Telegram Join My Telegram WhatsApp Join My WhatsApp

PF ಖಾತೆದಾರರಿಗೆ  ಭರ್ಜರಿ ಸಿಹಿ ಸುದ್ದಿ..! ಇನ್ನು 100% PF  ಹಣ ವಾಪಸ್ ಪಡೆಯಬಹುದು – EPFO ಹೊಸ ನಿಯಮಗಳ ಸಂಪೂರ್ಣ ಮಾಹಿತಿ 

PF ಖಾತೆದಾರರಿಗೆ  ಭರ್ಜರಿ ಸಿಹಿ ಸುದ್ದಿಉದ್ಯೋಗಿಗಳಿಗೆ ದೊಡ್ಡ ರಿಲೀಫ್ : PF ಹಣ ಹಿಂಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆ

ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಮಾತುರ ಆರ್ಥಿಕ ಭದ್ರತೆಯನ್ನು ಒದಗಿಸುತ್ತಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(EPFO) ಮತ್ತೊಮ್ಮೆ ತನ್ನ ಸದಸ್ಯರ ಅನುಕೂಲಕ್ಕಾಗಿ ಹಲವು ಹೊಸ ಕ್ರಮಗಳನ್ನು ಜಾರಿಗೆ ತರುವ ಮೂಲಕ ಗಮನಸಲಿದೆ. ಉದ್ಯೋಗಿಗಳ ಭವಿಷ್ಯದ ಆರ್ಥಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ EPFO ಈಗ PF ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಪ್ರಯತ್ನ ಮಾಡುತ್ತಿದೆ. ಇತ್ತೀಚಿನ ಜಾರಿಗೆ ಬಂದಿರುವ ಕೆಲವು ಹೊಸ ನಿಯಮಗಳನ್ನು ಹಾಗೂ ಸೌಲಭ್ಯಗಳ ಮೂಲಕ ಸದಸ್ಯರು ನಿರ್ದಿಷ್ಟ ಸಂದರ್ಭದಲ್ಲಿ ತಮ್ಮ ಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ವಾಪಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಬೆಳವಣಿಗೆ ಲಕ್ಷಾಂತರ ಉದ್ಯೋಗಿಗಳಿಗೆ ದೊಡ್ಡ ಸಹಾಯಮಾಡುತ್ತದೆ.

ಇಂದಿನ ದಿನಗಳಲ್ಲಿ ಪಿಎಫ್ ಹಣವನ್ನು ಹಿಂಪಡೆಯಲು ಹಲವು ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸಬೇಕಾಗುತ್ತಿತ್ತು. ಹಲವು ದಾಖಲೆಗಳ ಹಲ್ಲಿಕೆ ಪ್ರಕ್ರಿಯೆ ವಿಳಂಬ ಹಾಗೂ ವಿಧ ಅನುಮೋದನೆಗಳ ಕಾರಣದಿಂದ ಸದಸ್ಯರು ತಮ್ಮದೇ ಹಣವನ್ನು ಪಡೆಯಲು ಸಾಕಷ್ಟು ಸಮಯ ಕಾಯಬೇಕಾಗಿತ್ತು. ಆದರೆ ಈಗ ಡಿಜಿಟಲ್ ಸೇವೆಗಳ ವಿಸ್ತರಣೆ ಹಾಗೂ ನಿಯಮಗಳ ಮೂಲಕ ಈ ಪ್ರಕ್ರಿಯೆಯನ್ನು ಹೆಚ್ಚು ಸುಲಭ ಮತ್ತು ಪಾರದರ್ಶಕಗೊಳಿಸಲು EPFO ಕ್ರಮ ಕೈಗೊಂಡಿದೆ. ಇದರ ಪರಿಣಾಮವಾಗಿ ಸದಸ್ಯರು ತುರ್ತು ಸಂದರ್ಭಗಳಲ್ಲಿ ತಮ್ಮ ಪಿಎಫ್ ಉಳಿತಾಯವನ್ನು ಬೇಗನೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

PF ಎಂದರೇನು? ಅದರ ಮಹತ್ವ 

Provident Fund ಅಥವಾ PF  ಎನ್ನುವುದು ಉದ್ಯೋಗಿಗಳ ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಯ ಭವಿಷ್ಯದ ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆಯನ್ನು ರೂಪಿಸಲಾಗಿದೆ ಉದ್ಯೋಗಿಯ ವೇತನದಿಂದ ಪ್ರತಿ ಮಾಸ ಒಂದು ನಿರ್ದಿಷ್ಟ ಮೊತ್ತ ಪಿಎಫ್ ಖಾತೆಗೆ ಜಮಯಾಗುತ್ತದೆ ಒಂದು ವೇಳೆ ಉದ್ಯೋಗದಾತ ಸಂಸ್ಥೆಯು  ತನ್ನ ಪಾಲಿನ ಮೊತ್ತವನ್ನು ಸದಸ್ಯರ ಖಾತೆಗೆ ಜಮ ಮಾಡುತ್ತದೆ ಹೀಗೆ ವರ್ಷಗಳ ಕಾಲ ಸಂಗ್ರಹಣೆ ಆಗುವ ಮೊತ್ತ ನಿವೃತ್ತಿಯ ನಂತರ ಅಥವಾ ವಿಶೇಷ ಸಂದರ್ಭಗಳಲ್ಲಿ ಹಾರ್ದಿಕ ನೆರವಿನ ಮೂಲವಾಗುತ್ತದೆ.

PF ಯೋಜನೆಯ ಪ್ರಮುಖ ಉದ್ದೇಶ ನಿವೃತ್ತಿಯ ನಂತರ ಉದ್ಯೋಗಿಗಳಿಗೆ ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ಒದಗಿಸುವುದಾಗಿದೆ ಆದರೆ ಕೆಲವು ನಿವೃತ್ತಿ ಸಂದರ್ಭದಲ್ಲಿ ಮಾತ್ರವಲ್ಲದೆ ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ಮದುವೆ, ಮನೆ ಖರೀದಿ  ಮತ್ತು ಇತರೆ ತುರ್ತು ಸಂದರ್ಭದಲ್ಲಿ ಅವಕಾಶವಿದೆ.  ಈ ಕಾರಣದಿಂದ ಪಿಎಫ್ ಅನ್ನು ಉದ್ಯೋಗಿಗಳ ಅತ್ಯಂತ ಪ್ರಮುಖ ಸಾಧನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

EPFO ಹೊಸ ನಿಯಮಗಳ ಹಿಂದಿನ ಉದ್ದೇಶ 

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಭಾರತ ಪರಿಕಲ್ಪನೆಯ ಭಾಗವಾಗಿ ಹಲವು ಸರ್ಕಾರಿ ಸೇವೆಗಳು ಆನ್ಲೈನ್ ಮೂಲಕ ಲಭ್ಯವಾಗುತ್ತಿದೆ. ಇದೇ ಮಾದರಿಯಲ್ಲಿ EPFO ಕೂಡ ತನ್ನ ಸೇವೆಗಳನ್ನು ತಂತ್ರಜ್ಞಾನ ಆಧಾರಿತವಾಗಲು ಮುಂದಾಗಿದೆ. ಸದಸ್ಯರು ತಮ್ಮ ಪಿಎಫ್ ಖಾತೆ ಮಾಹಿತಿಯನ್ನು ಸುಲಭವಾಗಿ ಪರಿಶೀಲಿಸಲು ಹಣ ಹಿಂಪಡೆಯಲು ಹಾಗೂ ವಿವಿಧ ಸೇವೆಗಳನ್ನು ಬಳಸಿಕೊಳ್ಳಲು ಅನೇಕ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

ಹೊಸ ನಿಯಮಗಳ ಮುಖ್ಯ ಉದ್ದೇಶ ಸದಸ್ಯರಿಗೆ ಅವರ ಹಣದ ಮೇಲೆ ಹೆಚ್ಚಿನ ನಿಯಂತ್ರಣ ಮತ್ತು ಸುಲಭ ಪ್ರವೇಶ ಒದಗಿಸುವುದಾಗಿದೆ. ತುರ್ತು ಸಂದರ್ಭಗಳಲ್ಲಿ ಹಣದ ಅಗತ್ಯ ಉಂಟಾದಾಗ ಸದಸ್ಯರು ಅನಗತ್ಯ  ಅಡಚಣೆಗಳನ್ನು ಎದುರಿಸದೆ ತಮ್ಮ ಉಳಿತಾಯವನ್ನು ಬಳಸಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಉದ್ಯೋಗಿಗಳ ಆರ್ಥಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ ಪಿಎಫ್ ವ್ಯವಸ್ಥೆ ಮೇಲಿನ ವಿಶ್ವಾಸ ಹೆಚ್ಚಾಗುತ್ತದೆ.

100% PF ಹಣ ಹಿಂಪಡೆಯುವ ಅವಕಾಶ 

EPFO ಜಾರಿಗೆ ತಂದಿರುವ ಪ್ರಮುಖ ಬದಲಾವಣೆಗಳಲ್ಲಿ ಒಂದು ನಿರ್ದಿಷ್ಟ ಸಂದರ್ಭಗಳಲ್ಲಿ ಪಿಎಫ್ ಖಾತೆಯ ಸಂಪೂರ್ಣ ಮೊತ್ತವನ್ನು ಹಿಂಪಡೆಯುವ ಅವಕಾಶವಾಗಿದೆ ಸಾಮಾನ್ಯವಾಗಿ ಪಿ ಎಫ್ ಹಣವನ್ನು ಸಂಪೂರ್ಣವಾಗಿ ಹಿಂಪಡೆಯಲು ನಿರ್ದಿಷ್ಟ ಷರತ್ತುಗಳು ಅನ್ವಯಿಸುತ್ತವೆ. ಆದರೆ ಹೊಸ ನಿಯಮಗಳ ಮೂಲಕ ಅರ್ಹ ಸದಸ್ಯರಿಗೆ ಈ ಪ್ರಕ್ರಿಯೆ ಹೆಚ್ಚು ಸ್ಪಷ್ಟ ಹಾಗೂ ಸುಲಭವಾಗಿದೆ.

PF ಖಾತೆಯಲ್ಲಿ ಸಂಗ್ರಹವಾಗಿರುವ ಮೊತ್ತವು ಸದಸ್ಯರ ಜೀವನಪರ್ಯಂತ ಉಳಿತಾಯವಾಗುವುದರಿಂದ ಅದನ್ನು ಸಂಪೂರ್ಣವಾಗಿ ಹಿಂಪಡೆಯುವ  ಅವಕಾಶ ಎಲ್ಲ ಸಂದರ್ಭಗಳಲ್ಲೂ ಲಭ್ಯವಿರುವುದಿಲ್ಲ. ಅದಾಗಿಯೂ ಕೆಲವು ವಿಶೇಷ ಪರಿಸ್ಥಿತಿಗಳಲ್ಲಿ ಸದಸ್ಯರು ತಮ್ಮ ಸಂಪೂರ್ಣ ಮೊತ್ತವನ್ನು ಪಡೆಯಬಹುದು. ಇದರಿಂದ ತುರ್ತು ಪರಿಸ್ಥಿತಿಗಳಲ್ಲಿ ಆರ್ಥಿಕ ನೆರವು ದೊರೆಯುತ್ತದೆ.

ನಿವೃತ್ತಿಯ ನಂತರ ಸಂಪೂರ್ಣ PF ಹಣ ಪಡೆಯುವ ಅವಕಾಶ 

ಉದ್ಯೋಗಿ ನಿವೃತ್ತಿ ಹೊಂದಿದ ನಂತರ ತನ್ನ ಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಪಡೆಯುವ ಹಕ್ಕು ಹೊಂದಿರುತ್ತಾನೆ. ಸಾಮಾನ್ಯವಾಗಿ 58 ವರ್ಷ ವಯಸ್ಸಿನ ನಂತರ ಸದಸ್ಯರು ನಿವೃತ್ತಿ ಹೊಂದಿದಾಗ ಪಿಎಫ್ ಮೊತ್ತವನ್ನು ಸಂಪೂರ್ಣವಾಗಿ ಕ್ಲೈಮ್ ಮಾಡಬಹುದು. ಈ ಸಂದರ್ಭದಲ್ಲಿ ಉದ್ಯೋಗಿಯ ಉಳಿತಾಯದ ಹಣ ಹಾಗೂ ಅದರ ಮೇಲೆ ಬಂದಿರುವ ಬಡ್ಡಿಯನ್ನು ಪಡೆಯಲು ಅವಕಾಶ ಇರುತ್ತದೆ.

ನಿವೃತ್ತಿಯ ನಂತರ ದೊರೆಯುವ ಈ ಮೊತ್ತವು ಹಿರಿಯ ನಾಗರಿಕ ಜೀವನದಲ್ಲಿ ಪ್ರಮುಖ ಆರ್ಥಿಕ ಬೆಂಬಲವಾಗುತ್ತದೆ. ಆರೋಗ್ಯ ವೆಚ್ಚಗಳು ಕುಟುಂಬದ ಅಗತ್ಯಗಳು ಮತ್ತು ಇತರೆ ಜೀವನೋಪಾಯದ ಖರ್ಚುಗಳನ್ನು ನಿರ್ವಹಿಸಲು ಸಹಕಾರಿಯಾಗಿದೆ.

ವಿದೇಶದಲ್ಲಿ ಶಾಶ್ವತವಾಗಿ ನೆಲೆಸುವವರಿಗೆ ಅವಕಾಶ 

ಭಾರತವನ್ನು ತೊರೆದು ವಿದೇಶದಲ್ಲಿ ಶಾಶ್ವತವಾಗಿ ನಿಲ್ಲಿಸಲು ನಿರ್ಧರಿಸಿದ ಸದಸ್ಯರು ತಮ್ಮ ಪಿಎಫ್ ಖಾತೆಯ ಸಂಪೂರ್ಣ ಹಣವನ್ನು ಪಡೆಯಬಹುದು. ಉದ್ಯೋಗ ಅಥವಾ ವಲಸೆ ಕಾರಣದಿಂದ ವಿದೇಶಕ್ಕೆ ತೆರಳುವವರು ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಈ ನಿಯಮದ ಉದ್ದೇಶ ದೇಶದ ಹೊರಗೆ ಶಾಶ್ವತವಾಗಿ ವಾಸಿಸಲು ತೆರಲು ಸದಸ್ಯರಿಗೆ ಅವರ ಉಳಿತಾಯದ ಹಣವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು. ಇದರಿಂದ ವಿದೇಶದಲ್ಲಿ ಹೊಸ ಜೀವನ ಆರಂಭಿಸುವ ಸಂದರ್ಭದಲ್ಲಿ ಆರ್ಥಿಕ ನೆರವು ದೊರೆಯುತ್ತದೆ.

ಸ್ವಯಂ ನಿವೃತ್ತಿ ಪಡೆದವರಿಗೆ ಲಭ್ಯವಿರುವ ಸೌಲಭ್ಯ 

ಕೆಲವರು ವೈಯಕ್ತಿಕ ಕಾರಣದಿಂದ ಅಥವಾ ವೃತ್ತಿ ಜೀವನದ ಯೋಜನೆಗಳ ಹಿನ್ನಲೆಯಲ್ಲಿ ಸ್ವಯಂ ನಿವೃತ್ತಿ ಪಡೆಯುತ್ತಾರೆ. ಇಂತಹ ಸದಸ್ಯರು ಸಹ ನಿರ್ದಿಷ್ಟ ನಿಯಮಗಳ ಅಡಿಯಲ್ಲಿ ತಮ್ಮ ಪಿಎಫ್ ಖಾತೆಯ ಹಣವನ್ನು ಸಂಪೂರ್ಣವಾಗಿ ಹಿಂಪಡೆಯಬಹುದು.

ಸ್ವಯಂ ನಿವೃತ್ತಿ ಪಡೆದ ನಂತರ ಹೊಸ ಉದ್ಯೋಗಕ್ಕೆ ಸೇರದೆ ಇದ್ದಲ್ಲಿ ಅಥವಾ ಇತರ ಅರ್ಹತಾ ಪರಿಷತ್ತುಗಳನ್ನು ಪೂರೈಸಿದರೆ ಸದಸ್ಯರು ತಮ್ಮ ಹಣವನ್ನು ಪಡೆಯಬಹುದು. ಇದರಿಂದ ಅವರ ಮುಂದಿನ ಜೀವನದ ಯೋಜನೆಗಳಿಗೆ ನೆರವಾಗುತ್ತದೆ.

ಉದ್ಯೋಗ ಕಳೆದುಕೊಂಡವರಿಗೆ ತೆರೆಯುವ ನೆರವು 

ಉದ್ಯೋಗ ಕಳೆದುಕೊಳ್ಳುವುದು ಯಾವುದೇ ವ್ಯಕ್ತಿಯ ಜೀವನದಲ್ಲಿ ದೊಡ್ಡ ಆರ್ಥಿಕ ಸವಾಲಾಗಿರುತ್ತದೆ. ಅದರಿಂದ EPFO ನಿರುದ್ಯೋಗಿ ಸದಸ್ಯರಿಗೆ ವಿಶೇಷ ಸೌಲಭ್ಯಗಳು ಒದಗಿಸಿದೆ. ಉದ್ಯೋಗ ಕಳೆದುಕೊಂಡ ನಂತರ ಸದಸ್ಯರು ತಮ್ಮ ಪಿಎಫ್ ಖಾತೆಯ ಹಣದ ಒಂದು ಭಾಗವನ್ನು ತಕ್ಷಣ ಪಡೆಯಬಹುದು.

ಸಾಮಾನ್ಯವಾಗಿ ಒಂದು ತಿಂಗಳ ನಿರುದ್ಯೋಗದ ನಂತರ ಪಿಎಫ್ ಮೊತ್ತ ಶೇಕಡ 75 ರಷ್ಟು ಹಣವನ್ನು ಹಿಂಪಡೆಯಲು ಅವಕಾಶ ಇರುತ್ತದೆ. ಬಳಿಕ ನಿರ್ದಿಷ್ಟ ಅವಧಿಯ ನಂತರ ಉಳಿದ ಮೊತ್ತವನ್ನು ಪಡೆಯಬಹುದು ಸದಸ್ಯರು ಹೊಸ ಉದ್ಯೋಗವನ್ನು ಪಡೆಯದಿದ್ದಲ್ಲಿ ಹಾಗೂ ಸಂಬಂಧಿತ ನಿಯಮಗಳನ್ನು ಪೂರೈಸಿದಲ್ಲಿ ಸಂಪೂರ್ಣ ಮೊತ್ತವನ್ನು ಪಡೆಯುವ ಅವಕಾಶ ಲಭ್ಯವಾಗಬಹುದು.

ವೈದ್ಯಕೀಯ ಚಿಕಿತ್ಸೆಗೆ PF  ಹಣದ ಬಳಕೆ 

ಆರೋಗ್ಯ ಸಮಸ್ಯೆಗಳು ಯಾವುದೇ ಸಮಯದಲ್ಲಿ ಎದುರಾಗಬಹುದು. ಇಂತಹ  ಸಂದರ್ಭದಲ್ಲಿ ಹೆಚ್ಚಿನ ವೆಚ್ಚವನ್ನು ಭರಿಸಲು ಪಿಎಫ್ ಹಣ ಬಹಳ ಉಪಯುಕ್ತವಾಗಿದೆ. ಸದಸ್ಯರು ತಮ್ಮ ವೈದ್ಯಕೀಯ ಚಿಕಿತ್ಸೆಗಾಗಿ ಮಾತ್ರವಲ್ಲದೆ ಪತಿ, ಪತ್ನಿ, ಮಕ್ಕಳು ಅಥವಾ ಪೋಷಕರ ಚಿಕಿತ್ಸೆಗೆ ಸಹ ಪಿಎಫ್ ಹಣವನ್ನು ಬಳಸಿಕೊಳ್ಳಬಹುದು. ಮತ್ತು ಮಕ್ಕಳ ಶಿಕ್ಷಣಕ್ಕಾಗಿ  ಪಿಎಫ್ ಹಣವನ್ನು ಪಡೆಯುವ ಅವಕಾಶವಿದೆ.

ಆನ್ಲೈನ್ ಮೂಲಕ PF ಕ್ಲೈಮ್  ಪ್ರಕ್ರಿಯೆ 

ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ಈಗ PF ಹಣ ಪಡೆಯುವ ಪ್ರಕ್ರಿಯೆ ಬಹಳ ಸುಲಭವಾಗಿದೆ. ಸದಸ್ಯರು EPFO ಪೋರ್ಟಲ್ ಗೆ ಲಾಗಿನ್ ಆಗಿ ತಮ್ಮ UAN ಹಾಗೂ ಪಾಸ್ವರ್ಡ್ ಬಳಸಿ ಖಾತೆಯನ್ನು ಪ್ರವೇಶಿಸಬಹುದು. ಬಳಿಕ Online Services ವಿಭಾಗದಲ್ಲಿ ಕ್ಲೈಮ್ ಆಯ್ಕೆಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು.

ಈ ಪ್ರಕ್ರಿಯೆಯಲ್ಲಿ ಬ್ಯಾಂಕ್ ಖಾತೆ ವಿವರಗಳ ಪರಿಶೀಲನೆ ಅರ್ಹ ಕ್ಲೇಮ್ ಆಯ್ಕೆ ಮತ್ತು ಅಗತ್ಯ ಮಾಹಿತಿ ಸಲ್ಲಿಕೆ ಮಾಡಬೇಕು. ಎಲ್ಲಾ ವಿವರಗಳು ಸರಿಯಾಗಿದ್ದರೆ ಅರ್ಜಿಯನ್ನು ವೇಗವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ.

Auto Settlement ವ್ಯವಸ್ಥೆಯ ಮಹತ್ವ 

EPFO ಪರಿಚಯಿಸಿರುವ Auto Settlement ವ್ಯವಸ್ಥೆ ಸದಸ್ಯರಿಗೆ ವೇಗವಾದ ಸೇವೆಗಳನ್ನು ಒದಗಿಸಲು ನೆರವಾಗುತ್ತದೆ ಸಣ್ಣ ಮೊತ್ತದ ಕ್ಲೈಮ್ಗಳನ್ನು ಮಾನವ ಹಸ್ತಕ್ಷೇಪವಿಲ್ಲದೆ ದ್ವಾದತವಾಗಿ ಪ್ರಕ್ರಿಯೆಗೊಳಿಸುವ ಮೂಲಕ ಸಮಯವನ್ನು  ಉಳಿಸಲಾಗುತ್ತಿದೆ.

ಈ ವ್ಯವಸ್ಥೆಯಿಂದ ಅರ್ಜಿಗಳ ಬಾಕಿ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ಸದಸ್ಯರಿಗೆ ಹಣ ಬೇಗನೇ ಲಭ್ಯವಾಗುತ್ತದೆ ಡಿಜಿಟಲ್ ಆಡಳಿತದತ್ತ EPFO ಕೈಗೊಂಡಿರುವ ಪ್ರಮುಖ ಹೆಜ್ಜೆ ಆಗಿದೆ.

KYC ಪೂರ್ಣಗೊಳಿಸುವ ಅಗತ್ಯತೆ 

PF ಹಣವನ್ನು ಸುಲಭವಾಗಿ ಪಡೆಯಲು ಸದಸ್ಯರು ತಮ್ಮ KYC ವಿವರಗಳನ್ನು ನವೀಕರಿಸಬೇಕು ಆಧಾರ್ ಸಂಖ್ಯೆ , ಪಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರಗಳು ಸರಿಯಾಗಿ ಲಿಂಕ್ ಆಗಿರಬೇಕು.

KYC ಪೂರ್ಣಗೊಂಡಿದ್ದರೆ ಅರ್ಜಿ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ. ತಪ್ಪು ಮಾಹಿತಿ ಅಥವಾ ಅಪೂರ್ಣ ದಾಖಲೆಯಾಗಿದ್ದರೆ ಕ್ಲೈಮ್ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ. ಆದರಿಂದ ಸದಸ್ಯರು ತಮ್ಮ ವಿವರಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು.

 ಅಂತಿಮ ಮಾತು 

EPFO ಜಾರಿಗೆ ತಂದಿರುವ ಹೊಸ ನಿಯಮಗಳು ಮತ್ತು ಸೌಲಭ್ಯಗಳು ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಮಹತ್ವದ ಪ್ರಯೋಜನವನ್ನು ಒದಗಿಸುತ್ತಿದೆ. PF ಹಣವನ್ನು ಹಿಂಪಡೆಯುವ ಪ್ರಕ್ರಿಯೆ ಸರಳಗೊಂಡಿರುವುದರಿಂದ ತುರ್ತು ಸಂದರ್ಭಗಳಲ್ಲಿ ಸದಸ್ಯರು ತಮ್ಮ ಉಳಿತಾಯವನ್ನು ಸುಲಭವಾಗಿ ಬಳಸಿಕೊಳ್ಳಬಹುದು.  ನಿವೃತ್ತಿ, ವೈದ್ಯಕೀಯ ಚಿಕಿತ್ಸೆ ಶಿಕ್ಷಣ, ಮದುವೆ, ಮನೆ ಖರೀದಿ ಅಥವಾ ಉದ್ಯೋಗ ನಷ್ಟದಂತಹ ಸಂದರ್ಭದಲ್ಲಿ ಈ ಸೌಲಭ್ಯಗಳು ಆರ್ಥಿಕ ಭದ್ರತೆಯನ್ನು ಒದಗಿಸುತ್ತವೆ.

ಅದಾಗಿಯೂ PF ಹಣ ಮುಖ್ಯವಾಗಿ ನಿವೃತ್ತಿ ಜೀವನದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸಂಗ್ರಹವಾಗುವ ಉಳಿತಾಯವಾಗುವುದರಿಂದ ಅದನ್ನು ಅತ್ಯವಶ್ಯಕ ಸಂದರ್ಭದಲ್ಲಿ ಮಾತ್ರ ಬಳಸುವುದು ಸೂಕ್ತ. ಸರಿಯಾದ ಯೋಜನೆ ಮತ್ತು ಜವಾಬ್ದಾರಿಯುತ್ತಾ ಬಳಕೆಯ ಮೂಲಕ ಪಿಎಫ್ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು. EPFO ಹೊಸ ಕ್ರಮವಾಗಲೂ ಸದಸ್ಯರ ಜೀವನವನ್ನು ಇನ್ನಷ್ಟು ಸುಲಭಗೊಳಿಸುತ್ತಾ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.

 

Leave a Comment