Telegram Join My Telegram   WhatsApp Join My WhatsApp

RRB Technician Recruitment 2026 : ಭಾರತೀಯ ರೈಲ್ವೆಯಲ್ಲಿ 6565 ಹುದ್ದೆಗಳ ಭರ್ತಿ- ಅರ್ಜಿ ಸಲ್ಲಿಸಲು ಸುವರ್ಣ ಅವಕಾಶ

RRB Technician Recruitment 2026 : ಭಾರತೀಯ ರೈಲ್ವೆಯಲ್ಲಿ 6565 ಹುದ್ದೆಗಳ ಭರ್ತಿ- ಅರ್ಜಿ ಸಲ್ಲಿಸಲು ಸುವರ್ಣ ಅವಕಾಶ

ಭಾರತೀಯ ರೈಲ್ವೆಯಲ್ಲಿ ಸರಕಾರಿ ಉದ್ಯೋಗ ಪಡೆಯುವ ಕನಸು ಹೊಂದಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಭರ್ಜರಿ ಸುದ್ದಿ ನೀಡಿದೆ. 2026 ಸಾಲಿನ RRB Technician Recruitment ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಒಟ್ಟು 6,565 ತಂತ್ರಜ್ಞಾನ ಹುದ್ದೆಗಳು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಟೆಕ್ನಿಷಿಯನ್ ಗ್ರೇಡ್ -| ಸಿಗ್ನಲ್ ಹಾಗೂ ಟೆಕ್ನಿಷಿಯನ್ ಗ್ರೇಡ್-||| ಹುದ್ದೆಗಳು ಈ ನೇಮಕಾತಿಯ ಪ್ರಮುಖ ಭಾಗವಾಗಿದ್ದು, ಐಟಿಐ ಡಿಪ್ಲೋಮಾ, ಬಿಎಸ್‌ಸಿ ಹಾಗೂ ಇಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

ಭಾರತೀಯ ರೈಲ್ವೆ ದೇಶದ ಅತಿ ದೊಡ್ಡ ಸರ್ಕಾರಿ ಉದ್ಯೋಗ ಸಂಸ್ಥೆಗಳಲ್ಲಿ ಒಂದಾಗಿದ್ದು, ಇಲ್ಲಿ ಉದ್ಯೋಗ ದೊರೆಯುವುದರಿಂದ ಉತ್ತಮ ವೇತನ ಉದ್ಯೋಗ ಭದ್ರತೆ ವೈದ್ಯಕೀಯ ಸೌಲಭ್ಯ ಪಿಂಚಣಿ ಸೌಲಭ್ಯಗಳು ಹಾಗೂ ಬಡ್ತಿ ಅವಕಾಶಗಳು ದೊರೆಯುತ್ತವೆ. ಈ ಕಾರಣದಿಂದಲೇ ಪ್ರತಿವರ್ಷ ರೈಲು ನೇಮಕಾತಿಗೆ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ

RRB Technician Recruitment 2026 Overview 

ಈ ನೇಮಕಾತಿ ಅಭಿಯಾನವನ್ನು ರೈಲು ಸಚಿವಾಲಯದ ಅಧೀನದಲ್ಲಿರುವ ರೈಲು ನೇಮಕಾತಿ ಮಂಡಳಿ ನಡೆಸುತ್ತಿವೆ. ಅಧಿಸೂಚನೆಯ ಪ್ರಕಾರ ಒಟ್ಟು 6,565 ಹುದ್ದೆಗಳು ಖಾಲಿ ಇದ್ದು, ದೇಶದ ವಿವಿಧ ವಲಯಗಳಲ್ಲಿ ನೇಮಕಾತಿ ನಡೆಯುತ್ತಿದೆ. ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.

ಅಧಿಕೃತ ವೇಳಾಪಟ್ಟಿಯ ಪ್ರಕಾರ ಅರ್ಜಿ ಸಲ್ಲಿಕೆ ಪ್ರಕ್ರಿಯೆ 30 ಜೂನ್ 2026 ರಿಂದ ಆರಂಭವಾಗಲಿದ್ದು, 29 ಜುಲೈ 2026 ವರೆಗೆ ಮುಂದುವರಿಯಲಿದೆ. ಆದರಿಂದ ಅರ್ಹ  ಅಭ್ಯರ್ಥಿಗಳು ಕೊನೆ ದಿನಾಂಕಕ್ಕೆ ಕಾಯದೆ  ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.

ಭಾರತೀಯ ರೈಲ್ವೆಯಲ್ಲಿ ಉದ್ಯೋಗದ ಮಹತ್ವ 

ಭಾರತೀಯ ರೈಲು ವಿಶ್ವದ ಅತಿ ದೊಡ್ಡ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಲಕ್ಷಾಂತರ ಉದ್ಯೋಗಗಳನ್ನು ಹೊಂದಿರುವ ಈ ಸಂಸ್ಥೆ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರೈಲ್ವೆಯಲ್ಲಿ ಉದ್ಯೋಗ ದೊರೆಯುವುದರಿಂದ ಕೇವಲ ಸಂಬಳ ಮಾತ್ರವಲ್ಲದೆ, ದೀರ್ಘಾವಧಿ ವೃತ್ತಿ ಜೀವನ ಭದ್ರತೆ ದೊರೆಯುತ್ತದೆ.

ಸರ್ಕಾರಿ ಉದ್ಯೋಗ ಭದ್ರತೆ, ನಿಯಮಿತ ವೇತನ ಹೆಚ್ಚಳ, ನಿವೃತ್ತಿ ಸೌಲಭ್ಯಗಳು ಹಾಗೂ ಕುಟುಂಬದ ಸದಸ್ಯರಿಗೆ ದೊರೆಯುವ ವಿವಿಧ ಸೌಲಭ್ಯಗಳು ರೈಲ್ವೆ ಉದ್ಯೋಗಗಳನ್ನು ಅತ್ಯಂತ ಜನಪ್ರಿಯವಾಗಲಿಸಿದೆ. ಇದೇ ಕಾರಣಕ್ಕೆ RRB Technician Recruitment 2026 ಅಭ್ಯರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದೆ.

ಹುದ್ದೆಗಳ ವಿವರ

ಈ ನೇಮಕಾತಿಯಲ್ಲಿ ಟೆಕ್ನಿಷಿಯನ್ ಗ್ರೇಡ್-| ಸಿಗ್ನಲ್ ಮತ್ತು ಟೆಕ್ನಿಷಿಯನ್ ಗ್ರೇಡ್-||| ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಅಧಿಕೃತ ಅಧಿಸೂಚನೆ ಪ್ರಕಾರ ಟೆಕ್ನಿಷಿಯನ್ ಗ್ರೇಡ್-| ಸಿಗ್ನಲ್ ವಿಭಾಗದಲ್ಲಿ 323 ಹುದ್ದೆಗಲು ಲಭ್ಯವಿದ್ದರೆ, ಟೆಕ್ನಿಷಿಯನ್ ಗ್ರೇಡ್-||| ವಿಭಾಗದಲ್ಲಿ 6,242 ಹುದ್ದೆಗಳು ಲಭ್ಯವಿದೆ.

ಒಟ್ಟು 6,565 ಹುದ್ದೆಗಳ ಪೈಕಿ ಹೆಚ್ಚಿನ ಹುದ್ದೆಗಳು ಗ್ರೇಡ್-||| ಭಾಗಕ್ಕೆ ಸೇರುವುದರಿಂದ ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಸಿಗಲಿದೆ ತಾಂತ್ರಿಕ ಕ್ಷೇತ್ರದಲ್ಲಿ ವೃತ್ತಿ ಜೀವನ ಕಟ್ಟಿಕೊಳ್ಳಲು ಬಯಸುವವರಿಗೆ ಇದು ಸುವರ್ಣ ಅವಕಾಶವಾಗಿದೆ.

ಶೈಕ್ಷಣಿಕ ಅರ್ಹತೆ 

RRB Technician Recruitment 2026 ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು ಬುದ್ದಿಯ ಪ್ರಕಾರ ಅರ್ಹತೆಯಲ್ಲಿ ವ್ಯತ್ಯಾಸವಿದೆ.

ಟೆಕ್ನಿಷಿಯನ್ ಗ್ರೇಡ್-| ಸಿಗ್ನಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಾಂಪಿಟಲ್ಸ್ ಎಲೆಕ್ಟ್ರಾನಿಕ್ಸ್ ಫಿಸಿಕ್ಸ್ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಬಿಎಸ್ಸಿ ಪದವಿಯನ್ನು ಪಡೆದಿರಬೇಕು ಪರ್ಯಾಯವಾಗಿ ಸಂಬಂಧಿಸಿದ ವಿಷಯಗಳಲ್ಲಿ ಮೂರು ವರ್ಷದ ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ಪದವಿಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

ಟೆಕ್ನಿಷಿಯನ್ ಗ್ರೇಡ್-||| ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಅಥವಾ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ NCVT ಅಥವಾ SCVT ಮಾನ್ಯತೆ ಪಡೆದ ಸಂಸ್ಥೆಯಿಂದ ITI ಪ್ರಮಾಣ ಪತ್ರವನ್ನು ಹೊಂದಿರಬೇಕು.

ಫಿಲ್ಟರ್, ಎಲೆಕ್ಟ್ರಿಷಿಯನ್ ವೆಲ್ಡರ್,  ಟರ್ನರ್, ವೈರ್ ಮ್ಯಾನ್, ಎಲೆಕ್ಟ್ರಾನಿಕ್ಸ್ ಮೆಕಾನಿಕ್, ಡೀಸೆಲ್ ಮೆಕ್ಯಾನಿಕ್ ಹಾಗೂ ಇತರ ಸಂಬಂಧಿತ ತಾಂತ್ರಿಕ ವೃತ್ತಿಯಲ್ಲಿ ITI ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ 

ಅಭ್ಯರ್ಥಿಗಳು ನಿಗದಿತ ವಯೋಮಿತಿಯನ್ನು ಪೂರೈಸಬೇಕು ಟೆಕ್ನಿಷಿಯನ್ ಗ್ರೇಡ್-| ಸಿಗ್ನಲ್ ಹುದ್ದೆಗೆ ಕನಿಷ್ಠ 18 ವರ್ಷ ಗರಿಷ್ಠ 36 ವರ್ಷ ವಯಸ್ಸು ಇರಬೇಕು. ಟೆಕ್ನಿಷಿಯನ್ ಗ್ರೇಡ್-||| ಹುದ್ದೆಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 33 ವರ್ಷ ವಯಸ್ಸು ನಿಗದಿಪಡಿಸಬೇಕು.

ವಯಸ್ಸಿನ ಲೆಕ್ಕಾಚಾರವನ್ನು ಅಧಿಕೃತ ಅಧಿಸೂಚನೆಯಲ್ಲಿ ಸೂಚಿಸಲಾದ ದಿನಾಂಕ ಆಧಾರದ  ಮೇಲಿನ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ವಯಸ್ಸಿನ ಅರ್ಹತೆಯನ್ನು ಪರಿಶೀಲಿಸಬೇಕು.

ವಯೋಮಿತಿ ಸಡಿಲಿಕೆ 

ಭಾರತ ಸರ್ಕಾರ ಮೀಸಲಾತಿ ನಿಯಮದ ಪ್ರಕಾರ ವಿವಿಧ  ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. SC ಮತ್ತು ST ವಿದ್ಯಾರ್ಥಿಗಳಿಗೆ 5 ವರ್ಷ ಸಡಿಲಿಕೆ ದೊರೆಯುತ್ತದೆ. OBC ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ನೀಡಲಾಗಿದೆ.

ಮಾಜಿ ಸೈನಿಕರು ಹಾಗೂ ಇತರ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ ಇದರಿಂದ ಹೆಚ್ಚಿನ ಅಭ್ಯರ್ಥಿಗಳಿಗೆ ಉದ್ಯೋಗವಕಾಶ ಲಭ್ಯವಾಗುತ್ತದೆ.

ಅರ್ಜಿ ಶುಲ್ಕ  

ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಸಾಮಾನ್ಯ, OBC ಹಾಗೂ EWS ಅಭ್ಯರ್ಥಿಗಳಿಗೆ ₹500 ಅರ್ಜಿ  ಶುಲ್ಕ ನಿಗದಿಪಡಿಸಲಾಗಿದೆ.SC, ST, PwBD ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ₹250 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕವನ್ನು ಡಿಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, UPI, ನೆಟ್ ಬ್ಯಾಂಕಿಂಗ್ ಅಥವಾ ಇತರ ಆನ್ಲೈನ್ ವಿಧಾನಗಳ  ಮೂಲಕ ಪಾವತಿಸಬಹುದು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ನಿಯಮನುಸಾರ ಶುಲ್ಕದ ಒಂದು ಭಾಗವನ್ನು ಪಾವತಿಸುವ ಅವಕಾಶವು ಇದೆ.

ವೇತನ ಮತ್ತು ಭತ್ಯೆಗಳು

ಈ ನೇಮಕಾತಿಯ ಪ್ರಮುಖ ಆಕರ್ಷಣೆ ಎಂದರೆ ಆಕರ್ಷಕ ವೇತನ ವ್ಯವಸ್ಥೆ.ಟೆಕ್ನಿಷಿಯನ್ ಗ್ರೇಡ್-| ಸಿಗ್ನಲ್ ಹುದ್ದೆಗೆ 7ನೇ ವೇತನ ಆಯೋಗದ ಹಂತ-5ರ  ಪ್ರಕಾರ ತಿಂಗಳಿಗೆ  ₹29,200 ಆರಂಭಿಕ ವೇತನ ದೊರೆಯುತ್ತದೆ.ಟೆಕ್ನಿಷಿಯನ್ ಗ್ರೇಡ್-||| ಹುದ್ದೆಗೆ ಹಂತ-2ರ ಪ್ರಕಾರ ₹19,900 ಆರಂಭಿಕ ವೇತನ ದೊರೆಯುತ್ತದೆ.

ಮೂಲವೇತನದ ಜೊತೆಗೆ ತುಟ್ಟಿ ಭತ್ಯೆ, ಮನೆ ಬಾಡಿಗೆಭತ್ಯೆ, ಸಾರಿಗೆ ಭತ್ಯೆ, ವೈದ್ಯಕೀಯ ಸೌಲಭ್ಯಗಳ ಹಾಗೂ ಇತರ ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ. ಇದರಿಂದ ಒಟ್ಟು ಸಂಬಳ ಇನ್ನಷ್ಟು ಹೆಚ್ಚಳ ಆಗುತ್ತದೆ.

ವೈದ್ಯಕೀಯ ಮತ್ತು ನಿವೃತ್ತಿ ಸೌಲಭ್ಯಗಳು 

ರೈಲ್ವೆ ನೌಕರರು ಹಾಗೂ ಅವರ ಕುಟುಂಬ ಸದಸ್ಯರು ವೈದ್ಯಕೀಯ ಸೌಲಭ್ಯಗಳನ್ನು ಪಡೆಯುತ್ತಾರೆ. ವಿವಿಧ ರೈಲು ಆಸ್ಪತ್ರೆಗಳಲ್ಲಿ ಉಚಿತ ಅಥವಾ ರಿಯಾಯಿತಿ ತರದ ಚಿಕಿತ್ಸೆ ದೊರೆಯುತ್ತದೆ.

ಇದರ ಜೊತೆಗೆ ಪಿಂಚಣಿ ಯೋಜನೆ, ಭವಿಷ್ಯ ನಿಧಿ, ನಿವೃತ್ತಿ ನಂತರದ ವಿವಿಧ ಸೌಲಭ್ಯಗಳು ದೊರೆಯುತ್ತದೆ. ಸರ್ಕಾರಿ ಉದ್ಯೋಗಗಳಲ್ಲಿ ಅತ್ಯುತ್ತಮ ನಿವೃತ್ತಿ ಭದ್ರತೆಯನ್ನು ಭಾರತೀಯ ರೈಲ್ವೆ ಒದಗಿಸುತ್ತದೆ.

 ಆಯ್ಕೆ ಪ್ರಕ್ರಿಯೆ

RRB Technician Recruitment 2026 ಆಯ್ಕೆ ಪ್ರಕ್ರಿಯೆ ಮೂರು ಪ್ರಮುಖ ಹಂತಗಳನ್ನು ಒಳಗೊಂಡಿರುತ್ತದೆ. ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಗಣಿತ ಸಾಮಾನ್ಯ ಬುದ್ಧಿ, ಸಾಮಾನ್ಯ ವಿಜ್ಞಾನ, ಸಾಮಾನ್ಯ ಅರಿವು ಹಾಗೂ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಕೇಳಲಾಗುತ್ತದೆ.

CBT ಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ ಈ ಹಂತದಲ್ಲಿ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಪ್ರಮಾಣ ಪಾತ್ರಗಳು, ಜಾತಿ ಪ್ರಮಾಣ ಪತ್ರ, ಗುರುತಿನ ಚೀಟಿ ಹಾಗೂ ಇತರ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ದಾಖಲೆ ಪರಿಶೀಲನೆಯ ನಂತರ ವೈದ್ಯಕೀಯ  ಪರೀಕ್ಷೆ ನಡೆಯುತ್ತದೆ. ಅಭ್ಯರ್ಥಿಗಳು ರೈಲ್ವೆ ಸೇವೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಯೋಗ್ಯರಾಗಿರುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ  ಪರೀಕ್ಷೆ ನಡೆಸಲಾಗುತ್ತದೆ.

ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಅಭ್ಯರ್ಥಿಗಳು ಅಧಿಕೃತ RRB ವೆಬ್ ಸೈಟಿಗೆ ಭೇಟಿ ನೀಡಿ ಹೊಸ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನಂತರ ಲಾಗಿನ್ ಮಾಡಿ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆ ಹಾಗೂ ಇತರ ವಿವರಗಳನ್ನು ನಮೂದಿಸಬೇಕು.

ಅಗತ್ಯ ದಾಖಲೆಗಳಾದ ಫೋಟೋ, ಸಹಿ ಹಾಗೂ ಪ್ರಮಾಣ ಪತ್ರಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿದ ಬಳಿಕ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಲ್ಲಾ ವಿವರಗಳನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಿದ ನಂತರ ಅದರ ಪ್ರಿಂಟ್ ಪ್ರತಿಯನ್ನು ಭವಿಷ್ಯದ ಉಲ್ಲೇಖಕ್ಕಾಗಿ ಉಳಿಸಿಕೊಳ್ಳಬೇಕು.

ಅಂತಿಮ ಮಾತು 

RRB Technician Recruitment 2026 ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಅಪರೂಪದ ಅವಕಾಶವಾಗಿದೆ. ಒಟ್ಟು 6,565 ಹುದ್ದೆಗಳು ಲಭ್ಯ ಇರುವುದರಿಂದ ಸಾವಿರಾರು ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರ ಉದ್ಯೋಗ ಪಡೆಯುವ ಅವಕಾಶ ಸಿಗಲಿದೆ. ಐಟಿಐ, ಡಿಪ್ಲೋಮಾ, ಬಿ ಎಸ್ ಸಿ ಹಾಗೂ ಇಂಜಿನಿಯರಿಂಗ್ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು.

ಉತ್ತಮ ವೇತನ,  ಸರಕಾರಿ ಭತ್ಯೆಗಳು, ಉದ್ಯೋಗ  ಭದ್ರತೆ, ವೈದ್ಯಕೀಯ ಸೌಲಭ್ಯಗಳು ಹಾಗೂ ನಿವೃತ್ತಿ ಪ್ರಯೋಜನಗಳನ್ನು ಒದಗಿಸುವ ನೇಮಕಾತಿಗೆ ಆಸಕ್ತ ಅಭ್ಯರ್ಥಿಗಳು 30 ಜೂನ್ 2026 ರಿಂದ 29 ಜುಲೈ 2026 ರ ವರೆಗೆ ಅರ್ಜಿ ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಬಹುದು. ಭಾರತೀಯ ರೈಲ್ವೆಯಲ್ಲಿ ಯಶಸ್ವಿ ನೃತ್ಯ ಜೀವನದತ್ತ ಮೊದಲ ಹೆಜ್ಜೆ ಇಡುವುದಕ್ಕೆ ಇದು ಅತ್ಯುತ್ತಮ ಸಮಯವಾಗಿದೆ.

 

Leave a Comment