Telegram Join My Telegram WhatsApp Join My WhatsApp

KSP Jobs 2026: 3991 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆರಂಭ, ತಿಂಗಳಿಗೆ ₹76,100 ವೇತನ

KSP Jobs 2026: 3991 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆರಂಭ, ತಿಂಗಳಿಗೆ ₹76,100 ವೇತನ 

 ಪರಿಚಯ 

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಮತ್ತೊಂದು ಭರ್ಜರಿ ಅವಕಾಶ ದೊರೆತಿದೆ. ರಾಜ್ಯದ ಪ್ರತಿಷ್ಠಿತ ಇಲಾಖೆಯಲ್ಲಿ ಒಂದಾದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(KSP)2026ನೇ ಸಾಲಿನ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 3991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಹೊಂದಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಉದ್ಯೋಗಗಳಿಗಾಗಿ ಸ್ಪರ್ಧೆ ಹೆಚ್ಚಾಗುತ್ತಿರುವ ನಡುವೆಯೇ ಕರ್ನಾಟಕ ಪೊಲೀಸ್ ಇಲಾಖೆಯಿಂದ ಬಂದಿರುವ ಈ ನೇಮಕಾತಿ ಪ್ರಕಟಣೆ ಅಭ್ಯರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಉತ್ತಮ ಸಂಬಳ, ಉದ್ಯೋಗ ಭದ್ರತೆ, ಸಾಮಾಜಿಕ ಗೌರವ ಮತ್ತು ಭವಿಷ್ಯದ ಭರ್ತಿ ಅವಕಾಶಗಳ ಕಾರಣದಿಂದ ಪೊಲೀಸ್ ಇಲಾಖೆ ಉದ್ಯೋಗಗಳಿಗೆ ಸದಾ ಹೆಚ್ಚಿನ ಬೇಡಿಕೆ ಇರುತ್ತದೆ.

ಈ ನೇಮಕಾತಿ ವಿಶೇಷತೆ ಎಂದರೆ ಪಿಯುಸಿ ಅಥವಾ 12ನೇ ತರಗತಿ ಪಾಸ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅಭ್ಯರ್ಥಿಗಳು ಸಮಾನವಾಗಿ ಅವಕಾಶವನ್ನು ಬಳಸಿಕೊಳ್ಳಬಹುದು. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಈ ಹುದ್ದೆಗಳ ಮೂಲಕ ಲಭ್ಯವಾಗುತ್ತದೆ.

ನೇಮಕಾತಿಯ ಪ್ರಮುಖ ಮಾಹಿತಿ 

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪ್ರಕಟಿಸುವ ಅಧಿಸೂಚನೆಯ ಪ್ರಕಾರ ಈ ನೇಮಕಾತಿ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯಲಿದೆ. ಅಭ್ಯರ್ಥಿಗಳು ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅರ್ಹತೆ, ವಯೋಮಿತಿ,  ಪ್ರಕ್ರಿಯೆ ಮತ್ತು ಅಗತ್ಯ ದಾಖಲೆಗಳ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಮುಖ್ಯವಾಗಿದೆ.

 

ಹುದ್ದೆಗಳ ವಿವರ 

ಹುದ್ದೆ ಹೆಸರು :  ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ 

ಹುದ್ದೆಯ ಸಂಖ್ಯೆ :  3991

ಒಟ್ಟು 3991 ಹುದ್ದೆಗಳು ಭರ್ತಿ ಮಾಡಲು ಇಲಾಖೆ ಮುಂದಾಗಿದೆ. ಇದರಲ್ಲಿ ವಿವಿಧ ವರ್ಗಗಳಿಗೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಾತಿ ನಿಯಮಗಳನ್ನು ಅನ್ವಯಿಸಲಾಗಿದೆ.

ವಿದ್ಯಾರ್ಹತೆ 

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಅಗತ್ಯ ವಿದ್ಯಾರ್ಹತೆ ಹೊಂದಿರಬೇಕು.

ಅರ್ಹ ಅಭ್ಯರ್ಥಿಗಳು ಕೆಳಗಂಡ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

ಎಸ್ ಎಸ್ ಎಲ್ ಸಿ ( 10ನೇ ತರಗತಿ ) ಉತ್ತೀರ್ಣ, ಪಿಯುಸಿ ( 12ನೇ ತರಗತಿ )ಉತ್ತೀರ್ಣ

ವಿವಿಧ ಮೀಸಲಾತಿ ವರ್ಗಗಳಿಗೆ ಇಲಾಖೆ ನಿಯಮಾನುಸಾರ ಹೆಚ್ಚುವರಿ ಅರ್ಹತೆಗಳು ಅನ್ವಯಿಸಬಹುದು. ಆದ್ದರಿಂದ ಅಧಿಕೃತ ಅಧಿಸೂಚನೆಯನ್ನು ಓದುವುದು ಅಗತ್ಯವಾಗಿದೆ.

ಗ್ರಾಮೀಣ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ 

ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿ ವಿಶೇಷ ಅವಕಾಶವಾಗಿದೆ. ಹೆಚ್ಚಿನ ಅಭ್ಯರ್ಥಿಗಳು ಪಿಯುಸಿ ನಂತರವೇ ಉದ್ಯೋಗ ಹುಡುಕಾಟ ಆರಂಭಿಸುವ ಕಾರಣ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಸೇರುವ ಉತ್ತಮ ಅವಕಾಶ ಸಿಕ್ಕುತ್ತದೆ. ಪೊಲೀಸ್ ಇಲಾಖೆಯಲ್ಲಿ ಸೇರಿದ ನಂತರ ತರಬೇತಿ, ಸೇವಾ ಅನುಭವ ಮತ್ತು ಕಾರ್ಯಕ್ಷಮತೆಯ ಆದರದ ಮೇಲೆ ಹುದ್ದೆಗಳಿಗೆ ಭರ್ತಿ ಪಡೆಯುವ ಅವಕಾಶವು ಲಭ್ಯವಿದೆ. ಇದರಿಂದ ಅಭ್ಯರ್ಥಿಗಳು ದೀರ್ಘಕಾಲಿನ ವೃತ್ತಿ ಜೀವನ ರೂಪಿಸಿಕೊಳ್ಳಬಹುದು.

ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ 

ಈ ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಯ ಸಂಖ್ಯೆ  ಹೆಚ್ಚುತ್ತಿದೆ. ಮಹಿಳೆಯರಿಗೂ ಸಮಾನ ಅವಕಾಶವನ್ನು ನೀಡಲಾಗುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಸೌಲಭ್ಯಗಳು ಲಭ್ಯವಾಗಲಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪೊಲೀಸ್  ಸೇವೆಗೆ ಸೇರುವ ನಿರೀಕ್ಷೆ ಇದೆ.

ವಯೋಮಿತಿ ಎಷ್ಟಿರಬೇಕು 

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನಿಗದಿತ ವಯೋಮಿತಿಯನ್ನು ಹೊಂದಿರಬೇಕು ಸರ್ಕಾರಿ ನೇಮಕಾತಿಗಳಲ್ಲಿ ವಯೋಮಿತಿ ಪ್ರಮುಖ ಅರ್ಹತೆಯಲ್ಲಿ ಒಂದಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಮ್ಮ ವಯಸ್ಸು ಪರಿಶೀಲಿಸಬೇಕು.

ಅಧಿಸೂಚನೆ ಪ್ರಕಾರ ಅರ್ಜಿದಾರರ ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು. ಗರಿಷ್ಠ  ವಯೋಮಿತಿ  33 ವರ್ಷದವರೆಗೆ ನಿಗದಿಪಡಿಸಿರಬೇಕು. ಆದರೆ ವಿವಿಧ ಮೀಸಲಾತಿ  ವರ್ಗಗಳಿಗೆ ಸರ್ಕಾರದ ನಿಯಮನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ,  ಪ್ರವರ್ಗ -1, 2A, 2B, 3A, ಹಾಗೂ ನೀನು  3B ಅಭ್ಯರ್ಥಿಗಳಿಗೆ ಸರಕಾರದ ನಿಯಮದಂತೆ ಹೆಚ್ಚುವರಿ ವಯೋಮಿತಿ ಸಡಿಲಿಕೆ ದೊರೆಯುವ ಸಾಧ್ಯತೆ ಇದೆ.

 ವೇತನ

ಪೋಲಿಸ್ ಇಲಾಖೆಯ ಉದ್ಯೋಗಗಳ ಪ್ರಮುಖ ಆಕರ್ಷಣೆಗಳಲ್ಲಿ ಉತ್ತಮ ವೇತನವು ಒಂದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಆಕರ್ಷಕ ಸಂಬಳದ ಜೊತೆಗೆ ವಿವಿಧ ಭತ್ಯೆಗಳು ಹಾಗೂ ಸರ್ಕಾರಿ ಸೌಲಭ್ಯಗಳು ದೊರೆಯಲಿದೆ.

ವೇತನದ ವಿವರ  : 

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ : ₹37,500 ರಿಂದ 76,100

ಹೆಚ್ಚುವರಿ ಸೌಲಭ್ಯಗಳು : 

ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ, ವೈದ್ಯಕೀಯ ಸೌಲಭ್ಯ, ನಿವೃತ್ತಿ ಸೌಲಭ್ಯ, ಪಿಂಚಣಿ ಯೋಜನೆಗಳ ಪ್ರಯೋಜನ, ವೇತನ ಹೆಚ್ಚಳವಕಾಶ, ಕುಟುಂಬ ಭದ್ರತಾ ಸೌಲಭ್ಯಗಳು

ಇವೆಲ್ಲವನ್ನು ಸೇರಿದಾಗ ಪೊಲೀಸ್ ಇಲಾಖೆ ಉದ್ಯೋಗ ಆರ್ಥಿಕವಾಗಿ ಉತ್ತಮ ಭವಿಷ್ಯವನ್ನು ಒದಗಿಸುತ್ತದೆ .

ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ?

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ವಿವಿಧ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರತಿಯೊಂದು ಹಂತದಲ್ಲೂ ಅಭ್ಯರ್ಥಿಗಳು ಅರ್ಹತೆ ಸಾಬೀತುಪಡಿಸಬೇಕಾಗುತ್ತದೆ.

ಲಿಖಿತ ಪರೀಕ್ಷೆ 

ಮೊದಲ ಹಂತದಲ್ಲಿ ಅಭ್ಯರ್ಥಿಗಳು OMR ಆಧರಿತ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ತಾರ್ಕಿಕ ಸಂಪರ್ಕ, ಗಣಿತ ಹಾಗೂ ಭಾಷಾಜ್ಞಾನವನ್ನು ಪರೀಕ್ಷಿಸಲಾಗುತ್ತದೆ.

ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗುತ್ತಾರೆ.

ಸಹಿಷ್ಣತೆ ಪರೀಕ್ಷೆ 

ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ.

ಓಟ, ದೈಹಿಕ ಸಹಿಷ್ಣತೆ, ದೇಹದ ಸಾಮರ್ಥ್ಯ, ಮುಂತಾದ ಅಂಶಗಳನ್ನು ಪರೀಕ್ಷಿಸಲಾಗುತ್ತದೆ.

ಪೊಲೀಸ್ ಉದ್ಯೋಗದಲ್ಲಿ ದೈಹಿಕ ಸಾಮರ್ಥ್ಯ ಅತ್ಯಂತ ಮುಖ್ಯವಾದ ಕಾರಣ ಈ ಹಂತಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.

ದೈಹಿಕ ಮಾನದಂಡ ಪರೀಕ್ಷೆ 

ಸಹಿಷ್ಣತೆ ಪರೀಕ್ಷೆಯ ನಂತರ ಅಭ್ಯರ್ಥಿಗಳ ದೈಹಿಕ ಮಾನದಂಡಗಳನ್ನು ಪರಿಶೀಲಿಸಲಾಗುತ್ತದೆ.

ಎತ್ತರ, ಎದೆ ಸುತ್ತಳತೆ, ದೈಹಿಕ ಅರ್ಹತೆ, ಪರಿಶೀಲನೆ ನಡೆಯುತ್ತದೆ ಅಧಿಸೂಚನೆಯಲ್ಲಿ ಸೂಚಿಸಿರುವ  ಮಾನದಂಡಗಳು ಪೂರೈಸುವ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತಕ್ಕೆ ಅರ್ಹರಾಗುತ್ತಾರೆ.

ವೈದ್ಯಕೀಯ ಪರೀಕ್ಷೆ 

ಅಂತಿಮ ಆಯ್ಕೆಗೆ ಮುನ್ನ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

ಈ ಹಂತದಲ್ಲಿ

ದೃಷ್ಟಿ ಪರೀಕ್ಷೆ, ಶ್ರವಣ ಪರೀಕ್ಷೆ, ದೈಹಿಕ ಆರೋಗ್ಯ, ಸಾಮಾನ್ಯ ವೈದ್ಯಕೀಯ ಪರೀಕ್ಷೆ ನಡಿಸಲಾಗುತ್ತದೆ.

ವೈದ್ಯಕೀಯವಾಗಿ ಅರ್ಹರಾದ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

ಪೊಲೀಸ್ ಇಲಾಖೆಯಲ್ಲಿ ದೈಹಿಕ ಸಾಮರ್ಥ್ಯದ ಮಹತ್ವ 

ಪೊಲೀಸ್ ಸಿಬ್ಬಂದಿಯ  ಕರ್ತವ್ಯಗಳು ಸವಾಲಿನಿಂದ ಕೂಡಿರುತ್ತದೆ. ಅಪರಾಧ ನಿಯಂತ್ರಣ, ಕಾನೂನು ಸುವ್ಯವಸ್ಥೆ ಕಾಪಾಡುವುದು, ಜನರ ಸುರಕ್ಷತೆ ಹಾಗೂ ತುರ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವ ಜವಾಬ್ದಾರಿ ಇವರ ಮೇಲಿದೆ.

ಆದ್ದರಿಂದ ಅಭ್ಯರ್ಥಿಗಳು ಆರಂಭದಿಂದಲೇ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಉತ್ತಮ.

ತಯಾರಿ ಸಲಹೆಗಳು 

ಪ್ರತಿದಿನ ಬೆಳಿಗ್ಗೆ ಊಟ ಅಭ್ಯಾಸ ಮಾಡಿ, ನಿಯಮಿತ ವ್ಯಾಯಾಮ ಮಾಡಿ, ಪೌಷ್ಟಿಕ ಆಹಾರ ಸೇವಿಸಿ, ದೇಹದ ತೂಕ ನಿಯಂತ್ರದಲ್ಲಿ ಇಡಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಅರ್ಜಿ ಶುಲ್ಕ 

ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅರ್ಜಿ ಶುಲ್ಕದ ಸಂಪೂರ್ಣ ವಿವರವನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ಮೊದಲ ಅಭ್ಯರ್ಥಿಗಳು : ಶುಲ್ಕದ ವಿವರ ಪರಿಶೀಲಿಸಬೇಕು, ಆನ್ಲೈನ್ ಪಾವತಿ ವಿಧಾನ ತಿಳಿದುಕೊಳ್ಳಬೇಕು, ಪಾವತಿ ರಸೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.ಅಪೂರ್ಣ ಅರ್ಜಿಗಳನ್ನು ಇಲಾಖೆ ಪರಿಗಣಿಸುವುದಿಲ್ಲ.

ಅಭ್ಯರ್ಥಿಗಳು ಗಮನಿಸಬೇಕಾದ ಅಂಶಗಳು 

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಈ ವಿಷಯಗಳನ್ನು ಪರಿಶೀಲಿಸಬೇಕು.

ವಿದ್ಯಾರ್ಥಿ ಸರಿಯಾಗಿದೆಯೇ, ವಯೋಮಿತಿ ಪೂರೈಸಿದ್ದೀರಾ, ದಾಖಲೆಗಳು ಸಿದ್ಧವಿದೆಯಾ, ಮೊಬೈಲ್ ಸಂಖ್ಯೆ ಸಕ್ರಿಯವಾಗಿದೆಯಾ, ಇಮೇಲ್ ಐಡಿ ಕಾರ್ಯ ನಿರ್ವಹಿಸುತ್ತಿದೆಯಾ, ಈ ಅಂಶಗಳನ್ನು ಮುಂಚಿತವಾಗಿ ಪರಿಶೀಲಿಸಿದರೆ ಅರ್ಜಿ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ.

ಪ್ರಮುಖ ದಿನಾಂಕಗಳ ವಿವರ

ಅರ್ಜಿ ಆರಂಭ ದಿನಾಂಕ : 08 ಜೂನ್ 2026 

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 03 ಜುಲೈ 2026 

ಅರ್ಜಿ ಶುಲ್ಕ ಪಾವತಿ ಸಾಲದು ಕೊನೆ ದಿನಾಂಕ  : 04 ಜುಲೈ 2026 

ಅಗತ್ಯ ದಾಖಲೆಗಳ ಪಟ್ಟಿ 

ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಪಿಯುಸಿ/12 ತರಗತಿ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ನಿವಾಸಿ ಪ್ರಮಾಣ ಪತ್ರ, ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ, ಸಹಿ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ. ಈ ದಾಖಲೆಯನ್ನು ಹೊಂದಿರಬೇಕು. 

ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ 

  •  ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
  •  ನೇಮಕಾತಿ ಲಿಂಕ್ ಆಯ್ಕೆ ಮಾಡಿ
  •  ಹೊಸ ನೋಂದಣಿ ( Registration )ಮಾಡಿ
  •  ಅರ್ಜಿ ನಮೂನೆ ಭರ್ತಿ ಮಾಡಿ
  •  ದಾಖಲೆಗಳನ್ನು ಅಪ್ಲೋಡ್ ಮಾಡಿ
  •  ಅರ್ಜಿ ಶುಲ್ಕ ಪಾವತಿ ಮಾಡಿ
  •  ಅರ್ಜಿ ಸಲ್ಲಿಕೆ ಮಾಡಿ
  •  ಪ್ರಿಂಟ್ ತೆಗೆದುಕೊಳ್ಳಿ

ಪರೀಕ್ಷೆಯ ಸಿಲೆಬಸ್ಗಳು 

ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಸಂವಿಧಾನ, ಗಣಿತ, ತಾರ್ಕಿಕ ಸಾಮರ್ಥ್ಯ, ಕನ್ನಡ ಭಾಷೆ

ಸಮಾರೋಪ 

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 3991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ 2026 ಅತ್ಯಂತ ದೊಡ್ಡ ಸರ್ಕಾರಿ ಉದ್ಯೋಗ ಅವಕಾಶಗಳಲ್ಲಿ ಒಂದಾಗಿದೆ. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸನ್ನು ನನಸಾಗಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ.

ಉತ್ತಮ ವೇತನ, ಉದ್ಯೋಗ ಭದ್ರತೆ, ಸಮಾಜದಲ್ಲಿ ಗೌರವ, ವೈದ್ಯಕೀಯ ಸೌಲಭ್ಯ, ನಿವೃತ್ತಿ ಪ್ರಯೋಜನ, ಈ ನೇಮಕತೆ ಪ್ರಮುಖ ಆಕರ್ಷಣೆಗಳಾಗಿವೆ. ಆದ್ದರಿಂದ ಹರ ಅಭ್ಯರ್ಥಿಗಳು ಸಮಯ ವ್ಯರ್ಥ ಮಾಡದೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಉತ್ತಮ.

 Application Link :  https://ksp-recruitment.in/

 

Leave a Comment