KMF GUMUL Recruitment 2026 : ಹಾಲು ಉತ್ಪಾದಕ ಸಂಸ್ಥೆಯಲ್ಲಿ 50 ಹುದ್ದೆಗಳ ಭರ್ತಿ – SSLC, ITI, ಪದವಿದಾರರಿಗೆ ಭರ್ಜರಿ ಉದ್ಯೋಗ ಅವಕಾಶ
KMF GUMUL ನೇಮಕಾತಿ 2026 ಪ್ರಕಟ
ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಸುವರ್ಣ ಅವಕಾಶ ದೊರೆತಿದೆ. ಕರ್ನಾಟಕ ಹಾಲು ಮಹಾಮಂಡಲ (KMF) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (GUMUL) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 50 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಉತ್ತಮ ವೇತನ, ಶಾಶ್ವತ ಉದ್ಯೋಗ ಭದ್ರತೆ ಮತ್ತು ಭವಿಷ್ಯದಲ್ಲಿ ಉತ್ತಮ ನಿರ್ಮಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
KMF GUMUL ಸಂಸ್ಥೆಯ ಕುರಿತು ಬಗ್ಗೆ ಮಾಹಿತಿ
ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವಾಗಿರುವ GUMUL, ಕರ್ನಾಟಕ ಹಾಲು ಮಹಾಮಂಡಲದ ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಈ ಸಂಸ್ಥೆಯು ಹಾಲು ಸಂಗ್ರಹಣೆ, ಹಾಲಿನ ಗುಣಮಟ್ಟ ಪರೀಕ್ಷೆ, ಸಂಸ್ಕರಣೆ, ಹಾಲಿನ ಉತ್ಪಾದನಾ ತಯಾರಿಕೆ ಮತ್ತು ಮಾರುಕಟ್ಟೆಗೊಳಿಸುವ ಕಾರ್ಯಗಳನ್ನು ನಿರ್ವಹಿಸುತ್ತದೆ. ಸಾವಿರಾರು ರೈತರು ಮತ್ತು ಹಾಲು ಉತ್ಪಾದಕರೊಂದಿಗೆ ನೇರ ಸಂಪರ್ಕ ಹೊಂದಿರುವ ಈ ಸಂಸ್ಥೆ ಗ್ರಾಮೀಣ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ನೇಮಕಾತಿಯ ಪ್ರಮುಖ ವಿವರಗಳು
ಈ ನೇಮಕಾತಿಯ ಮೂಲಕ ವಿವಿಧ ಆಡಳಿತಾತ್ಮಕ, ತಾಂತ್ರಿಕ, ಲೆಕ್ಕಪತ್ರ, ಮತ್ತು ಮಾರುಕಟ್ಟೆ ವಿಭಾಗಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಒಟ್ಟು 50 ಹುದ್ದೆಗಳು ಲಭ್ಯವಿದ್ದು, ಉದ್ಯೋಗ ಸ್ಥಳವನ್ನು ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿರುತ್ತದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 27 ಜೂನ್ 2026 ಆಗಿದೆ.
ಹುದ್ದೆಗಳ ವಿವರ
ಈ ನೇಮಕಾತಿಯಲ್ಲಿ ಸಹಾಯಕ ವ್ಯವಸ್ಥಾಪಕರು, ಲೆಕ್ಕಾಧಿಕಾರಿ, ತಾಂತ್ರಿಕ ಅಧಿಕಾರಿ, ಹಿರಿಯ ಕೆಮಿಸ್ಟ್, ಡೈರಿ ಸೂಪರ್ವೈಸರ್ ಗ್ರೇಡ್-2, ವಿಸ್ತರಣಾಧಿಕಾರಿ ಗ್ರೇಡ್-3, ಆಡಳಿತ ಸಹಾಯಕ ಗ್ರೇಡ್-3, ಲೆಕ್ಕ ಸಹಾಯಕ ಗ್ರೇಡ್-3, ಮಾರುಕಟ್ಟೆ ಸಹಾಯಕ ಗ್ರೇಡ್-3, ಕಿರಿಯ ತಾಂತ್ರಿಕರು ಹಾಗೂ ಖರೀದಿ ಮತ್ತು ಉಗ್ರ ನ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳು ಸೇರಿವೆ. ವಿಭಿನ್ನ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಸಹಾಯಕ ವ್ಯವಸ್ಥಾಪಕರ ಹುದ್ದೆ ಅರ್ಹತೆ
ಸಹಾಯಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಲು B. V. Sc ಪದವಿ ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. ಈ ಹುದ್ದೆ ಆಯ್ಕೆಯಾಗುವ ಅಭ್ಯರ್ಥಿಗಳು ಸಂಸ್ಥೆಯ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಸಿಬ್ಬಂದಿ ನಿರ್ವಹಣೆ ಯೋಜನೆಗಳ ಅನುಷ್ಠಾನ ಮತ್ತು ಹಾಲು ಉತ್ಪಾದಕರ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಕರ್ತವ್ಯಗಳಾಗಿವೆ.
ಲೆಕ್ಕಾಧಿಕಾರಿ ಹುದ್ದೆಯ ಅರ್ಹತೆ
ಲೆಕ್ಕಾಧಿಕಾರಿ ಹುದ್ದೆಗೆ Mcom ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ CA ಅಥವಾ ICWA ಅರ್ಹತೆ ಹೊಂದಿರುವುದು ಕಡ್ಡಾಯವಾಗಿದೆ. ಟ್ಯಾಲಿ ಸಾಫ್ಟ್ವೇರ್ ಜ್ಞಾನ ಹಾಗೂ ಕನಿಷ್ಠ ಮೂರು ವರ್ಷ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಹಣಕಾಸು ನಿರ್ವಹಣೆ, ಲೆಕ್ಕಪತ್ರ ಪರಿಶೀಲನೆ ಮತ್ತು ಆಡಿಟ್ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಈ ಹುದ್ದೆಗೆ ಸೇರಿದೆ.
ತಾಂತ್ರಿಕ ಲೆಕ್ಕಾಧಿಕಾರಿ ಹುದ್ದೆ ಮಾಹಿತಿ
ತಾಂತ್ರಿಕ ಅಧಿಕಾರಿ ಹುದ್ದೆಗೆ B.Tech ಅಥವಾB.Sc ಪದವಿ ಹೊಂದಿರಬೇಕು. ಹಾಲು ಸಂಸ್ಕರಣೆ, ಉತ್ಪಾದನಾ ಘಟಕಗಳ ಮೇಲ್ವಿಚಾರಣೆ ಹಾಗೂ ಗುಣಮಟ್ಟ ನಿಯಂತ್ರಣ ಕಾರ್ಯಗಳನ್ನು ನಿರ್ವಹಿಸಲು ಈ ಹುದ್ದೆ ಪ್ರಮುಖವಾಗಿದೆ. ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ದೊರೆಯಬಹುದು.
ಹಿರಿಯ ಕೆಮಿಸ್ಟ್ ಹುದ್ದೆಯ ವಿವರ
ಹಿರಿಯ ಕೆಮಿಸ್ಟ್ ಹುದ್ದೆಗೆ B.Sc ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ಲ್ಯಾಬ್ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು. ಹಾಲು ಹಾಗೂ ಹಾಲಿನ ಉತ್ಪಾದನ ಗುಣಮಟ್ಟ ಪರೀಕ್ಷೆ, ರಾಸಾಯನಿಕ ವಿಶ್ಲೇಷಣೆ ಹಾಗೂ ಗುಣಮಟ್ಟ ನಿಯಂತ್ರಣ ಕಾರ್ಯಗಳನ್ನು ನಿರ್ವಹಿಸುವುದು ಈ ಹುದ್ದೆಯ ಪ್ರಮುಖ ಕರ್ತವ್ಯವಾಗಿದೆ.
ಡೈರಿ ಸೂಪರ್ವೈಸರ್ ಹುದ್ದೆಯ ಮಹತ್ವ
ಡೈರಿ ಸೂಪರ್ವೈಸರ್ ಗ್ರೇಡ್ -2 ಹುದ್ದೆಗೆ ಸಂಬಂಧಿಸಿದ ವಿಭಾಗದಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಅಗತ್ಯವಾಗಿದೆ. ಜೊತೆಗೆ ಎರಡು ವರ್ಷ ಅನುಭವ ಹೊಂದಿರಬೇಕು. ಹಾಲು ಸಂಗ್ರಹಣೆ ಕೇಂದ್ರಗಳ ನಿರ್ವಹಣೆ, ಉತ್ಪಾದನಾ ಚಟುವಟಿಗಳ ಮೇಲ್ವಿಚಾರಣೆ ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಪರಿಶೀಲಿಸುವ ಜವಾಬ್ದಾರಿ ಈ ಹುದ್ದೆಗೆ ಸೇರಿದೆ.
ವಿಸ್ತರಣಾಧಿಕಾರಿ ಹುದ್ದೆ ಮಾಹಿತಿ
ವಿಸ್ತರಣಾಧಿಕಾರಿ ಗ್ರೇಡ್-3 ಹುದ್ದೆಗೆ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯವಾಗಿದೆ. ರೈತರು ಹಾಗೂ ಹಾಲು ಉತ್ಪಾದಕರ ಸಂಘಗಳೊಂದಿಗೆ ಸಂಪರ್ಕ ಸಾಧಿಸುವುದು, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸುವುದು ಈ ಹುದ್ದೆಯ ಪ್ರಮುಖ ಜವಾಬ್ದಾರಿಯಾಗಿದೆ.
ಆಡಳಿತ ಸಹಾಯಕ ಹುದ್ದೆಯ ಅವಕಾಶ
ಆಡಳಿತ ಸಹಾಯಕ ಗ್ರೇಡ್-3 ಹುದ್ದೆಗೆ ಯಾವುದೇ ಪದವಿ ಮತ್ತು ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ಜ್ಞಾನ ಹೊಂದಿರಬೇಕು. ಕಚೇರಿ ದಾಖಲೆಗಳ ನಿರ್ವಹಣೆ ಪತ್ರ, ವ್ಯವಹಾರ ಹಾಗೂ ಆಡಳಿತಾತ್ಮಕ ಕಾರ್ಯಗಳಿಗೆ ಸಹಕಾರ ನೀಡುವ ಜವಾಬ್ದಾರಿಯನ್ನು ಈ ಹುದ್ದೆ ಹೊಂದಿರುತ್ತದೆ.
ಲೆಕ್ಕ ಸಹಾಯಕ ಹುದ್ದೆಯ ಮಾಹಿತಿ
B.Com ಪದವಿ ಪಡೆದ ಅಭ್ಯರ್ಥಿಗಳಿಗೆ ಲೆಕ್ಕ ಸಹಾಯಕ ಹುದ್ದೆ ಮತ್ತು ಉತ್ತಮ ಅವಕಾಶವಾಗಿದೆ. ಟ್ಯಾಲಿ ತರಬೇತಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಸಂಸ್ಥೆಯ ಹಣಕಾಸು ವ್ಯವಹಾರಗಳು, ಬಿಲ್ ನಿರ್ವಹಣೆ ಹಾಗೂ ಲೆಕ್ಕಪತ್ರ ದಾಖಲೆಗಳನ್ನು ನಿರ್ವಹಿಸುವುದು ಪ್ರಮುಖ ಕರ್ತವ್ಯವಾಗಿದೆ.
ಮಾರುಕಟ್ಟೆ ಸಹಾಯಕ ಹುದ್ದೆ ವಿಶೇಷತೆ
ಮಾರುಕಟ್ಟೆ ಸಹಾಯಕ ಗ್ರೇಡ್ -3 ಹುದ್ದೆಗೆ BBA ಪದವಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. ಸಂಸ್ಥೆಯ ಉತ್ಪನ್ನಗಳ ಮಾರಾಟ, ಪ್ರಚಾರ ಹಾಗೂ ಮಾರುಕಟ್ಟೆ ವಿಸ್ತರಣೆ ಕಾರ್ಯಗಳನ್ನು ನಿರ್ವಹಿಸಲು ಈ ಹುದ್ದೆ ಸಹಾಯಕವಾಗಿದೆ.
ಕಿರಿಯ ತಾಂತ್ರಿಕರ ಹುದ್ದೆಯ ಅರ್ಹತೆ
ಕಿರಿಯ ತಾಂತ್ರಿಕರ ಹುದ್ದೆಗೆ SSLC ಉತ್ತೀರ್ಣರಾಗಿರಬೇಕು. ಜೊತೆಗೆ ITI ಹಾಗೂ ಅ ಪ್ರೆಂಟಿಸ್ ಪ್ರಮಾಣ ಪತ್ರ ಹೊಂದಿರಬೇಕು. ಕನಿಷ್ಠ ಎರಡು ವರ್ಷಗಳ ಅನುಭವ ಅಗತ್ಯವಾಗಿದೆ. ಯಂತ್ರೋಪಕರಣಗಳ ನಿರ್ವಹಣೆ, ದುರಸ್ತಿ ಹಾಗೂ ತಾಂತ್ರಿಕ ಸಹಾಯಕ ಒದಗಿಸುವುದು ಈ ಹುದ್ದೆಯ ಪ್ರಮುಖ ಜವಾಬ್ದಾರಿಯಾಗಿದೆ.
ವಯೋಮಿತಿ ವಿವರ
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸು ಕಡ್ಡಾಯವಾಗಿದೆ. ಗರಿಷ್ಠ ವಯೋಮಿತಿ ಮತ್ತು ವಯೋ ಸಡಿಲಿಕೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು. ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ ಶ್ರೇಣಿ
ಈ ನೇಮಕಾತಿಯ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ನೀಡಲಾಗುತ್ತದೆ. ಸಹಾಯಕ ವ್ಯವಸ್ಥಾಪಕರಿಗೆ ₹ 83,700 ಇದರಿಂದ 1,55,200 ವರೆಗೆ ವೇತನ ದೊರೆಯಲಿದೆ. ಲೆಕ್ಕಾಧಿಕಾರಿ ಮತ್ತು ತಾಂತ್ರಿಕ ಅಧಿಕಾರಿಗಳಿಗೆ ₹69,250 ರಿಂದ ₹1,34,200 ವರೆಗೆ ವೇತನ ನಿಗದಿಪಡಿಸಲಾಗಿದೆ. ಹಿರಿಯ ಕೆಮಿಸ್ಟ್ ಹುದ್ದೆಗೆ ₹65,950 ರಿಂದ ₹1,24,900 ವರೆಗೆ ವೇತನ ನೀಡಲಾಗುತ್ತದೆ. ಡೈರಿ ಸೂಪರ್ವೈಸರ್ ಹಾಗೂ ವಿಸ್ತರಾಧಿಕಾರಿಗಳಿಗೆ ₹54,175 ರಿಂದ ₹99,400 ವರೆಗೆ ವೇತನ ದೊರೆಯಲಿದೆ. ಇತರೆ ಸಹಾಯಕ ಹುದ್ದೆಗಳಿಗೆ ₹ 34,100 ರಿಂದ₹67,600 ವರೆಗೆ ವೇತನ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ನಡೆಯಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಇತರೆ ಅರ್ಹತೆಗಳನ್ನು ಪರಿಶೀಲಿಸಿ ಮುಂದಿನ ಹಂತಗಳಿಗೆ ಅನ್ವಯಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು. ನಂತರ ಆನ್ಲೈನ್ ಅರ್ಜಿ ನಮೂನೆಯನ್ನು ತೆರೆಯಬೇಕು. ಅಗತ್ಯ ವಯಕ್ತಿಕ ಮಾಹಿತಿ, ಶೈಕ್ಷಣಿಕ ವಿವರಗಳು ಮತ್ತು ಇತರೆ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಪಾಸ್ ಪೋರ್ಟ್ ಗಾತ್ರದ ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಅರ್ಜಿಯನ್ನು ಸಲ್ಲಿಸಿದ ಆಧಾರ್ ಪ್ರಿಂಟ್ ಔಟ್ ಅನ್ನು ಭವಿಷ್ಯದ ಉಲ್ಲೇಖಕ್ಕಾಗಿ ಇಟ್ಟುಕೊಳ್ಳಬೇಕು.
ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು
ಅರ್ಜಿಯಲ್ಲಿ ನೀಡುವ ಎಲ್ಲ ಮಾಹಿತಿಗಳು ನಿಖರವಾಗಿರಬೇಕು. ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ. ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಸಕ್ರಿಯವಾಗಿರಬೇಕು. ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ ಅಪೂರ್ಣ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
KMF ಉದ್ಯೋಗಗಳ ಪ್ರಯೋಜನಗಳು
KMF ಅಡಿಯಲ್ಲಿ ಉದ್ಯೋಗ ಪಡೆಯುವ ಅಭ್ಯರ್ಥಿಗಳಿಗೆ ಉತ್ತಮ ವೇತನ, ಉದ್ಯೋಗ ಭದ್ರತೆ, ವಿವಿಧ ಭತ್ಯೆಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಪಾದೋನ್ನತಿ ಅವಕಾಶ ದೊರೆಯುತ್ತವೆ. ದೀರ್ಘಕಾಲಿನ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಈ ಸಂಸ್ಥೆಯ ಉದ್ಯೋಗಗಳು ಅತ್ಯುತ್ತಮ ಆಯ್ಕೆಯಾಗಿವೆ.
ಕೊನೆಯ ಮಾತು
KMF GUMUL Recruitment 2026 ಮೂಲಕ ಒಟ್ಟು 50 ಹುದ್ದೆಗಳು ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. SSLC, ITI, ಡಿಪ್ಲೋಮಾ, B, Com, BBA, BBM, B.Sc, B.Tech, M.Com ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಉತ್ತಮ ಅವಕಾಶವಾಗಿದೆ. ಸರ್ಕಾರಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ 27 ಜೂನ್ 2026ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯೂ ಉತ್ತರ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ.