ಇದೇ ಕಾರಣಕ್ಕೆ UIDAI ಹೆಚ್ಚು ಸುರಕ್ಷಿತ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ಹೊಸ Aadhaar App ಅನ್ನು ಅಭಿವೃದ್ಧಿಪಡಿಸಿದೆ. ಹೊಸ ವ್ಯವಸ್ಥೆಯಲ್ಲಿ ಬಳಕೆದಾರರ  ಮಾಹಿತಿಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು,  ಅಗತ್ಯವಿರುವ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

Face Authentication ಮೂಲಕ ಸುರಕ್ಷಿತ ಲಾಗಿನ್ 

ಹೊಸ Aadhaar App ನ ಪ್ರಮುಖ ಆಕರ್ಷಣೆ  Face Authentication ಸೌಲಭ್ಯವಿದೆ. ಹಿಂದೆ OTP ಮೂಲಕ  ಮಾತ್ರ ಲಾಗಿನ್ ಮಾಡಬೇಕಾಗುತ್ತಿತ್ತು. ಆದರೆ ಈಗ ಬಳಕೆದಾರರು ತಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕವೇ ಗುರುತಿನ ಪರಿಶೀಲನೆ ಮಾಡಿಕೊಳ್ಳಬಹುದು. ಇದರಿಂದ OTP ಬರೆದಿರುವ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೊತೆಗೆ ಬ್ಯಾಂಕ್, ಸರ್ಕಾರಿ ಕಚೇರಿ, ಹೋಟೆಲ್ ಹಾಗೂ ಇತರೆ ಸೇವಾ ಕೇಂದ್ರಗಳಲ್ಲಿ ತ್ವರಿತ ಮತ್ತು ಸುರಕ್ಷಿತ ಪರಿಶೀಲನೆ  ಸಾಧ್ಯವಾಗುತ್ತದೆ. 

QR Code Verification ನಿಂದ ಡೇಟಾ ಸುರಕ್ಷತೆ 

ಹೊಸ  ಆ್ಯಪ್ ನಲ್ಲಿ  QR Code ಆಧಾರಿತ ಪರಿಶೀಲನೆ ವ್ಯವಸ್ಥೆ ನೀಡಲಾಗಿದೆ. ಇದರಿಂದ ಸಂಪೂರ್ಣ ಆಧಾರ್ ಮಾಹಿತಿಯನ್ನು ತೋರಿಸುವ ಅಗತ್ಯ ಇರುವುದಿಲ್ಲ. ಅಗತ್ಯ ಇರುವ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಬಹುದಾಗಿದೆ. ಇದು ಬಳಕೆದಾರರ ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ ಡೇಟಾ ಸೋರಿಕೆ ಹಾಗೂ ದುರುಪಯೋಗದ ಅಪಾಯವನ್ನು ಕಡಿಮೆ ಮಾಡುತ್ತವೆ.

Biometric Lock ಸೌಲಭ್ಯ ಏನು ?

ಹೊಸ Aadhaar App ನಲ್ಲಿ Fingerprints, Iris Scan ಹಾಗೂ Face Data ಅನ್ನು ಲಾಕ್ ಮಾಡುವ ಸೌಲಭ್ಯ ನೀಡಲಾಗಿದೆ. ಬಲಕೆದಾರರು ತಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಅಗತ್ಯವಿದ್ದಾಗ ಮಾತ್ರ ಅನ್ಲಾಕ್  ಮಾಡಬಹುದು.  ಇದರಿಂದ ಅನಾಧಿಕೃತವಾಗಿ ಬಯೋಮೆಟ್ರಿಕ್ ಮಾಹಿತಿಯನ್ನು ಬಳಸುವ ಸಾಧ್ಯತೆ ಕಡಿಮೆ ಆಗುತ್ತದೆ. ಹೆಚ್ಚುವರಿ ಭದ್ರತೆ ಬಯಸುವವರಿಗೆ ಅತ್ಯಂತ ಉಪಯುಕ್ತ ಫೀಚರ್ ಆಗಿದೆ. ಇದರಿಂದ ಯಾವುದಾದರೂ ದುರುದ್ದೇಶದಿಂದ ಬಯೋಮೆಟ್ರಿಕ್ ಮಾಹಿತಿಯನ್ನು ಬಳಸಲು ಅಪಾಯವನ್ನು ತಡೆಯಬಹುದು.

ಇಂಟರ್ನೆಟ್ ಇಲ್ಲದಿದ್ದರೂ Verification ಸಾಧ್ಯ

ಗ್ರಾಮೀಣ ಪ್ರದೇಶಗಳು ಹಾಗೂ ಕಡಿಮೆ ನೆಟ್ವರ್ಕ್ ಇರುವ ಸ್ಥಳವನ್ನು ಗಮನದಲ್ಲಿಟ್ಟುಕೊಂಡು Offline Verification ಸೌಲಭ್ಯವನ್ನು ಪರಿಚಯಿಸಲಾಗಿದೆ. QR Code ಮೂಲಕ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಆಧಾರ್ ಪರಿಶೀಲನೆ ಮಾಡಬಹುದು. ಇದರಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ.

ಒಂದೇ ಮೊಬೈಲ್ನಲ್ಲಿ ಕುಟುಂಬದ ಎಲ್ಲರೂ Aadhaar Profile 

ಹೊಸ  Aadhaar App ನಲ್ಲಿ  Multi Profile Support ಸೌಲಭ್ಯ ನೀಡಲಾಗಿದೆ. ಒಂದೇ ಮೊಬೈಲ್ ನಲ್ಲಿ ಕುಟುಂಬದ ಹಲವಾರು ಸದಸ್ಯರ Aadhaar Profile ಸೇರಿಸಬಹುದು. ಇದರಿಂದ ಪೋಷಕರು ಮಕ್ಕಳ ಆಧಾರ್ ವಿವರವನ್ನು ಹಾಗೂ ಕುಟುಂಬದ ಹಿರಿಯ ಸದಸ್ಯರ ಮಾಹಿತಿಯನ್ನು ಸುಲಭವಾಗಿ ನಿರ್ವಹಿಸಬಹುದು.

ಬ್ಯಾಂಕ್ ಬಳಕೆದಾರರಿಗೆ ದೊಡ್ಡ ಲಾಭ

ಬ್ಯಾಂಕಿಂಗ್ ಸೇವೆಯಲ್ಲಿ Aadhaar ಪ್ರಮುಖ ಪಾತ್ರ ವಹಿಸುತ್ತದೆ. ಖಾತೆ ತೆರೆಯುವುದು, KYC ಪ್ರಕ್ರಿಯೆ ಪೂರ್ಣಗೊಳಿಸುವುದು ಹಾಗೂ ವಿಧ ಹಣಕಾಸು ಸೇವೆ ಈ ಗಳನ್ನು ಪಡೆಯಲು ಆಧಾರ್ ಕಾರ್ಡ್ ಅಗತ್ಯ  ಇರುತ್ತದೆ. ಹೊಸ Aadhaar App ನ Face Authentication ಹಾಗೂ QR Verification ಸೌಲಭ್ಯಗಳಿದೆ ಬ್ಯಾಂಕಿಂಗ್ ಸೇವೆಗಳು ಇನ್ನಷ್ಟು ಸುರಕ್ಷಿತವಾಗಲಿದೆ.

ವಿದ್ಯಾರ್ಥಿಗಳು ಮತ್ತು ಸರ್ಕಾರಿ ಯೋಜನೆ ಫಲಾನುಭವಿಗಳಿಗೆ ಅನುಕೂಲ 

ವಿದ್ಯಾರ್ಥಿ ವೇತನ ಶಿಕ್ಷಣ ಸಂಬಂಧಿಸಿದ ಯೋಜನೆಗಳು ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಹೊಸ ಆ್ಯಪ್ ನಿಂದ ಗುರುತಿನ ಪರಿಶೀಲನೆ ಪ್ರಕ್ರಿಯೆ ವೇಗವಾಗಿ ನಡೆಯಲಿದ್ದು, ವಿದ್ಯಾರ್ಥಿಗಳು ಹಾಗೂ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.  ಸರಕಾರಿ ಯೋಜನೆಗಳ ಪಾರದರ್ಶಕತೆ ಹೆಚ್ಚಿಸಲು ಕೂಡ ಇದು ಸಹಕಾರಿಯಾಗಿದಲಿದೆ.

ಹೊಸ ಆಧಾರ್ ಆ್ಯಪ್ ಡೌನ್ಲೋಡ್ ಮಾಡುವುದು ಹೇಗೆ

ಹೊಸ ಆಧಾರ್ ಆ್ಯಪ್ ಡೌನ್ಲೋಡ್  ಮಾಡಲು  google Play Store  ತೆರೆಯಬೇಕು. ನಂತರ Aadhaar app ಎಂದು ಹುಡುಕಿ  UIDAI ಬಿಡುಗಡೆ ಮಾಡಿರುವ ಅಧಿಕೃತ ಆ್ಯಪ್ ಅನ್ನು ಆಯ್ಕೆ ಮಾಡಬೇಕು. Install ಮಾಡಿದ ಬಳಿಕ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಮೂದಿಸಿ OTP ಅಥವಾ Face Authentication ಮೂಲಕ ಲಾಗಿನ್ ಮಾಡಬಹುದು.

ಡಿಜಿಟಲ್ ಭದ್ರತೆಯಲ್ಲಿ ಹೊಸ ಅಧ್ಯಾಯ 

ಡೇಟಾ ಸುರಕ್ಷತೆ ಇಂದಿನ ಡಿಜಿಟಲ್ ಯುಗದ ಪ್ರಮುಖ ಅಗತ್ಯವಾಗಿದೆ.  ಬಳಕೆದಾರರು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಡಲು UIDAI ಹೊಸ Aadhaar App ನಲ್ಲಿ ಹಲವು ಸುಧಾರಿತ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಿದೆ. ಇದು ಭಾರತದ ಡಿಜಿಟಲ್ ಗುರುತಿನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿದೆ.

ತಂತ್ರಜ್ಞಾನ ಮುಂದುವರಿದಂತೆ ಡಿಜಿಟಲ್ ಗುರುತಿನ ವ್ಯವಸ್ಥೆಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಇಂತಹ  ಸಂದರ್ಭದಲ್ಲಿ ಭದ್ರತೆ ಮತ್ತು ಗೌಪ್ಯತೆ ಎರಡನ್ನು ಸಮಾನವಾಗಿ ಕಾಪಾಡುವ ವ್ಯವಸ್ಥೆಗಳ ಅಗತ್ಯತೆ ಹೆಚ್ಚಾಗಿದೆ. ಹೊಸ Aadhaar app ಈ ಎರಡು ಅಂಶಗಳಿಗೆ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಬಳಕೆದಾರರು ತಮ್ಮ ಮಾಹಿತಿಯ ಮೇಲೆ ಹೆಚ್ಚಿನ ನಿಯಂತ್ರಣ ಹೊಂದುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಕೊನೆಯ ಮಾತು  

ಒಟ್ಟಾರೆ ಹೇಳುವುದಾದರೆ, ಹೊಸ Aadhaar App ಕೇವಲ ಒಂದು ಮೊಬೈಲ್ ಆ್ಯಪ್ ಅಲ್ಲ, ಇದು ಭದ್ರತೆ,  ವೇಗ ಮತ್ತು ಬಳಕೆದಾರರ ಅನುಕೂಲತೆಯ ಹೊಸ ರೂಪವಾಗಿದೆ. Face Authentication, QR Sharing, Biometric Lock, Offline Verification ಹಾಗೂMulti Profile Support ಮುಂತಾದ ಸೌಲಭ್ಯಗಳಿಂದ ಈ ಆ್ಯಪ್ ಹಳೆಯ mAadhaar ಗಿಂತ ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತವಾಗಿದೆ. ಈಗಾಗಿ ಪ್ರತಿಯೊಬ್ಬ ಆಧಾರ್  ಬಳಕೆದಾರರು ಹೊಸ  Aadhaar App ಬಗ್ಗೆ ತಿಳಿದುಕೊಂಡು ಅದನ್ನು ಬಳಸಲು ಆರಂಭಿಸುವುದು ಉತ್ತಮ. ಇದು ಕೇವಲ ಹೊಸ ಆ್ಯಪ್ ಮಾತ್ರವಲ್ಲ, ಭಾರತದ ಡಿಜಿಟಲ್ ಗುರುತಿನ ವ್ಯವಸ್ಥೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುವ ಮಹತ್ವದ ಹೆಜ್ಜೆ ಆಗಿದೆ. ಇದು ಭವಿಷ್ಯದ ಡಿಜಿಟಲ್ ಭಾರತದ ಮತ್ತು ಮಹತ್ವದ ಹೆಜ್ಜೆಯಾಗಿದೆ.

 

Leave a Comment