Telegram Join My Telegram   WhatsApp Join My WhatsApp

ಕರ್ನಾಟಕ ಸರ್ಕಾರದಿಂದ ಆರ್ಥಿಕ ನೆರವು ಯೋಜನೆ : OBC ವರ್ಗದವರಿಗೆ ₹50,000 SC/ST ಫಲಾನುಭವಿಗಳಿಗೆ ₹25,000 ಸಹಾಯಧನ 

ಕರ್ನಾಟಕ ಸರ್ಕಾರದಿಂದ ಆರ್ಥಿಕ ನೆರವು ಯೋಜನೆ : OBC ವರ್ಗದವರಿಗೆ ₹50,000 SC/ST ಫಲಾನುಭವಿಗಳಿಗೆ ₹25,000 ಸಹಾಯಧನ

ಸ್ವಂತ ಉದ್ಯೋಗ ಆರಂಭಿಸಲು ಸುವರ್ಣ ಅವಕಾಶ 

ಇತ್ತೀಚಿನ ದಿನಗಳಲ್ಲಿ ಉದ್ಯೋಗ ಕೊರತೆ ಜೀವನ ನಿರ್ವಹಣೆ ಹೆಚ್ಚುತ್ತಿರುವ ವೆಚ್ಚ ಹಾಗೂ ಸ್ವಂತ ಉದ್ಯಮ ಆರಂಭಿಸಲು ಅಗತ್ಯವಿರುವ ಬಂಡವಾಳ ಕೊರತೆ ಅನೇಕ ಕುಟುಂಬಗಳಿಗೆ ದೊಡ್ಡ ಸವಾಲಾಗಿ  ಪರಿಣಮಿಸಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರಿಗೆ ಉದ್ಯೋಗವಕಾಶಗಳ ಕೊರತೆಯಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಇಂತಹ  ಪರಿಸ್ಥಿತಿಯಲ್ಲಿ ಕರ್ನಾಟಕ ಸರಕಾರ ವಿವಿಧ ಕಲ್ಯಾಣ ಕಾರ್ಯಕ್ರಮಗಳು ಮತ್ತು ಸ್ವಯಂ ಉದ್ಯೋಗ ಉತ್ತೇಜನ ಯೋಜನೆಗಳ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರಲು ಮುಂದಾಗಿದೆ. ಈ ಯೋಜನೆಗಳ ಪ್ರಮುಖ ಉದ್ದೇಶ ಜನರನ್ನು ಸರಕಾರದ ನೆರವಿನ ಮೇಲೆ ಅವಲಂಬಿತನಾಗಿರುಸುವುದಲ್ಲ. ಬದಲಾಗಿ ಸ್ವಾವಲಂಬಿ ಜೀವನದತ್ತ ಕೊಂಡೊಯ್ಯುವುದಾಗಿದೆ.

ರಾಜ್ಯ ಸರಕಾರದ ಆರ್ಥಿಕ ನೆರವು ಯೋಜನೆಯಡಿ ಅರ್ಹ OBC ವರ್ಗದ ಫಲಾನುಭವಿಗಳಿಗೆ ₹50,000 ವರೆಗೆ ಹಾಗೂ SC/ST ವರ್ಗದ ಫಲಾನುಭವಿಗಳಿಗೆ ₹25,000 ವರೆಗೆ ಸಹಾಯಧನ ನೀಡುವ ವ್ಯವಸ್ಥೆ ಜನರಲ್ಲಿ ಸಾಕಷ್ಟು ಆಸಕ್ತಿ ಮೂಡಿಸಿದೆ. ಈ ನೆರವು ಮೊತ್ತವನ್ನು ಬಳಸಿಕೊಂಡು ಸಣ್ಣ ವ್ಯಾಪಾರ ಸೇವಾ ಆಧಾರಿತ ಉದ್ಯಮ ಕೃಷಿ ಸಂಬಂಧಿತ ಚಟುವಟಿಕೆಗಳು ಹಾಗೂ ವಿವಿಧ ಕೌಶಲ್ಯ ಆಧಾರಿತ ವ್ಯಕ್ತಿ ವೃತ್ತಿಯನ್ನು ಆರಂಭಿಸಬಹುದಾಗಿದೆ. ಸರಕಾರದ ಈ ಕ್ರಮವು ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡುವುದರ ಜೊತೆಗೆ ರಾಜ್ಯದ ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗುವ ನಿರೀಕ್ಷೆ ಇದೆ.

ಈ ಯೋಜನೆಯು ಏಕೆ ಅಗತ್ಯವಾಗಿದೆ 

ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದಲ್ಲಿ ಜನಸಂಖ್ಯೆ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗ ಸೃಷ್ಟಿಯು ಪ್ರಮುಖ ಸಾವಲಾಗಿ ಪರಿಣಮಿಸಿದೆ. ಪ್ರತಿವರ್ಷ ಸಾವಿರಾರು ಯುವಕರು ಶಿಕ್ಷಣ ಪೂರ್ಣಗೊಳಿಸಿ ಉದ್ಯೋಗ ಮಾರುಕಟ್ಟೆ ಪ್ರವೇಶಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಸಿಗುವ ಸಾಧ್ಯತೆವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸ್ವಯಂ ಉದ್ಯೋಗ ಮತ್ತು ಸಣ್ಣ ಉದ್ಯಮ ಪ್ರಮುಖ ಪರ್ಯಾಯ ಮಾರ್ಗವಾಗಿ  ಬೆಳೆಯುತ್ತಿದೆ.

ಆದರೆ ಉದ್ಯಮ ಆರಂಭಿಸಲು ಬಂಡವಾಳದ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಅನೇಕ ಯುವಕರಿಗೆ ಉತ್ತಮ ವ್ಯವಹಾರ ಕಲ್ಪನೆಗಳಿದ್ದರೂ , ಹಣ ಕೊರತೆಯಿಂದ ಅವುಗಳನ್ನು  ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ. ಈ ರೀತಿಯ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಸಹಾಯ ಧನ ಯೋಜನೆಗಳು ಮಹತ್ವದ ಪಾತ್ರ ವಹಿಸುತ್ತದೆ. ಸರಕಾರದಿಂದ ದೊರೆಯುವ ಹಣಕಾಸಿನ ನೆರವು ಉದ್ಯಮ ಆರಂಭಿಸಲು ಪ್ರಾರಂಭಿಕ ಹಂತದಲ್ಲಿ ದೊಡ್ಡ ಆಧಾರವಾಗುತ್ತದೆ.

ಯೋಜನೆ ಪ್ರಮುಖ ಉದ್ದೇಶ 

ಈ ಯೋಜನೆ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದವರು ಜನರಿಗೆ ಸ್ವಂತ ಉದ್ಯೋಗದ ಅವಕಾಶವನ್ನು ಕಲ್ಪಿಸುವುದಾಗಿದೆ. ನಿರುದ್ಯೋಗವನ್ನು ಕಡಿಮೆ ಮಾಡುವುದರ ಜೊತೆಗೆ ಯುವಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಇದರ ಪ್ರಮುಖ ಗುರಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವ ಮೂಲಕ ನಗರಗಳಿಗೆ ವಲಸೆ ಹೋಗುವ ಪ್ರಮಾಣವನ್ನು ಕಡಿಮೆ ಮಾಡುವುದು ಕೂಡ ಯೋಜನೆ ಮತ್ತೊಂದು ಉದ್ದೇಶವಾಗಿದೆ.

ಮಹಿಳೆಯರ ಆರ್ಥಿಕ ಸಬಲೀಕರಣಕ್ಕೂ ಯೋಜನೆ ವಿಶೇಷ ಮಹತ್ವ ನೀಡುತ್ತದೆ. ಅನೇಕ ಮಹಿಳೆಯರು ಮನೆ ಆಧಾರಿತ ಉದ್ಯಮಗಳನ್ನು ಆರಂಭಿಸಲು ಮೂಲಕ ಕುಟುಂಬದ ಆದಾಯವನ್ನು ಹೆಚ್ಚಿಸಬಹುದು. ಸರ್ಕಾರ ನೆರವಿನಿಂದ ಆರಂಭವಾಗುವ ಸಣ್ಣ ಉದ್ಯಮ ಮುಂದಿನ ದಿನಗಳಲ್ಲಿ ದೊಡ್ಡ ಉದ್ಯಮನ್ನಾಗಿ ಬೆಲೆಯಲು ಸಾಧ್ಯವಾಗುತ್ತದೆ.

ಸಹಾಯಧನದ ಮೊತ್ತ ಮತ್ತು ಅದರ ಮಹತ್ವ 

ಯೋಜನೆಯಡಿ ನೀಡಲಾಗುವ ಸಹಾಯಧನವು ಫಲಾನುಭವಿಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. OBC ವರ್ಗದ ಅರ್ಹ ಫಲಾನುಭವಿಗಳಿಗೆ ₹50,000 ವರೆಗೆ ಹಾಗೂ SC/ST ವರ್ಗದವರಿಗೆ ₹25,000 ವರೆಗೆ ನೆರವು ದೊರೆಯಬಹುದು. ಈ ಮೊತ್ತವು ಸಣ್ಣ ವ್ಯವಹಾರ ವ್ಯಾಪಾರ ಅಥವಾ ಸೇವಾ ಚಟುವಟಿಕೆ ಆರಂಭಿಸಲು ಸಹಕಾರಿಯಾಗಿದೆ.

ಸಹಾಯಧನದ  ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ವ್ಯವಸ್ಥೆಯಿಂದ ಪಾರದರ್ಶಕ ಅತಿ ಹೆಚ್ಚಾಗುತ್ತದೆ. ಮಧ್ಯವರ್ತಿಗಳ ಹತ್ತಕ್ಷೇಪ ಕಡಿಮೆಯಾಗುವುದರಿಂದ ಫಲಾನುಭವಿಗಳಿಗೆ ನೇರ ಲಾಭ ತಲುಪುತ್ತದೆ. ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕ ಹಣದ ಬಳಕೆ ಮತ್ತು ವಿತರಣೆಯ ಮೇಲ್ವಿಚಾರಣೆಗೂ ಸುಲಭವಾಗುತ್ತದೆ.

ಈ ಯೋಜನೆಯಿಂದ ಯಾರಿಗೆ ಲಾಭ ?

ಸಣ್ಣ ವ್ಯಾಪಾರ ಆರಂಭಿಸಲು ಉತ್ತಮ ಅವಕಾಶ, ಸೇವಾ ಆಧಾರಿತ ಉದ್ಯಮಗಳಿಗೆ ನೆರವು, ಕೃಷಿ ಮತ್ತು ಪಸ್ಸಂಗೋಪನ ಚಟುವಟಿಕೆಗಳಿಗೆ ಉತ್ತೇಜನ, ಕೌಶಲ್ಯ ಆಧರಿತ ವೃತ್ತಿಗಳಿಗೆ ಹೊಸ ಚೈತನ್ಯ, ಮಹಿಳಾ ಸಬಲೀಕರಣಕ್ಕೆ ಮಹತ್ವದ ಹೆಜ್ಜೆಯಾಗಿದೆ.

ಅರ್ಹತ ಮಾನದಂಡಗಳು 

ಯೋಜನೆಯ ಪ್ರಯೋಜನ ಪಡೆಯಲು ಕೆಲವು ಅರ್ಹತೆ  ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಅರ್ಜಿದಾರರು ಕರ್ನಾಟಕದ ಖಾಯಂ  ನಿವಾಸಿ ಆಗಿರಬೇಕು. ಸಾಮಾನ್ಯವಾಗಿ 18ರಿಂದ 55 ವರ್ಷದೊಳಗಿರಬೇಕು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ.

SC/ST ವರ್ಗದ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ವಯಂ ಉದ್ಯೋಗಕ್ಕಾಗಿ ಸರಳ ಯೋಜನೆ ವರದಿ ಅಥವಾ ಉದ್ಯಮ ಯೋಜನೆಯ ವಿವರಗಳನ್ನು ನೀಡಬೇಕಾಗುತ್ತದೆ.

ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವಾಗ ಸರಿಯಾದ ದಾಖಲೆಗಳನ್ನು ಒದಗಿಸುವುದು ಅತ್ಯಂತ ಮುಖ್ಯವಾಗಿದೆ ಆಧಾರ್ ಕಾರ್ಡ್, ವಾಸಸ್ಥಳ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ಸ್ಪೋರ್ಟ್ ಗಾತ್ರದ ಫೋಟೋ, ಮೊಬೈಲ್ ಸಂಖ್ಯೆ ಸಾಮಾನ್ಯವಾಗಿ ಅಗತ್ಯವಾಗಬಹುದು.

SC/ST ವರ್ಗದ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಬಹುದು ಕೆಲವು ಯೋಜನೆಗಳಲ್ಲಿ ಉದ್ಯಮ ಯೋಜನಾ ವರದಿ ಅಥವಾ ತರಬೇತಿ ಪ್ರಮಾಣ ಪತ್ರಗಳು ಕೇಳಬಹುದು.

ಡಿಜಿಟಲ್ ವ್ಯವಸ್ಥೆಯ ಪ್ರಯೋಜನಗಳು 

ಸರ್ಕಾರ ಬಹುತೇಕ ಸೇವಗಳು ಈ ಡಿಜಿಟಲ್ ಮಾದರಿಯಲ್ಲಿ ಲಭ್ಯವಾಗುತ್ತಿವೆ. ಆನ್ಲೈನ್ ಅರ್ಜಿ ವ್ಯವಸ್ಥೆಯಿಂದ ಸಮಯ ಮತ್ತು ಹಣ ಎರಡು ಉಳಿತಾಯವಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ಅದರ ಸ್ಥಿತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.

ಡಿಜಿಟಲ್ ವ್ಯವಸ್ಥೆ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಪಾರದರ್ಶಕತೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಮಾಡುವುದರಿಂದ ಯಾವುದೇ ರೀತಿಯ ಅವ್ಯವಹಾರಕ್ಕೆ ಅವಕಾಶ ಕಡಿಮೆಯಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ 

ಕರ್ನಾಟಕ ಸರ್ಕಾರದ ಅಧಿಕೃತ ನೆರವು ಯೋಜನೆಯ ಪ್ರಯೋಜನ ಪಡೆಯಲು ಅಭ್ಯರ್ಥಿಗಳು ನಿಗದಿತ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆ ಸರಳವಾಗಿದ್ದು, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಸಲ್ಲಿಸಿದರೆ ಯೋಜನೆಯ ಲಾಭ ಪಡೆಯಬಹುದು.

ಹಂತ 1: ಯೋಜನೆ ಮಾಹಿತಿ ಪರಿಶೀಲಿಸಿ

ಮೊದಲು ಸಂಬಂಧಿಸಿದ ಇಲಾಖೆ, ನಿಗಮ  ಅಥವಾ ಅಧಿಕೃತ  ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಯೋಜನೆ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಬೇಕು. ಅರ್ಹತೆ, ಅಗತ್ಯ ದಾಖಲೆಗಳು ಹಾಗೂ ಕೊನೆಯ ದಿನಾಂಕದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಮುಖ್ಯ.

ಹಂತ 2 : ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ 

ಅರ್ಜಿಗೆ ಬೇಕಾಗುವ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳಬೇಕು

  •  ಆಧಾರ್ ಕಾರ್ಡ್
  •  ವಾಸಸ್ಥಳ ಪ್ರಮಾಣ ಪತ್ರ
  •  ಆದಾಯ ಪ್ರಮಾಣ ಪತ್ರ
  •  ಜಾತಿ ಪ್ರಮಾಣ ಪತ್ರ (SC/ST ಅಭ್ಯರ್ಥಿಗಳಿಗೆ )
  •  ಬ್ಯಾಂಕ್ ಪಾಸ್ ಬುಕ್
  •  ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
  •  ಮೊಬೈಲ್ ಸಂಖ್ಯೆ
  •  ಉದ್ಯೋಗ ಯೋಜನೆ ವರದಿ ( ಅಗತ್ಯವಿದ್ದರೆ )

ಹಂತ 3 : ಅರ್ಜಿ ನಮೂನೆ ಪಡೆಯಿರಿ 

ಅಧಿಕೃತ ವೆಬ್ಸೈಟ್ ಅಥವಾ ಸಂಬಂಧಿತ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆಯಬೇಕು. ಕೆಲವು ಯೋಜನೆಗಳಲ್ಲಿ ಆನ್ಲೈನ್ ಅರ್ಜಿ ಸಲ್ಲಿ ಸೌಲಭ್ಯವಿದ್ದರೆ ಕೆಲವು ಯೋಜನೆಗಳಲ್ಲಿ ಆಫ್ ಲೈನ್ ಅರ್ಜಿ ವ್ಯವಸ್ಥೆ ಇರುತ್ತದೆ.

ಹಂತ 4 : ಅರ್ಜಿ ನಮೂನೆ ಭರ್ತಿ ಮಾಡಿ

ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ ಮತ್ತು ಉದ್ಯಮ ವಿವರಗಳನ್ನು ನಿಖರವಾಗಿ ನಮೂದಿಸಬೇಕು.

ಹಂತ 5 : ದಾಖಲೆಯನ್ನು ಲಗತ್ತಿಸಿ

ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಬೇಕು. ದಾಖಲೆಗಳಲ್ಲಿ ಯಾವುದೇ ತಪ್ಪು ಅಥವಾ ಆ ಸ್ಪಷ್ಟ ಮಾಹಿತಿ ಇರದಂತೆ ಗಮನಿಸಬೇಕು.

ಹಂತ 6 : ಅರ್ಜಿ ಸಲ್ಲಿಸಿ

ಪೂರ್ಣಗೊಂಡ ಅರ್ಜಿಯನ್ನು ಸಂಬಂಧಿತ ಕಚೇರಿ ತಾಲೂಕು ಕಚೇರಿ ಜಿಲ್ಲಾ ನಿಗಮ ಕಚೇರಿ ಅಥವಾ ಅಧಿಕೃತ ಆನ್ಲೈನ್ ಪೋರ್ಟಲ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ರಶೀದಿ ಅಥವಾ ಅರ್ಜಿ ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.

ಹಂತ 7 : ಅರ್ಜಿ ಪರಿಶೀಲನೆ 

ಅರ್ಜಿಯನ್ನು ಅಧಿಕಾರಿಗಳು ಪರಿಶೀಲಿಸಿ ಅರ್ಹತೆಯನ್ನು ದೃಢಕರಿಸುತ್ತಾರೆ ಅಗತ್ಯವಿದ್ದರೆ ದಾಖಲೆಗಳ ಪರಿಶೀಲನೆ ಅಥವಾ ಸ್ಥಳ ಪರಿಶೀಲನೆ ನಡೆಯಿಸಬಹುದು.

ಹಂತ 8 : ಸಹಾಯಧನ ಬಿಡುಗಡೆ 

ಅರ್ಜಿದಾರರು ಅರ್ಹರಾಗಿದ್ದರೆ, ಸರಕಾರ ನಿಯಮಗಳ  ಪ್ರಕಾರ ಅನುಭೋಧನೆ ನೀಡಲಾಗುತ್ತದೆ ನಂತರ ಸಹಾಯಧನದ ಮೊತ್ತವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಕೊನೆಯ ಮಾತು 

ಕರ್ನಾಟಕ ಸರ್ಕಾರದ ಆರ್ಥಿಕ ನೆರವು ಯೋಜನೆಯು OBC, SC/ST ವರ್ಗಗಳ ಜನರಿಗೆ ಸ್ವಾವಲಂಬಿ ಜೀವನದತ್ತ ಸಾಗರದಲ್ಲಿ ಉತ್ತಮ ಅವಕಾಶ ಒದಗಿಸುತ್ತದೆ. OBC ವರ್ಗದವರಿಗೆ ₹50,000 ಹಾಗೂ SC/ST ಫಲಾನುಭವಿಗಳಿಗೆ ₹25,000 ವರೆಗೆ ದೊರೆಯುವ ಸಹಾಯಧನವು ಸಣ್ಣ ಉದ್ಯಮ, ಕೃಷಿ ಚಟುವಟಿಕೆ, ಸೇವಾ ವೃತ್ತಿ ಹಾಗೂ ವಿವಿಧ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಬಲವಾದ ಆಧಾರವಾಗಲಿದೆ. ಸರಿಯಾದ ಯೋಜನೆ ಪರಿಶ್ರಮ ಮತ್ತು ಸರಕಾರದ ನೆರವನ್ನು ಸಮರ್ಪಕವಾಗಿ ಬಳಸಿಕೊಂಡರೆ ಸಾವಿರಾರು ಯುವಕರು ಮತ್ತು ಕುಟುಂಬಗಳು ಆರ್ಥಿಕವಾಗಿ ಸದೃಢವಾಗಬಹುದು. ಈ ಯೋಜನೆಯು ಕೆಲವು ಹಣಕಾಸಿನ ನೆರವಿನ ಕಾರ್ಯಕ್ರಮವವಲ್ಲ, ಬದಲಾಗಿ ಉದ್ಯಮಶೀಲತೆ, ಸ್ವಾವಲಂಬನೆ ಹಾಗೂ ಸಮಗ್ರ ಅಭಿವೃದ್ಧಿಯತ್ತ ಕರೆದುಕೊಳ್ಳುವ ಮಹತ್ವದ ಹೆಜ್ಜೆಯಾಗಿದೆ.

 

 

Leave a Comment