Telegram Join My Telegram WhatsApp Join My WhatsApp

ಸ್ವಂತ ಮನೆ ಕಟ್ಟಲು ಸರ್ಕಾರದಿಂದ 2 ಲಕ್ಷ ಸಹಾಯಧನ – ಆಶ್ರಯ ಬಸವ ವಸತಿ ಯೋಜನೆ 2026  ಸಂಪೂರ್ಣ ಮಾಹಿತಿ 

ಸ್ವಂತ ಮನೆ ಕಟ್ಟಲು ಸರ್ಕಾರದಿಂದ 2 ಲಕ್ಷ ಸಹಾಯಧನ – ಆಶ್ರಯ ಬಸವ ವಸತಿ ಯೋಜನೆ 2026  ಸಂಪೂರ್ಣ ಮಾಹಿತಿ 

ಪರಿಚಯ 

ಕರ್ನಾಟಕದಲ್ಲಿ ಸ್ವಂತ ಮನೆ ಹೊಂದುವುದು  ಅನೇಕ ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬಗಳ ಬಹುಕಾಲದ ಕನಸಾಗಿದೆ.  ದಿನದಿಂದ ದಿನಕ್ಕೆ ಬಾಡಿಗೆ ಮನೆಗಳ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆ ಸಾಮಾನ್ಯ ಜನರಿಗೆ ಮನೆ ಕಟ್ಟುವುದು ದೊಡ್ಡ ಸವಳಾಗಿ ಪರಿಣಮಿಸಿದೆ.  ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರಗಳ ಹೊರವಲಯಗಳಲ್ಲಿ ವಾಸಿಸುವ ಅನೇಕ ಕುಟುಂಬಗಳು ಇನ್ನೂ ಶಾಶ್ವತ ಮನೆ ಸೌಲಭ್ಯವಿಲ್ಲದೆ ಜೀವನ ಸಾಗಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರದಿಂದ ಜಾರಿಯಾಗಿರುವ ಆಶ್ರಯ ಬಸವ ವಸತಿ ಯೋಜನೆ 2026  ಬಡ ಕುಟುಂಬಗಳಿಗೆ ಹೊಸ ಆಶಾಕಿರಣವಾಗಿ ಪರಿಣಮಿಸಿದೆ. ಮನೆ ಇಲ್ಲದ ಕುಟುಂಬಗಳಿಗೆ ಸರ್ಕಾರದಿಂದ ನೇರ ಆರ್ಥಿಕ ನೆರವು ನೀಡಿ ಸ್ವಂತ  ಮನೆ ನಿರ್ಮಿಸಲು ಸಹಾಯ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಅನುಷ್ಠಾನಗೊಳ್ಳುತ್ತಿರುವ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ  ₹ 1.20 ಲಕ್ಷದಿಂದ ₹ 2 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ. ಇದರ ಜೊತೆಗೆ ಬ್ಯಾಂಕ್ ಸಾಲ ಸೌಲಭ್ಯ,  ಮೂಲಭೂತ ಸೌಕರ್ಯಗಳು ಹಾಗೂ ಮಹಿಳೆಯರಿಗೆ ವಿಶೇಷ ಆದ್ಯತೆ ಕೂಡ ದೊರೆಯುತ್ತಿದೆ.

ಹಿಂದಿನ ಕಾಲದಲ್ಲಿ ಒಂದು ಕುಟುಂಬಕ್ಕೆ ಆಹಾರ ಶಿಕ್ಷಣ ಮತ್ತು ಆರೋಗ್ಯದ ಜೊತೆಗೆ ಸುರಕ್ಷಿತ ವಸತಿ ಅತ್ಯಂತ ಪ್ರಮುಖ ಅಗತ್ಯವಾಗಿದೆ. ಆದರೆ ಆರ್ಥಿಕ ಸಮಸ್ಯೆಗಳ ಕಾರಣದಿಂದ ಅನೇಕ ಕುಟುಂಬಗಳು ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ತಿಂಗಳ ಸಂಬಳದ ಬಹುಪಾಲು ಬಾಡಿಗೆ ಹೋಗುವುದರಿಂದ ಉಳಿತಾಯ ಸಾಧ್ಯವಾಗುವುದಿಲ್ಲ. ಕೆಲವು ಕುಟುಂಬಗಳು ಸಣ್ಣ ಗುಡಿಸಲುಗಳಲ್ಲಿ ಅಥವಾ ಅಪಾಯಕರ ಪರಿಸ್ಥಿತಿಯ ಮನೆಗಳಲ್ಲಿ ವಾಸಿಸುತ್ತಿದ್ದು, ಮನೆ ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ  ಜನರಿಗೆ ಸರ್ಕಾರ ವಸತಿ ಯೋಜನೆಗಳು ನಿಜವಾದ ಸಹಾಯಕವಾಗುತ್ತದೆ.

ಆಶ್ರಯ ಬಸವ ವಸತಿ ಯೋಜನೆ ಎಂದರೇನು ? 

ಆಶ್ರಯ ಬಸವಿ ವಸತಿ ಯೋಜನೆ  ಕರ್ನಾಟಕ ಸರ್ಕಾರದ ಪ್ರಮುಖ ಗೃಹ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಮೂಲಕ ಬಡವರು, ಕೂಲಿ ಕಾರ್ಮಿಕರು, ವಿಧವೆಯರು ಅಂಗವಿಕಲರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ನೆರವು ನೀಡಲಾಗುತ್ತದೆ. ಮನೆ ನಿರ್ಮಾಣಕ್ಕೆ ನೇರ ಹಣಕಾಸು ಸಹಾಯ,  ಬ್ಯಾಂಕು ಸಾಲ ಸೌಲಭ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಯೋಜನೆ ಸಹಾಯ ಮಾಡುತ್ತದೆ.

ಆಶ್ರಯ ಬಸವ ವಸತಿ ಯೋಜನೆ ಮತ್ತೊಂದು ವಿಶೇಷತೆ ಎಂದರೆ ಸಾಮಾಜಿಕ ಸಮಾನತೆ,  ಸಮಾಜದ ಹಿಂದುಳಿದ ವರ್ಗಗಳಿಗೆ ಉತ್ತಮ ವಸತಿ ಸೌಲಭ್ಯ ಒದಗಿಸುವ  ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮನೆ  ಇದ್ದರೆ ಕುಟುಂಬದ ಗೌರವ ಹೆಚ್ಚುತ್ತದೆ. ಮಕ್ಕಳು ಉತ್ತಮ ವಾತಾವರಣದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ.  ಆಶ್ರಯ ಬಸವ ವಸತಿ ಯೋಜನೆ 2026 ರಾಜ್ಯದ ಸಾವಿರಾರು ಬಡ ಕುಟುಂಬಗಳಿಗೆ ದೊಡ್ಡ ನೆರವಾಗಲಿದೆ. ಸ್ವಂತ ಮನೆ ಕನಸು ಕಂಡಿರುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಸರಕಾರದ ಸಹಾಯಧನವನ್ನು ಬಳಸಿಕೊಂಡು ಅನೇಕ ಕುಟುಂಬಗಳು  ತಮ್ಮ ಜೀವನದಲ್ಲಿ ಹೊಸ ಆರಂಭ ಮಾಡಿಕೊಳ್ಳಬಹುದು.

ಸರ್ಕಾರದಿಂದ ದೊರೆಯುವ ಸಹಾಯಧನ  

ಆಶ್ರಯ ಬಸವ ವಸತಿ ಯೋಜನೆಯಡಿ ವಿವಿಧ ವರ್ಗಗಳಿಗೆ ಪ್ರತ್ಯೇಕ ಸಹಾಯಧನ ನೀಡಲಾಗುತ್ತದೆ. ಸಾಮಾನ್ಯ ವರ್ಗದ ಕುಟುಂಬಗಳಿಗೆ ₹ 1.20 ಲಕ್ಷದವರೆಗೆ ನೆರವು ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ SC/ST ಕುಟುಂಬಗಳಿಗೆ ₹ 1.75 ಲಕ್ಷ ಹಾಗೂ ನಗರ ಪ್ರದೇಶದ SC/ST ಕುಟುಂಬಗಳಿಗೆ ₹ 2 ಲಕ್ಷದವರೆಗೆ ಸರ್ಕಾರ ಸಹಾಯಧನ ನೀಡುತ್ತದೆ. ಈ ಹಣವನ್ನು ಹಂತ ಹಂತವಾಗಿ ಫಲಾನುಭಾವಿ  ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ.

ಮಹಿಳೆಯರಿಗೆ ವಿಶೇಷ ಆದ್ಯತೆ 

ಈ ಯೋಜನೆಯೆಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.  ವಿಧವೆಯರು,  ಮಹಿಳಾ ಮುಖ್ಯಸ್ಥರ ಕುಟುಂಬಗಳು ಹಾಗೂ ಏಕಾಂಗಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮಹಿಳೆಯರ ಹೆಸರಿನಲ್ಲಿ ಮನೆ  ನೊಂದಣಿ  ಮಾಡಲು ಸರಕಾರವು ಉತ್ತೇಜನ ನೀಡುತ್ತಿದೆ. ಇದರಿಂದ ಮಹಿಳೆಯರಿಗೆ ಆರ್ಥಿಕ ಭದ್ರತೆ ದೊರೆಯುತ್ತದೆ

ಬ್ಯಾಂಕ್ ಸಾಲ ಸೌಲಭ್ಯ  

ಸರ್ಕಾರದ ಸಹಾಯಧನದ ಜೊತೆಗೆ ಬ್ಯಾಂಕ್ ಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶ ಕೂಡ ಇದೆ. ಫಲಾನುಭವಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಸಾಲ ಪಡೆದು ಉತ್ತಮ ಗುಣಮಟ್ಟದ ಮನೆ ನಿರ್ಮಿಸಿಕೊಳ್ಳಬಹುದು. ಸರ್ಕಾರ ಮತ್ತು ಬ್ಯಾಂಕುಗಳ ಸಹಯೋಗದಿಂದ ಈ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿವಾಗುತ್ತದೆ.

ಮೂಲಭೂತ ಸೌಕರ್ಯಗಳೊಂದಿಗೆ ಮನೆ ನಿರ್ಮಾಣ 

ಈ ಯೋಜನೆಯಡಿ ಕೇವಲ ಮನೆ ನಿರ್ಮಾಣ ಮಾತ್ರವಲ್ಲ, ಶೌಚಾಲಯ, ವಿದ್ಯುತ್ ಮತ್ತು ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳಿಗೂ ಆದ್ಯತೆ ನೀಡಲಾಗುತ್ತದೆ. ಆರೋಗ್ಯಕರ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ಜೀವನ ಮಟ್ಟವನ್ನು ಸುಧಾರಿಸುವ  ಪ್ರಯತ್ನ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ಅಗತ್ಯ ಅರ್ಹತೆ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು. ಕುಟುಂಬದ ವಾರ್ಷಿಕ ಆದಾಯ ₹ 3 ಲಕ್ಷಕ್ಕಿಂತ ಕಡಿಮೆ ಇರಬೇಕು. ಅರ್ಜಿದಾರರ ಹೆಸರಿನಲ್ಲಿ ಈಗಾಗಲೇ  ಮನೆ ಇರಬಾರದು. ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು.

ಅಗತ್ಯ ದಾಖಲೆಗಳು

ಅರ್ಜಿದಾರರು ಅರ್ಜಿ ಸಲ್ಲಿಸುವ ವೇಳೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ,  ಜಾತಿ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ,  ಬ್ಯಾಂಕ್ ಪಾಸ್ ಬುಕ್,  ಪಾಸ್ಪೋರ್ಟ್ ಗಾತ್ರದ ಫೋಟೋ ಹಾಗೂ ಮೊಬೈಲ್ ಸಂಖ್ಯೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಎಲ್ಲಾ ದಾಖಲೆಗಳು ಸರಿಯಾಗಿರಬೇಕು.   

ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ 

ಅರ್ಜಿ ಸಲ್ಲಿಸುವ ತಮ್ಮ ದಾಖಲೆಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕು. ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕು. ಮೊಬೈಲ್ ಸಂಖ್ಯೆ ಆಧಾರ್ ಗೆ ಲಿಂಕ್ ಆಗಿರಬೇಕು. OTP ಪರಿಶೀಲನೆ ಮೇಲೆ ಸಮಸ್ಯೆ ಉಂಟಾಗದಂತೆ ಮುಂಚಿತವಾಗಿ ಎಲ್ಲಾ ಮಾಹಿತಿಯನ್ನು ಸರಿಪಡಿಸಿಕೊಳ್ಳುವುದು ಉತ್ತಮ.

ಅರ್ಜಿ ಸಲ್ಲಿಸಲು ಫಲಾನುಭವಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಆಶ್ರಯ ಬಸವ ವಸತಿ ಯೋಜನೆ ಆಯ್ಕೆ ಮಾಡಿ ಆಧಾರ್ ಸಂಖ್ಯೆ ಹಾಗೂ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಬೇಕು. ನಂತರ ಜಿಲ್ಲೆ, ತಾಲೂಕು ಮತ್ತು ಗ್ರಾಮ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳು ಅಪ್ಲೋಡ್ ಮಾಡಬೇಕು. OTP ಪರಿಶೀಲನೆಯ ನಂತರ ಅರ್ಜಿಯನ್ನು ಸಲ್ಲಿಸಬಹುದು.

ಇತ್ತೀಚಿನ ದಿನಗಳಲ್ಲಿ ಆನ್ಲೈನ್  ವ್ಯವಸ್ಥೆ ಹೆಚ್ಚು ಪ್ರಚಾಲಿತವಾಗಿರುವುದರಿಂದ ಅರ್ಜಿ ಪ್ರಕ್ರಿಯೆಯು ಡಿಜಿಟಲ್ ಆಗಿದೆ.

ಕೆಲವು ಕುಟುಂಬಗಳು ಆರ್ಥಿಕ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ಹೆದರುತ್ತಾರೆ. ಆದರೆ ಸರ್ಕಾರ ಯೋಜನೆಗಳು ನಿಜವಾದ ಬಡ ಕುಟುಂಬಗಳಿಗೆ ಸಹಾಯ ಮಾಡಲು ರೂಪಗೊಂಡಿವೆ. ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲದೆ ನೇರವಾಗಿ ಅರ್ಜಿ ಸಲ್ಲಿಸಬಹುದು. ಸರಕಾರದ ಅಧಿಕೃತ ಪೋರ್ಟಲ್ ಮೂಲಕ ಮಾತ್ರ ಅರ್ಜಿ  ಸಲ್ಲಿಸುವುದು ಸುರಕ್ಷಿತವಾಗಿದೆ. ಇತ್ತೀಚಿನ ದಿನಗಳಲ್ಲಿ ನಕಲಿ ವೆಬ್ಸೈಟ್ ಗಳು ಹಾಗೂ ಮೋಸದ ಪ್ರಕರಣಗಳು ಹೆಚ್ಚಾಗಿರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು.

ಅರ್ಜಿ ಪರಿಶೀಲನೆ ಮತ್ತು ಆಯ್ಕೆ ಪ್ರಕ್ರಿಯೆ

ಅರ್ಜಿಗಳನ್ನು ಪರಿಶೀಲಿಸಿದ ನಂತರ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲಾಗುತ್ತದೆ. ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಆಡಳಿತ ಮೂಲಕ ಪರಿಶೀಲನೆ ನಡೆಯಲಾಗುತ್ತದೆ ನಿಜವಾಗಿಯೂ ಮನೆ ಇಲ್ಲದ ಕುಟುಂಬಗಳಿಗೆ ಮೊದಲ ಆದ್ಯತೆ  ನೀಡಲಾಗುತ್ತದೆ. 

ಹಣ ಬಿಡುಗಡೆ ಮಾಡುವ ವಿಧಾನ

ಮನೆ ನಿರ್ಮಾಣದ ಪ್ರಗತಿಯನ್ನು ಆಧರಿಸಿ ಸರ್ಕಾರ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತದೆ. ಮೊದಲ ಕಂತು ಮನೆ ನಿರ್ಮಾಣ ಆರಂಭಿಸಲು ನೀಡಲಾಗುತ್ತದೆ. ನಂತರ ಗೋಡೆ ನಿರ್ಮಾಣ ಮತ್ತು ಮೇಲ್ಚಾವಣಿ ಹಂತಗಳಲ್ಲಿ ಉಳಿದ ಹಣ ಜಮಾ ಮಾಡಲಾಗುತ್ತದೆ. ಇದರಿಂದ ಮನೆ  ನಿರ್ಮಾಣ ಪೂರ್ಣಗೊಳ್ಳುವವರೆಗೂ ಸರ್ಕಾರ ಮೇಲ್ವಿಚಾರಣೆ  ಇರುತ್ತದೆ.

ಕೊನೆಯ ಮಾತು

ಸ್ವಂತ ಮನೆ ಎಂಬ ಕನಸು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ್ದಾಗಿದೆ. ಆ ಕನಸನ್ನು ನನಸು ಮಾಡಲು ಸರ್ಕಾರದ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತಿದೆ. ಆಶ್ರಯ ಬಸವ ವಸತಿ ಯೋಜನೆ 2026 ಮೂಲಕ ರಾಜ್ಯದ ಅನೇಕ ಕುಟುಂಬಗಳು ಹೊಸ ಬದುಕಿನ ಹೆಜ್ಜೆ ಇಡಲಿದೆ. ಕರ್ನಾಟಕ ಸರಕಾರ ಜಾರಿಗೆ ತಂದಿರುವ ಆಶ್ರಯ  ಬಸವ ವಸತಿ ಯೋಜನೆ ಬಡ ಹಾಗೂ ಮಾಧ್ಯಮ ವರ್ಗದ ಜನರಿಗೆ ಅತ್ಯಂತ ಉಪಯುಕ್ತ ಯೋಜನೆಯಾಗಿದೆ. ಮನೆ ಇಲ್ಲದ ಕುಟುಂಬಗಳಿಗೆ ಸುರಕ್ಷಿತ ಮತ್ತು ಶಾಶ್ವತ ಮನೆ ನಿರ್ಮಿಸಲು ಈ ಯೋಜನೆ ದೊಡ್ಡ ಸಹಾಯವಾಗಲಿದೆ. ಅರ್ಹರು ಸಮಯಕ್ಕೆ ಸರಿಯಾಗಿ ಅರ್ಧಿಸಲ್ಲಿಸಿ ಸರ್ಕಾರದ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

 

 

 

 

Leave a Comment