SBI Apprentice Recruitment 2026: 7150 ಹುದ್ದೆಗಳಿಗೆ ಅರ್ಜಿ ಆಹ್ವಾನ – ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕರಿಯರ್ಕ ಕಟ್ಟಿಕೊಳ್ಳುಲು ಸುವರ್ಣ ಅವಕಾಶ
ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಅತ್ಯಂತ ಪ್ರತಿಷ್ಠಿತ ಮತ್ತು ಸುರಕ್ಷಿತ ಉದ್ಯೋಗ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಯುವಕರು ಬ್ಯಾಂಕ್ ಉದ್ಯೋಗಗಳಿಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ವಿಶೇಷವಾಗಿ ದೇಶದ ಅತಿ ದೊಡ್ಡ ಸಾರ್ವಜನಿಕ ವಲಯ ಬ್ಯಾಂಕಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ನಡೆಸುವ ನೇಮಕಾತಿಗಳಿಗೆ ಅಭ್ಯರ್ಥಿಗಳಿಂದ ಬಾರಿ ಸ್ಪಂದನೆ ದೊರೆಯುತ್ತದೆ. ಈಗ ಇದೇ SBI Apprentice Recruitment 2026 ಆದಿಸೂಚನೆಯ ಮೂಲಕ ದೇಶದಿಂದ ಒಟ್ಟು 7150 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ನೇಮಕಾತಿಯೂ ಕೇವಲ ಉದ್ಯೋಗವಕಾಶ ಮಾತ್ರವಲ್ಲ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಯೋಗಿಕ ಅನುಭವ ಪಡೆಯಲು ಬಳಸುವ ಅಭ್ಯರ್ಥಿಗಳಿಗೆ ಒಂದು ಮಹತ್ವದ ವೇದಿಕೆಯಾಗಿದೆ. ಪದವಿ ಪೂರ್ಣಗೊಳಿಸಿರುವ ಯುವಕರು ಈ ಅವಕಾಶದ ಮೂಲಕ ಬ್ಯಾಂಕುಗಳ ಕಾರ್ಯವೈಖಾರಿ, ಗ್ರಾಹಕ ಸೇವೆ, ಹಣಕಾಸು ವ್ಯವಹಾರಗಳು ಹಾಗೂ ಆಧುನಿಕ ಬ್ಯಾಂಕ್ ವ್ಯವಸ್ಥೆಯ ಬಗ್ಗೆ ನೇರ ಅನುಭವ ಪಡೆಯಬಹುದು.
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿಶೇಷವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯ ನಿರ್ಮಿಸಿಕೊಳ್ಳಲು ಬಳಸುವವರಿಗೆ ಇದು ಒಂದು ಉತ್ತಮ ಆರಂಭವಾಗಬಹುದು.
SBI ಬ್ಯಾಂಕ್ ನ ಮಹತ್ವ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿದ್ದು, ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾವಿರಾರು ಶಾಖೆಗಳು, ಲಕ್ಷಾಂತರ ಗ್ರಾಹಕರು ಹಾಗೂ ವಿವಿಧ ಹಣಕಾಸು ಸೇವೆಗಳ ಮೂಲಕ SBI ದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದೆ.
SBI ಕೇವಲ ಬ್ಯಾಂಕ್ ಮಾತ್ರವಲ್ಲ, ಇದು ದೇಶದ ಯುವಕರಿಗೆ ಉದ್ಯೋಗ ಮತ್ತು ತರಬೇತಿ ಅವಕಾಶಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾಗಿದೆ. ಪ್ರತಿ ವರ್ಷ ವಿವಿಧ ಹುದ್ದೆಗಳಿಗೆ ನೇಮಕತಿ ನಡೆಸುವ SBI ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಬಳಸುವ ಅಭ್ಯರ್ಥಿಗಳಿಗೆ ವಿಶ್ವಾಸದ ವೇದಿಕೆಯಾಗಿ ಗುರುತಿಸಲಾಗಿದೆ.
SBI ಯಲ್ಲಿ ಅಪ್ರೆಂಟಿಸ್ ಆಗಿ ಆಯ್ಕೆಯಾಗುವುದು ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದ ಕಾರ್ಯವೈಖಾರಿಯನ್ನು ನೇರವಾಗಿ ಅರ್ಥ ಮಾಡಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಭವಿಷ್ಯದಲ್ಲಿ ಬ್ಯಾಂಕ್ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಈ ಅನುಭವ ಬಹಳ ಉಪಯುಕ್ತವಾಗಬಹುದು.
Apprentice ಹುದ್ದೆ ಎಂದರೇನು?
ಅನೇಕ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಅಪ್ರೆಂಟಿಸ್ ಹುದ್ದೆ ಎಂದರೆ ಇದು ಶಾಶ್ವತ ಉದ್ಯೋಗವಲ್ಲ. ಬದಲಾಗಿ ಇದು ಒಂದು ತರಬೇತಿ ಆಧಾರಿತ ಕಾರ್ಯಕ್ರಮವಾಗಿದೆ.
ಈ ಕಾರ್ಯಕ್ರಮದಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದವರೆಗೆ ಬ್ಯಾಂಕಿನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಅವರು ಬ್ಯಾಂಕ್ ಸೇವೆಗಳ ಬಗ್ಗೆ ಪ್ರಾಯೋಗಿಕ ಜ್ಞಾನ ಮತ್ತು ಅನುಭವವನ್ನು ಪಡೆದುಕೊಳ್ಳುತ್ತಾರೆ.
ಬ್ಯಾಂಕ್ ಖಾತೆ ತೆರೆಯುವ ಪ್ರಕ್ರಿಯೆ, ಗ್ರಾಹಕ ಸೇವೆ, ದಾಖಲೆಗಳ ಪರಿಶೀಲನೆ,, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು, ಸಾಲ ಸಂಬಂಧಿತ ಮಾಹಿತಿ ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ಅಭ್ಯರ್ಥಿಗಳು ನೇರ ಅನುಭವ ಪಡೆಯುತ್ತಾರೆ.
ಆಪ್ರಿಂಟಿಸ್ ಕಾರ್ಯಕ್ರಮವು ಅಭ್ಯರ್ಥಿಗಳಿಗೆ ಕೇವಲ ತರಬೇತಿ ನೀಡುವುದಲ್ಲ, ಅವರ ವ್ಯಕ್ತಿತ್ವ ಮತ್ತು ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿಯೂ ಸಹಕಾರಿಯಾಗುತ್ತದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವದ ಮಹತ್ವ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಪಡೆದಿರುವುದು ಸಾಕಾಗುವುದಿಲ್ಲ. ಪ್ರಾಯೋಗಿಕ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದೇ ಪರಿಸ್ಥಿತಿ ಇದೆ. ಬ್ಯಾಂಕ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಅಭ್ಯರ್ಥಿಗಳು ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿರಬೇಕು.
SBI Apprentice ಕಾರ್ಯಕ್ರಮವು ಅಭ್ಯರ್ಥಿಗಳಿಗೆ ಬ್ಯಾಂಕಿನ ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ಅರ್ಥ ಮಾಡಿಕೊಳ್ಳುವ ಅವಕಾಶ ನೀಡುತ್ತದೆ. ಇದರಿಂದ ಭವಿಷ್ಯದಲ್ಲಿ ನಡೆಯುವ SBI Clerk, SBI PO, IBPS Clerk, IBPS PO ಹಾಗೂ ಇತರೆ ಬ್ಯಾಂಕ್ ಪರೀಕ್ಷೆಗಳಿಗೆ ತಯಾರಿ ನಡೆಸಲು ಸಹಕಾರಿಯಾಗುತ್ತದೆ.
ಕರ್ನಾಟಕ ಅಭ್ಯರ್ಥಿಗಳಿಗೆ ಅಭಿವೃದ್ಧಿ ಅವಕಾಶ
ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಈ ನೇಮಕಾತಿಯಲ್ಲಿ ವಿಶೇಷ ಅವಕಾಶ ಲಭ್ಯವಿದೆ. ರಾಜ್ಯಕ್ಕೆ 276 ಹುದ್ದೆಗಳನ್ನು ಮೀಸಲು ಇಡಿಸಲಾಗಿದೆ. ಕರ್ನಾಟಕ ಭಾಷೆಯ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭ್ಯರ್ಥಿಗಳು ಸಮಾನವಾಗಿ ಅವಕಾಶವನ್ನು ಬಳಸಿಕೊಳ್ಳಬಹುದು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ಕಟ್ಟಿಕೊಳ್ಳಲು ಬಯಸುವ ಕರ್ನಾಟಕದ ಯುವಕರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ನೇಮಕಾತಿಯ ಪ್ರಮುಖ ವಿವರಗಳು
SBI Apprentice Recruitment 2026 ನೇಮಕಾತಿಯ ಪ್ರಕಾರ ಮಾಹಿತಿಗಳು ಇಲ್ಲಿದೆ:
ಸಂಸ್ಥೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಹುದ್ದೆ ಹೆಸರು : Apprentice, ಒಟ್ಟು ಹುದ್ದೆಗಳು : 7150, ತರಬೇತಿ ಅವಧಿ :: 1 ವರ್ಷ, ಅರ್ಜಿ ವಿಧಾನ : ಆನ್ಲೈನ್, ಆಯ್ಕೆ ವಿಧಾನ: ಆನ್ಲೈನ್ ಪರೀಕ್ಷೆ ಮತ್ತು ಸ್ಥಳೀಯ ಭಾಷೆ, ಅರ್ಜಿ ಸಲ್ಲಿಸುವ ಕೊನೆಯ : ದಿನಾಂಕ 15 ಜೂನ್ 2026, ಮಾನಸಿಕ ಸ್ಟೈಪೆಂಡ್ :15,000
ಅರ್ಜಿ ಸಲ್ಲಿಸಲು ಅಗತ್ಯವಿರುವ ವಿದ್ಯಾರ್ಹತೆ
SBI Apprentice ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಪದವಿ ಪೂರ್ಣಗೊಳಿಸಿರಬೇಕು.
ಕಲೆ (Art’s), ವಿಜ್ಞಾನ(Science), ವಾಣಿಜ್ಯ(Commerce), ಇಂಜಿನಿಯರಿಂಗ್, ಕೃಷಿ, ನಿರ್ವಹಣೆ ಸೇರಿದಂತೆ ಯಾವುದೇ ವಿಭಾಗ ಪದವೀಧರು ಅರ್ಜಿ ಸಲ್ಲಿಸಬಹುದು.
ಇದು ವಿಶೇಷವಾಗಿ ಹೊಸದಾಗಿ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಪ್ರವೇಶಿಸಲು ಬಯಸುವರಿಗೆ ಈ ಅಪ್ರೆಂಟಿಸ್ ಕಾರ್ಯಕ್ರಮ ಒಂದು ಉತ್ತಮ ಆರಂಭಿಕ ಹಂತವಾಗಬಹುದು.
SBI Apprentice ನೇಮಕಾತಿಯ ಪ್ರಮುಖ ಅಂಶವೆಂದರೆ ತನ್ನ ರಾಜ್ಯದ ಸ್ಥಳೀಯ ಭಾಷೆಯನ್ನು ತಿಳಿದಿರಬೇಕು. ಕರ್ನಾಟಕದ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಜ್ಞಾನ ಅಗತ್ಯವಾಗಿದೆ, ಓದಲು ಬರೆಯಲು ಮತ್ತು ಮಾತನಾಡಲು ಬರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ
SBI Apprentice ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಸಾಮಾನ್ಯವಾಗಿ ಕನಿಷ್ಠ ವಯಸ್ಸು ವಯಸ್ಸು – 20 ವರ್ಷ, ಗರಿಷ್ಠ ವಯಸ್ಸು – 28 ವರ್ಷ,
ವಯೋಮಿತಿಯನ್ನು ಅಧಿಸೂಚನೆಯಲ್ಲಿ ನೀಡಿರುವ ದಿನಾಂಕದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.
ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ
ಸರ್ಕಾರದ ನಿಯಮನುಸಾರ ವಿವಿಧ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
- SC/ST ಅಭ್ಯರ್ಥಿಗಳಿಗೆ – 5 ವರ್ಷ
- OBC ಅಭ್ಯರ್ಥಿಗಳಿಗೆ – 3 ವರ್ಷ
- PWBD ಅಭ್ಯರ್ಥಿಗಳಿಗೆ – 10 ರಿಂದ 15 ವರ್ಷ
- ಮಾಜಿ ಸೈನಿಕರಿಗೆ ನಿಯಮನುಸಾರ ಸಡಿಲಿಕೆ
ಈ ಸೌಲಭ್ಯದಿಂದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳಿಗೆ ಅವಕಾಶ ದೊರೆಯುತ್ತದೆ.
ತರಬೇತಿ ಅವಧಿ
SBI Apprentice ಕಾರ್ಯಕ್ರಮದ ಅವಧಿ ಒಂದು ವರ್ಷ.
ಅವಧಿಯಲ್ಲಿ ಅಭ್ಯರ್ಥಿಗಳಿಗೆ ಬ್ಯಾಂಕಿನ ವಿವಿಧ ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ.
ವಿಭಾಗಗಳು : ಗ್ರಾಹಕ ಸೇವ ವಿಭಾಗ, ಠೇವಣಿ ವಿಭಾಗ, ಸಾಲ ವಿಭಾಗ, ಡಿಜಿಟಲ್ ಬ್ಯಾಂಕಿಂಗ್, ಶಾಖಾ ಆಡಳಿತ, ದಾಖಲೆ ನಿರ್ವಹಣೆ, ಹಣಕಾಸು ವ್ಯವಹಾರಗಳ ನಿರ್ವಹಣೆ
ಈ ತರಬೇತಿಯ ಮೂಲಕ ಅಭ್ಯರ್ಥಿಗಳು ಬ್ಯಾಂಕಿಂಗ್ ಕ್ಷೇತ್ರ ಸಂಪೂರ್ಣ ಕಾರ್ಯ ವೈಖರಿಯನ್ನು ಅರ್ಥಮಾಡಿಕೊಳ್ಳಬಹುದು.
ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆ ಮುಖ್ಯವಾಗಿ 2 ಹಂತದಲ್ಲಿ ನಡೆಯುತ್ತದೆ
- ಆನ್ಲೈನ್ ಲಿಖಿತ ಪರೀಕ್ಷೆ : ಮೊದಲ ಹಂತದಲ್ಲಿ ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT) ಬರೆಯಬೇಕು. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಸಾಮಾನ್ಯ ಜ್ಞಾನ ತಾರ್ಕಿಕ ಸಾಮರ್ಥ್ಯ ಹಾಗೂ ಮೂಲಭೂತ ಬ್ಯಾಂಕಿಂಗ್ ಅರಿವನ್ನು ಪರೀಕ್ಷಿಸಲಾಗುತ್ತದೆ.
- ಸ್ಥಳೀಯ ಭಾಷಾ ಪರೀಕ್ಷೆ : ಆನ್ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಸ್ಥಳೀಯ ಭಾಷೆ ಪರೀಕ್ಷೆಯಲ್ಲಿ ಹಾಜರಾಗಬೇಕು. ಈ ಪರೀಕ್ಷೆಯಲ್ಲಿ ಅಭ್ಯರ್ಥಿಯು ಸ್ಥಳೀಯ ಭಾಷೆಯನ್ನು ಓದಲು ಬರೆಯಲು ಹಾಗೂ ಮಾತನಾಡಲು ಸಮರ್ಥನಾಗಿದ್ದಾನೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.
ಪರೀಕ್ಷೆಯ ಮಾದರಿ
- ಆನ್ಲೈನ್ ಪರೀಕ್ಷೆಯಲ್ಲಿ ಒಟ್ಟು 100 ಪ್ರಶ್ನೆಗಳು ಇರುತ್ತದೆ
- ಪರೀಕ್ಷೆಯ ಒಟ್ಟು ಅಂಕಗಳು – 100
- ಪರೀಕ್ಷೆ ಅವಧಿ – 60 ನಿಮಿಷ
ದಾಖಲೆಗಳ ಪರಿಶೀಲನೆ
ಆಯ್ಕೆಯಾದ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಬೇಕಾಗುತ್ತದೆ.
ಅಗತ್ಯ ದಾಖಲೆಗಳು :
- SSLC ಅಂಕಪಟ್ಟಿ
- PUC ಅಂಕಪಟ್ಟಿ
- ಪದವಿ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಗಾತದ ಫೋಟೋ
- ಸಹಿ
- ಮೊಬೈಲ್ ಸಂಖ್ಯೆ
ಎಲ್ಲಾ ದಾಖಲೆಗಳು ಮೂಲ ಮತ್ತು ಜೆರಾಕ್ಸ್ ಪ್ರತಿಗಳೊಂದಿಗೆ ಇರಬೇಕು.
ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು
ಕರ್ನಾಟಕ ರಾಜ್ಯಕ್ಕೆ ಒಟ್ಟು 276 Apprentice ಹುದ್ದೆಗಳನ್ನು ಮೀಸಲಿಡಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಯ SBI ಶಾಖೆಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಸೇರಿದಂತೆ ವಿವಿಧ ಪ್ರದೇಶಗಳ ಅಭ್ಯರ್ಥಿಗಳಿಗೆ ಅವಕಾಶ ದೊರೆಯಬಹುದು.
ಕರ್ನಾಟಕದ ಅಭ್ಯರ್ಥಿಗಳು ಕನ್ನಡ ಭಾಷೆಯಲ್ಲಿ ಉತ್ತಮ ಜ್ಞಾನ ಹೊಂದಿದ್ದರೆ ಆಯ್ಕೆ ಪ್ರಕ್ರಿಯೆಯಲ್ಲಿ ಅನುಕೂಲವಾಗುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯವಾಗಿ ಶುಲ್ಕ ರಚನೆ
- General /OBC/EWS ಅಭ್ಯರ್ಥಿಗಳು – ₹300
- SC/ST ಅಭ್ಯರ್ಥಿಗಳು – ಶುಲ್ಕ ವಿನಾಯಿತಿ
- PwBD ಅಭ್ಯರ್ಥಿಗಳು – ಶುಲ್ಕ ವಿನಾಯಿತಿ
ಶುಲ್ಕದ ಅಂತಿಮ ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸುವುದು ಅಗತ್ಯ.
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ
ಮೊದಲ ಹಂತದಲ್ಲಿ ಅಭ್ಯರ್ಥಿಗಲು SBI ನೇಮಕಾತಿ ಪೋರ್ಟಲ್ ನಲ್ಲಿ ಹೊಸ ನೊಂದಣಿ ಮಾಡಬೇಕು. ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಜನ್ಮ ದಿನಾಂಕ ಇವುಗಳನ್ನು ನೋಂದಾವಣೆ ಪೂರ್ಣಗೊಳಿಸಬೇಕು.
ಎರಡನೇ ಹಂತದಲ್ಲಿ ಅರ್ಜಿ ನಮೂನೆ ಭರ್ತಿ ಮಾಡಬೇಕು. ವ್ಯಯಕ್ತಿಕ ಮಾಹಿತಿ, ಶಿಕ್ಷಣ ಮಾಹಿತಿ, ವಿಳಾಸ, ವರ್ಗ ಮಾಹಿತಿ ಎಲ್ಲಾ ವಿವರಗಳು ಪ್ರಮಾಣ ಪತ್ರಗಳಿಗೆ ಹೊಂದಿಕೆ ಆಗಿರಬೇಕು.
ಮೂರನೇ ಹಂತದಲ್ಲಿ ಫೋಟೋ ಮತ್ತು ಸಹಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ನಾಲ್ಕನೇ ಹಂತದಲ್ಲಿ ಶುಲ್ಕ ಪಾವತಿಸಬೇಕು. ಅರ್ಹ ಆನ್ಲೈನ್ ಮೂಲಕ ಶುಲ್ಕ ಪಾವತಿಸಬೇಕು.
ಐದನೇ ಹಂತದಲ್ಲಿ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್ ಔಟ್ ತೆಗೆದುಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ.
ಪರೀಕ್ಷೆ ಕೇಂದ್ರ : ಪರೀಕ್ಷೆ ಕೇಂದ್ರವನ್ನು ಅಭ್ಯರ್ಥಿಯ ಆಯ್ಕೆ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ.
ಪ್ರವೇಶ ಪತ್ರ : ಪರೀಕ್ಷೆಗೆ ಕೆಲವು ವಾರಗಳ ಮೊದಲು ಪರೀಕ್ಷೆ ಪತ್ರ ಬಿಡುಗಡೆ ಮಾಡಲಾಗುತ್ತದೆ. ಪ್ರವೇಶ ಪತ್ರವಿಲ್ಲದೆ ಪರೀಕ್ಷಾ ಕೇಂದ್ರ ಪ್ರವೇಶ ನೀಡಲಾಗುವುದಿಲ್ಲ.
ಕೊನೆಯ ಮಾತು
SBI Apprentice Recruitment 2026 ಅಡಿಯಲ್ಲಿ ಪ್ರಕಟವಾಗಿರುವ 7150 ಹುದ್ದೆಗಳು ದೇಶದ ಲಕ್ಷಾಂತರ ಪದವೀಧರ ಯುವಕರಿಗೆ ಮಹತ್ವದ ಅವಕಾಶವಾಗಿದೆ. ಒಂದು ವರ್ಷದ ಪ್ರಾಯೋಗಿಕ ಬ್ಯಾಂಕಿಂಗ್ ಅನುಭವ, ವೃತ್ತಿಪರ ಕೌಶಲ್ಯಗಳ ಅಭಿವೃದ್ಧಿ ಮತ್ತು ಭವಿಷ್ಯದ ಬ್ಯಾಂಕಿಂಗ್ ಕರಿಯರ್ ಭದ್ರ ಅಡಿಪಾಯವನ್ನು ಈ ಕಾರ್ಯಕ್ರಮ ಒದಗಿಸುತ್ತದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸಾಧುಪಯೋಗಪಡಿಸಿಕೊಳ್ಳಬೇಕು . ಸರಿಯಾದ ತಯಾರಿ ಸಮಯೋಜಿತ ಅರ್ಜಿ ಸಲ್ಲಿಕೆ ಮತ್ತು ದೃಢ ಸಂಕಲ್ಪದೊಂದಿಗೆ ಅಭ್ಯರ್ಥಿಗಳು ಅವಕಾಶದ ಮೂಲಕ ತಮ್ಮ ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸಬಹುದು.
SBI Apprentice Recruitment 2026 ಕೇವಲ ಒಂದು ತರಬೇತಿ ಕಾರ್ಯಕ್ರಮವಲ್ಲ, ಅದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಮ್ಮ ಕನಸಿನ ವೃತ್ತಿಜೀವನದತ್ತ ಮೊದಲ ಹೆಜ್ಜೆಯಾಗಿದೆ.