KP SRPC Recruitment 2026:2,314 ಸ್ಪೆಷಲ್ ರಿವರ್ಸ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ
ಪರಿಚಯ :
KP SRPC Recruitment 2026 ಅಧಿಸೂಚನೆ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಮಹತ್ವದ ಅವಕಾಶವಾಗಿದೆ. ಕರ್ನಾಟಕ ಪೊಲೀಸ್ ಇಲಾಖೆಯ ವಿವಿಧ ವಿಷಯ ಘಟಕಗಳಲ್ಲಿ ಖಾಲಿ ಇರುವ 2,314 Special Reserve police Constable (SRPC) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಹೊಂದಿರುವ ಹಾಗೂ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರ ವಿವಿಧ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸುತ್ತಿದ್ದು, ಅದರ ಭಾಗವಾಗಿ ಈ KP SRPC Recruitment 2026 ಪ್ರಕಟಿಸಲಾಗಿದೆ. ಉತ್ತಮ ಸಂಬಳ, ಉದ್ಯೋಗ ಭದ್ರತೆ, ಪದೋನ್ನತಿ ಅವಕಾಶಗಳು ಹಾಗೂ ಸಮಾಜ ಸೇವೆ ಮಾಡುವ ಅವಕಾಶವನ್ನು ಈ ಹುದ್ದೆ ಒದಗಿಸುತ್ತವೆ.
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳು ಲಿಖಿತ ಪರೀಕ್ಷೆ, ದೈಹಿಕ ಗುಣಮಟ್ಟ ಪರೀಕ್ಷೆ, ದೈಹಿಕ ಸಹಿಷ್ಣತೆ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಪರೀಕ್ಷೆ ಮತ್ತು ದೈಹಿಕ ತರಬೇತಿಗೆ ಸಿದ್ಧತೆ ಆರಂಭಿಸುವುದು ಉತ್ತಮ.
ನೇಮಕತಿಯ ಮುಖ್ಯಾಂಶಗಳು
ವಿವರ ಮಾಹಿತಿ
ನೇಮಕಾತಿ ಸಂಸ್ಥೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)
ಇಲಾಖೆ ಕರ್ನಾಟಕ ಪೊಲೀಸ್ ಇಲಾಖೆ
ಹುದ್ದೆ Special Reserve police Constable (SRPC)
ಒಟ್ಟು ಹುದ್ದೆಗಳು 2,314
ಅರ್ಜಿ ವಿಧಾನ ಆನ್ಲೈನ್
ವಿದ್ಯಾರ್ಹತೆ ದ್ವಿತೀಯ ಪಿಯುಸಿ
ವೇತನ ₹37,500 ರಿಂದ ₹76,100
ಆಯ್ಕೆ ವಿಧಾನ ಲಿಖಿತ ಪರೀಕ್ಷೆ PST, PET, ವೈದ್ಯಕೀಯ ಪರೀಕ್ಷೆ
ಉದ್ಯೋಗ ಸ್ಥಳ ಕರ್ನಾಟಕ
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ನೇಮಕಾತಿಯ ಮಹತ್ವ
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆಯುವುದು ಅನೇಕ ಯುವಕರ ಕನಸಾಗಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಜೊತೆಗೆ ಉತ್ತಮ ವೇತನ, ಸರ್ಕಾರಿ ಸೌಲಭ್ಯಗಳು ಹಾಗೂ ಭವಿಷ್ಯದಲ್ಲಿ ಆದೋನ್ನತಿ ಪಡೆಯುವ ಅವಕಾಶ ಈ ಉದ್ಯೋಗದ ಪ್ರಮುಖ ಆಕರ್ಷಣೆಯಾಗಿದೆ.
ಇದರ ಮೂಲಕ ನೇಮಕವಾಗುವ ಅಭ್ಯರ್ಥಿಗಳು ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ವಿಶೇಷ ಭದ್ರತಾ ಘಟಕಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆಯುತ್ತಾರೆ. ಪೊಲೀಸ್ ಇಲಾಖೆ ತರಬೇತಿ ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳು ಶಿಸ್ತು ನಾಯಕತ್ವ, ದೈಹಿಕ ಸಾಮರ್ಥ್ಯ ಮತ್ತು ಸಾರ್ವಜನಿಕ ಸೇವೆಯಲ್ಲಿ ಅನುಭವವನ್ನು ಪಡೆಯುತ್ತಾರೆ.
ಈ ನೇಮಕಾತಿ ಕೇವಲ ಉದ್ಯೋಗವಷ್ಟೇ ಅಲ್ಲ; ಸಮಾಜದ ಸುರಕ್ಷತೆ ಮತ್ತು ಸಾರ್ವಜನಿಕ ಸೇವೆಗೆ ತಮ್ಮ ಕೊಡುಗೆ ನೀಡುವ ಬಯಸುವವರಿಗೆ ಗೌರವಯುತ ವೃತ್ತಿ ಜೀವನವನ್ನು ಒದಗಿಸುತ್ತದೆ.
ಯಾವ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ?
ಪ್ರಮುಖ ವಿಭಾಗಗಳು :
- ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP)
- ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ( KSISF)
- ಇಂಡಿಯಾ ರಿವರ್ಸ್ ಬೆಟಾಲಿಯನ್ (IRB)
ಈ ಘಟಕಗಳು ರಾಜ್ಯ ವಿವಿಧ ಭಾಗಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಕೈಗಾರಿಕಾ ಪ್ರದೇಶಗಳಿಗೆ ಭದ್ರತೆ ಒದಗಿಸುವುದು, ವಿಶೇಷ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸುವುದು ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರಿಗೆ ನೆರವು ನೀಡುವ ಪ್ರಮುಖ ಜವಾಬ್ದಾರಿಯನ್ನು ಹೊಂದಿದೆ .
ಹುದ್ದೆಗಳ ಹಂಚಿಕೆ
ಒಟ್ಟು 2,314 ಹುದ್ದೆಗಳು ರಾಜ್ಯ ಸರ್ಕಾರದ ನಿಯಮನುಸಾರ ವಿವಿಧ ವೃಂದ ಗಳಿಗೆ ಹಂಚಿಕೆ ಮಾಡಲಾಗಿದೆ.
ವೃಂದ ಹುದ್ದೆಗಳು
ಉಳಿಕೆ ಮೂಲ ವೃಂದ 1,455
ಕಲ್ಯಾಣ ಕರ್ನಾಟಕ ವೃಂದ 859
ಒಟ್ಟು 2,314
ಪ್ರತಿ ವರ್ಗಕ್ಕೂ ಸರ್ಕಾರದ ಮೀಸಲಾತಿ ನಿಯಮಗಳನ್ನು ಅನುಸರಿಸಿ ಹುದ್ದೆಗಳ ಹಂಚಿಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಸಂಬಂಧಿಸಿದ ಮೀಸಲಾತಿ ವಿವರಗಳನ್ನು ಪರಿಶೀಲಿಸಬೇಕು.
ವಿದ್ಯಾರ್ಹತೆ
KP SRPC Recruitment 2026 ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಥಿ ಹೊಂದಿರಬೇಕು.
- ದ್ವಿತೀಯ ಪಿಯುಸಿ (12ನೇ ತರಗತಿ)
- ಅಥವಾ ಸರ್ಕಾರ ಮಾನ್ಯತೆ ಪಡೆದ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಅರ್ಜಿ ಸಲ್ಲಿಸುವ ದಿನಾಂಕದೊಳಗೆ ವಿಧ್ಯಾರ್ಥಿ ಪೂರ್ಣಗೊಂಡಿರಬೇಕು.
- ಫಲಿತಾಂಶ ಇನ್ನೂ ಪ್ರಕಟವಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಪರಿಶೀಲನೆ ಸಂದರ್ಭದಲ್ಲಿ ಸಲ್ಲಿಸಬೇಕಾಗುತ್ತದೆ. ಆದ್ದರಿಂದ ಎಲ್ಲಾ ಪ್ರಮಾಣ ಪತ್ರಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅಗತ್ಯ.
ವಯೋಮಿತಿ
ಈ ನೇಮಕಾತಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನಿಗದಿತ ವಯೋಮಿತಿಯನ್ನು ಪೂರೈಸಬೇಕು.
- ಸಾಮಾನ್ಯ ವರ್ಗದವರಿಗೆ 18 ರಿಂದ 33 ವರ್ಷ
- SC/ST/OBC ವರಿಗೆ ಸರ್ಕಾರದ ನಿಯಮನುಸಾರ ವಯೋಮಿತಿ ಸಡಿಲಿಕೆ (35 ವರ್ಷ ಅಥವಾ ಅಧಿಸೂಚನೆಯ ಪ್ರಕಟ)
ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯವಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ವಯೋಮಿತಿ ವಿವರಗಳನ್ನು ಪರಿಶೀಲಿಸುವುದು ಉತ್ತಮ.
ಆಯ್ಕೆ ಪ್ರಕ್ರಿಯೆ
KP SRPC Recruitment 2026 ನಲ್ಲಿ ಅಭ್ಯರ್ಥಿಗಳನ್ನು ಹಲವು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆ ದೈಹಿಕ ಪರೀಕ್ಷೆಯಲ್ಲೂ ಅರ್ಹತೆ ಪಡೆಯುವುದು ಕಡ್ಡಾಯವಾಗಿದೆ. ಅಂತಿಮವಾಗಿ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಪ್ರಮುಖ ಹಂತಗಳು :
- ಲಿಖಿತ ಪರೀಕ್ಷೆ
- ದೈಹಿಕ ಗುಣಮಟ್ಟ ಪರೀಕ್ಷೆ
- ದೈಹಿಕ ಸಹಿಷ್ಣತೆ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
- ದಾಖಲೆಗಳ ಪರಿಶೀಲನೆ
ಪ್ರತಿಯೊಂದು ಹಂತದಲ್ಲೂ ಅರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತಕ್ಕೆ ಅವಕಾಶ ಪಡೆಯುತ್ತಾರೆ.
1. ಲಿಖಿತ ಪರೀಕ್ಷೆ
ಲಿಖಿತ ಪರೀಕ್ಷೆ ಆಯ್ಕೆ ಪ್ರಕ್ರಿಯೆ ಮೊದಲ ಹಂತ ಹಾಗೂ ಅತ್ಯಂತ ಪ್ರಮುಖ ಹಂತವಾಗಿದೆ.
- ಪರೀಕ್ಷೆ ವಿಧಾನ : OMR ಆಧಾರಿತ
- ಪ್ರಶ್ನೆಗಳ ಪ್ರಕಾರ : ಬಹು ಆಯ್ಕೆ ಪ್ರಶ್ನೆಗಳು
- ಒಟ್ಟು ಅಂಕಗಳು : 100
- ನೆಗೆಟಿವ್ ಮಾರ್ಕಿಂಗ್ : ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತ
2. ದೈಹಿಕ ಗುಣಮಟ್ಟ ಪರೀಕ್ಷೆ (PST)
ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ದೈಹಿಕ ಗುಣಮಟ್ಟ ಪರೀಕ್ಷೆಗೆ ಕರೆಯಲಾಗುತ್ತದೆ.
- ಎತ್ತರ
- ಎದೆ ಸುತ್ತಳತೆ
- ದೈಹಿಕ ಆರೋಗ್ಯ
- ಸರ್ಕಾರ ನಿಗದಿಪಡಿಸಿರುವ ದೈಹಿಕ ಮಾನದಂಡಗಳು
ಅಭ್ಯರ್ಥಿಗಲು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ದೈಹಿಕ ಮಾನದಂಡಗಳನ್ನು ಪರಿಶೀಲಿಸಬೇಕು.
3. ದೈಹಿಕ ಸಹಿಷ್ಣತೆ ಪರೀಕ್ಷೆ (PET)
PST ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು PET ಪರೀಕ್ಷೆಯಲ್ಲಿ ಭಾಗವಹಿಸಬೇಕು.
ಈ ಹಂತದಲ್ಲಿ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ.
- ಓಟ
- ಸಹಿಷ್ಣತೆ ಪರೀಕ್ಷೆ
- ದೈಹಿಕ ಸಾಮರ್ಥ್ಯ ಮೌಲ್ಯಮಾಪನ
ಈ ಪರೀಕ್ಷೆಗೆ ಸಿದ್ಧರಾಗಲು ಅಭ್ಯರ್ಥಿಗಳು ಪ್ರತಿ ದಿನ ಓಟ, ವ್ಯಾಯಾಮ ಮತ್ತು ಫಿಟ್ನೆಸ್ ತರಬೇತಿ ಮಾಡುವುದು ಉತ್ತಮ.
4. ವೈದ್ಯಕೀಯ ಪರೀಕ್ಷೆ
PET ನಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
- ದೈಹಿಕ ಆರೋಗ್ಯ
- ದೃಷ್ಟಿ
- ಶ್ರವಣ ಸಾಮರ್ಥ್ಯ
- ವೈದ್ಯಕೀಯ ಅರ್ಹತೆ
ಇವುಗಳನ್ನು ಪರಿಶೀಲಿಸಲಾಗುತ್ತದೆ. ವೈದ್ಯಕೀಯವಾಗಿ ಅರ್ಹರಾದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.
5. ದಾಖಲೆಗಳ ಪರಿಶೀಲನೆ
ಆಯ್ಕೆ ಅಂತಿಮ ಹಂತದಲ್ಲಿ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಸಲ್ಲಿಸಬೇಕು.
- SSLC ಅಂಕಪಟ್ಟಿ
- PUC ಅಂಕಪಟ್ಟಿ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ
- ಸಹಿ
ದಾಖಲೆಗಳಲ್ಲಿ ಯಾವುದೇ ತಪ್ಪು ಮಾಹಿತಿ ಕಂಡು ಬಂದರೆ ಅಭ್ಯರ್ಥಿಯ ಆಯ್ಕೆ ರದ್ದಾಗುವ ಸಾಧ್ಯತೆ ಇದೆ.
ವೇತನ
ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ವೇತನ ಶ್ರೇಣಿಯಂತೆ ಉತ್ತಮ ಸಂಬಳ ನೀಡಲಾಗುತ್ತದೆ.
₹37,500 ರಿಂದ ₹76,100 ಪ್ರತಿ ತಿಂಗಳು
ಇದರ ಜೊತೆಗೆ ಸರ್ಕಾರದ ನಿಯಮನುಸಾರ ವಿವಿಧ ಭತ್ಯೆಗಳು ಮತ್ತು ಸೌಲಭ್ಯಗಳು ದೊರೆಯುತ್ತದೆ.
ಸರ್ಕಾರಿ ಉದ್ಯೋಗವಾಗಿರುವುದರಿಂದ ದೀರ್ಘಾವಧಿಯ ವೃತ್ತಿಭದ್ರತೆ ಮತ್ತು ಬೆಳವಣಿಗೆಯ ಅವಕಾಶಗಳು ಲಭ್ಯವಾಗುತ್ತದೆ.
ಪ್ರಮುಖ ದಿನಾಂಕಗಳು
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಪ್ರಮುಖ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಅರ್ಜಿ ಆರಂಭ : 13 ಜುಲೈ 2026
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 10 ಆಗಸ್ಟ್ 2026
ಶುಲ್ಕ ಪಾವತಿ ಕೊನೆಯ ದಿನಾಂಕ : 11 ಆಗಸ್ಟ್ 2026
ಲಿಖಿತ ಪರೀಕ್ಷೆ : 20 ಸೆಪ್ಟೆಂಬರ್ 2026
ಕೊನೆಯ ದಿನಾಂಕದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.
ಅರ್ಜಿ ಶುಲ್ಕ
ವಿಭಿನ್ನ ವರ್ಗಗಳಿಗೆ ವಿಭಿನ್ನ ಶುಲ್ಕ ನಿಗದಿಪಡಿಸಲಾಗಿದೆ.
ಸಾಮಾನ್ಯ/OBC(2A, 2B, 3A, 3B), : ₹ 750
SC/ST/ ಪ್ರವರ್ಗ-1 : ₹500
ಶುಲ್ಕವನ್ನು ಆನ್ಲೈನ ಮೂಲಕವೇ ಪಾವತಿಸಬೇಕು. ಪಾವತಿ ಯಶಸ್ವಿಯಾದ ನಂತರ ಅದರ ರಸೀದಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವುದು ಉತ್ತಮ.
ಅರ್ಜಿ ಸಲ್ಲಿಸುವ ವಿಧಾನ
ಈ ನೇಮಕಾತಿ ಅರ್ಜಿಯನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕ ಸಲ್ಲಿಸಬೇಕು.
- ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
- ಹೊಸ ನೋಂದಣಿ
- ಲಾಗಿನ್ ಮಾಡಿ
- ವೈಯಕ್ತಿಕ ಮಾಹಿತಿ
- ವಿದ್ಯಾರ್ಹತೆ ವಿವರ
- ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿಸಿ
- ಅರ್ಜಿಯನ್ನು ಪರಿಶೀಲಿಸಿ
- ಅಂತಿಮ ಸಲ್ಲಿಕೆ
- ಪ್ರಿಂಟ್ ಔಟ್
ಸಮರೋಪ
KP SRPC Recruitment 2026 ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ಪಿಯುಸಿ ಅಥವಾ ಪಸ್ತಮಾನ ವಿದ್ಯಾರ್ಥಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ನಿಗದಿತ ದಿನಾಂಕ ದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಎರಡಕ್ಕೂ ಸಮಾನವಾಗಿ ಸಿದ್ಧತೆ ನಡೆಸಿದರೆ ಯಶಸ್ಸಿನ ಸಾಧ್ಯತೆ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಯೋಜಿತ ಅಧ್ಯಯನ ಹಾಗೂ ನಿಯಮಿತ ದೈಹಿಕ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಈ ಅವಕಾಶವನ್ನು ಸದುಪಯೋಗಿಸಿಕೊಂಡು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಗೌರವಯುತ ವೃತ್ತಿ ಜೀವನವನ್ನು ಆರಂಭಿಸಲು ಈಗಿನಿಂದ ಸಿದ್ಧತೆ ಆರಂಭಿಸಿ.