Telegram Join My Telegram WhatsApp Join My WhatsApp

Air India Recruitment 2026 : PUC ಪಾಸ್ ಅಭ್ಯರ್ಥಿಗಳಿಗೆ ಭರ್ಜರಿವಕಾಶ  –  ವಿಮಾನಯಾನ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಲು ಸುವರ್ಣ ಅವಕಾಶ

Air India Recruitment 2026 : PUC ಪಾಸ್ ಅಭ್ಯರ್ಥಿಗಳಿಗೆ ಭರ್ಜರಿವಕಾಶ  –  ವಿಮಾನಯಾನ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಲು ಸುವರ್ಣ ಅವಕಾಶ

ಭಾರತ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ Air India  ಇದೀಗ ದೇಶಾದ್ಯಂತ ವಿವಿಧ ಹುದ್ದೆಗಳ ಬರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ  ಅರ್ಜಿಯನ್ನು  ಆಹ್ವಾನಿಸಿದೆ. ವಿಮಾನಯಾನ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ಕನಸು ಹೊಂದಿರುವ ಸಾವಿರಾರು ಯುವಕರಿಗೆ ಇದು ಮಹತ್ವದ ಅವಕಾಶವಾಗಿದೆ. ವಿಶೇಷವಾಗಿ 12 ತರಗತಿ ಪಾಸ್ ಮಾಡಿದ ಅಭ್ಯರ್ಥಿಗಳು, ಡಿಪ್ಲೋಮಾ ಹಾಗೂ ಪದವಿ ಪೂರ್ಣಗೊಳಿಸಿದ ಯುವಕರು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ಹೆಚ್ಚಾಗುತ್ತಿವೆ. ದೇಶದ ವಿಮಾನ ಸಂಚಾರ ವ್ಯವಸ್ಥೆ ವೇಗವಾಗಿ ವಿಸ್ತರಿಸುವ ಹಿನ್ನೆಲೆಯಲ್ಲಿ Air India ಸೇರಿದಂತೆ ಹಲವು ಸಂಸ್ಥೆಗಳು ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತಿವೆ. ಈ ಹಿನ್ನೆಲೆ Air India ಬಿಡುಗಡೆ ಮಾಡಿ ಇರುವ ನೇಮಕಾತಿ ಪ್ರಕ್ರಿಯೆ ಉದ್ಯೋಗ ಉದ್ಯೋಗಾಕಾಂಕ್ಷಿಗಳಿಗೆ  ಹೊಸ ಭರವಸೆ ಮೂಡಿಸಿದೆ.

Air India ಬಗ್ಗೆ ಮಾಹಿತಿ 

Air India ಭಾರತದಲ್ಲಿನ ಅತ್ಯಂತ ಪ್ರಸಿದ್ಧ ಮತ್ತು ವಿಶ್ವಾಸಾರ್ಹ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ. ದೇಶಿಯ ಹಾಗೂ ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಒದಗಿಸುವ ಈ ಸಂಸ್ಥೆ ಲಕ್ಷಾಂತರ ಪ್ರಯಾಣಿಕರ ವಿಶ್ವಾಸವನ್ನು ಗಳಿಸಿದೆ. ವೃತ್ತಿಪರ ಸೇವೆ, ಸುರಕ್ಷಿತ ಪ್ರಯಾಣ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಿಂದ Air India ವಿಮಾನಯಾನ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದೆ.

ಈ ಸಂಸ್ಥೆಯ ಬೆಳವಣಿಗೆಯೊಂದಿಗೆ ಹೊಸ ಉದ್ಯೋಗಾವಕಾಶಗಳಿಗೂ ಸೃಷ್ಟಿಯಾಗುತ್ತಿವೆ. ಅದೇ ಕಾರಣಕ್ಕೆ ವಿವಿಧ ವಿಭಾಗಗಳಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ.

ಯಾವ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ

Air India ಹಲವು ವಿಭಾಗದಲ್ಲಿ ಅರ್ಹ  ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಹಾಗೂ ಕೌಶಲ್ಯಕ್ಕೆ ಅನುಗುಣವಾಗಿ ವಿವಿಧ ಹುದ್ದೆಗಳು ಲಭ್ಯವಿದೆ.

Trainee Cabin Crew 

ಕ್ಯಾಬಿನ್ ಕ್ರೂ ಹುದ್ದೆ ವಿಮಾನಯಾನ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯ ಉದ್ಯೋಗದಲ್ಲಿ ಒಂದಾಗಿದೆ. ಸೈನಿಕರ ಸುರಕ್ಷತೆ ಹಾಗೂ ಹಾರೈಕೆಯ ಜವಾಬ್ದಾರಿ ಈ ಹುದ್ದೆಯ ಸಿಬ್ಬಂದಿಯರಾಗಿರುತ್ತದೆ. ಉತ್ತಮ ಸಂವಹನ ಕೌಶಲ್ಯ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

Passenger Service Agent 

ಪ್ರಯಾಣಿಕರಿಗೆ ಟಿಕೆಟ್ ಚೆಕಿಂಗ್ ಬೋರ್ಡಿಂಗ್ ಮತ್ತು ಇತರ ಸೇವೆಗಳನ್ನು ಒದಗಿಸುವ ಜವಾಬ್ದಾರಿ Passenger Service Agent  ಹುದ್ದೆಯಲ್ಲಿರುತ್ತದೆ. ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ಈ ಹುದ್ದೆಗೆ ಉತ್ತಮ ಸಂವಹನ ಕೌಶಲ್ಯ ಅಗತ್ಯವಿದೆ.

Ground Staff 

ವಿಮಾನ ನಿಲ್ದಾಣದ ದೈನಂದಿನ ಕಾರ್ಯಾಚರಣೆಯನ್ನು ಸುಗಮವಾಗಿ ನಿರ್ವಹಿಸುವ ಗ್ರೌಂಡ್ ಸ್ಟಾಪ್ ಸಿಬ್ಬಂದಿಯ ಪಾತ್ರ ಬಹಳ ಮಹತ್ವವಾಗಿದೆ. ಬ್ಯಾಗೇಜ್ ನಿರ್ವಹಣೆ, ಪ್ರಯಾಣಿಕರ ಸಹಾಯ ವಿಮಾನ ಕಾರ್ಯಾಚರಣೆಗೆ ಬೆಂಬಲ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಸಿಬ್ಬಂದಿ ನಿರ್ವಹಿಸುತ್ತಾರೆ.

Customer Service Executive 

ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವುದು, ಸಮಸ್ಯೆಗಳಿಗೆ ಪರಿಹಾರ ನೀಡುವುದು ಮತ್ತು ಉತ್ತಮ ಸೇವೆಯನ್ನು ಖಚಿತಪಡಿಸುವುದು ಇವರ ಪ್ರಮುಖ ಕರ್ತವ್ಯವಾಗಿದೆ.

Associated and Senior Associate 

ನಿರ್ವಹಣಾ ಹಾಗೂ ಆಡಳಿತ ವಿಭಾಗದಲ್ಲಿ Associated and Senior Associate ಹುದ್ದೆಗಳ ಲಭ್ಯವಿದ್ದು,  ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ.

Airport Operations Staff 

ವಿಮಾನ ನಿಲ್ದಾಣ ಕಾರ್ಯಾಚರಣೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ Airport Operations Staff  ಸಿಬ್ಬಂದಿಯಾಗಿರುತ್ತದೆ. ವಿಮಾನ ವೇಳಾಪಟ್ಟಿ, ಭದ್ರತೆ ಮತ್ತು ಕಾರ್ಯನಿರ್ವಹಣಾ ಚಟುವಟಿಕೆಗಳಲ್ಲಿ ಇವರ ಪ್ರಮುಖ ಪಾತ್ರ ವಹಿಸಿರುತ್ತಾರೆ.

ವಿದ್ಯಾರ್ಹತೆ ವಿವರ 

ಹುದ್ದೆಗಳಿಗೆ ಅನುಗುಣವಾಗಿ ವಿಭಿನ್ನ ವಿದ್ಯಾರ್ಥಿಗಳನ್ನು ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ಕೆಳಗಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

12ನೇ ತರಗತಿ ಪಾಸ್ ಅಭ್ಯರ್ಥಿಗಳು, ಡಿಪ್ಲೋಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು, ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅಭ್ಯರ್ಥಿಗಳು, ಇಂಜಿನಿಯರಿಂಗ್ ಪದವೀಧರರು, ಎವಿಯೇಷನ್ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ವಿಶೇಷ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳು, ಕೆಲವು ತಾಂತ್ರಿಕ ಹುದ್ದೆಗಳಿಗೆ ಹೆಚ್ಚುವರಿ ಅರ್ಹತೆ ಹಾಗೂ ಅನುಭವ ಅಗತ್ಯ ಇರಬಹುದು.

ವಯೋಮಿತಿ ವಿವರ

Air India ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನಿಗದಿತ ವಯೋಮಿತಿಯನ್ನು ಹೊಂದಿರಬೇಕು. ಸಾಮಾನ್ಯವಾಗಿ ಕನಿಷ್ಟ 18 ವರ್ಷ ವಯಸ್ಸು ಪೂರ್ಣಗೊಂಡಿರಬೇಕು. ವಿವಿಧ ಹುದ್ದೆಗಳಿಗೆ ಗರಿಷ್ಠ  ವಯೋಮಿತಿ ಬದಲಾಗಬಹುದು.

ಕ್ಯಾಬಿನ್ ಕ್ರೂ ಮತ್ತು ಗ್ರಾಹಕ ಸೇವೆ ವಿಭಾಗದ ಹುದ್ದೆಗಳಿಗೆ ಯುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಕೆಲವು ಉದ್ಯೋಗಗಳಲ್ಲಿ ವಯೋಮಿತಿಯಲ್ಲಿ ಸಡಿಲಿಕೆ ದೊರೆಯುವ ಸಾಧ್ಯತೆ ಇರುತ್ತದೆ. ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಿರುವ ವಯೋಮಿತಿ ಮಾಹಿತಿಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪರಿಶೀಲಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ 

Air India ನೇಮಕಾತಿಯಲ್ಲಿ ಅಭ್ಯರ್ಥಿಗಳ ಕೌಶಲ್ಯ, ಸಂವಾಹನ ಸಾಮರ್ಥ್ಯ ಹಾಗೂ ವೃತ್ತಿ ಪರತೆಯನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ. ಹುದ್ದೆಗೆ ಅನುಗುಣವಾಗಿ ಆಯ್ಕೆಯ ವಿಧಾನದಲ್ಲಿ ಬದಲಾವಣೆ ಇರಬಹುದು.

ಸಾಮಾನ್ಯವಾಗಿ ಅಭ್ಯರ್ಥಿಗಳು ಕೆಳಗಿನ ಹಂತವನ್ನು ಎದುರಿಸಬೇಕಾಗುತ್ತದೆ.

  •  ಆನ್ಲೈನ್ ಅರ್ಜಿಗಳ ಪರಿಶೀಲನೆ
  •  ಲಿಖಿತ ಪರೀಕ್ಷೆ
  •  ಕೌಶಲ್ಯ ಪರೀಕ್ಷೆ
  •  ವೈಯಕ್ತಿಕ ಸಂದರ್ಶನ
  •  ದಾಖಲೆಗಳ ಪರಿಶೀಲನೆ
  •  ವೈದ್ಯಕೀಯ ಪರೀಕ್ಷೆ

Air India ಉದ್ಯೋಗಿಗಳ  ವೇತನ ಎಷ್ಟು ?

Air India ಸಂಸ್ಥಿತನ ಉದ್ಯೋಗಿಗಳಿಗೆ ಆಕರ್ಷಣ ವೇತನ ಮತ್ತು ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ. ಹುದ್ದೆ, ಅನುಭವ ಹಾಗೂ ಕೆಲಸದ ಸ್ಥಳಕ್ಕೆ ಅನುಗುಣವಾಗಿ ವೇತನ ಬದಲಾಗಬಹುದು.

ಗ್ರೌಂಡ್ ಸ್ಟಾಪ್ ವೇತನ 

ಗ್ರೌಂಡ್ ಸ್ಟಾರ್ ಹುದ್ದೆಗಳಲ್ಲಿ  ಕೆಲಸ ಮಾಡುವ ಅಭ್ಯರ್ಥಿಗಳು ತಿಂಗಳಿಗೆ ಸುಮಾರು ₹25,000 ರಿಂದ ₹45,000 ವರೆಗೆ ವೇತನ ಪಡೆಯುವ ಸಾಧ್ಯತೆ ಇದೆ.

ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್ 

ಈ ಹುದ್ದೆಯಉದ್ಯೋಗಿಗಳಿಗೆ ಆರಂಭಿಕ ಅಂತದಲ್ಲಿ ₹30,000 ರಿಂದ ₹50,000 ವರೆಗೆ ವೇತನ ದೊರೆಯಬಹುದು.

ಕ್ಯಾಬಿನ್ ಕ್ರೂ

ಕ್ಯಾಬಿನ್ ಕ್ರೂ ಹುದ್ದೆ ವಿಮಾನಯಾನ ಕ್ಷೇತ್ರದ ಅತ್ಯಂತ ಆಕರ್ಷಕ ಉದ್ಯೋಗದಲ್ಲಿ ಒಂದಾಗಿದೆ.  ಆರಂಭಿಕ ಹಂತದಲ್ಲಿಯೇ ₹40,000 ರಿಂದ  ₹90,000 ಅಥವಾ ಅದಕ್ಕಿಂತ ಹೆಚ್ಚಿನ ವೇತನ ಪಡೆಯುವ ಅವಕಾಶವಿದೆ.

ಅಸೋಸಿಯೇಟ್ ಮತ್ತು ಸೀನಿಯರ್ ಅಸೋಸಿಯೇಟ್ 

ನಿರ್ವಹಣಾ ವಿಭಾಗದ ಹುದ್ದೆಗಳಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳು ಅನುಭವದ ಆಧಾರದ ಮೇಲೆ ₹50,000 ಕಿಂತ ಹೆಚ್ಚಿನ ವೇತನ ಪಡೆಯಬಹುದು.

Air India ಉದ್ಯೋಗದ ಪ್ರಮುಖ ಸೌಲಭ್ಯಗಳು

ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕೇವಲ ಸಂಬಳ ಮಾತ್ರವಲ್ಲದೆ ಅನೇಕ ಹೆಚ್ಚುವರಿ ಸೌಲಭ್ಯಗಳು ಲಭ್ಯವಾಗುತ್ತದೆ.

  • ವಿಮಾನ ಪ್ರಯಾಣ ರಿಯಾಯಿತಿ
  •  ಆರೋಗ್ಯ ವಿಮೆ
  •  ಭವಿಷ್ಯನಿಧಿ (PF)
  •  ತರಬೇತಿ ಕಾರ್ಯಕ್ರಮಗಳು
  •  ವೃತ್ತಿ ಬೆಳವಣಿಗೆಗೆ ಅವಕಾಶ
  •  ಅಂತರಾಷ್ಟ್ರೀಯ ಅವಕಾಶಗಳು

Air India ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ 

Air India ಸಂಸ್ಥೆ ತನ್ನ ಅಧಿಕೃತ ಕರಿಯರ್ ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿಗಳನ್ನು ಸ್ವೀಕರಿಸುತ್ತದೆ. ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ವಯೋಮಿತಿ ಮತ್ತು ಇತರ ಅರ್ಹತ ಮಾನದಂಡಗಳನ್ನು ಸರಿಯಾಗಿ ಪರಿಶೀಲಿಸಬೇಕು. ತಪ್ಪು ಮಾಹಿತಿಯನ್ನು ನೀಡುವುದರಿಂದ ಅರ್ಜಿ ರದ್ದು ಆಗುವ ಸಾಧ್ಯತೆ ಇರುತ್ತದೆ.

  •  ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  •  ಸೂಕ್ತ ಹುದ್ದೆ ಆಯ್ಕೆ ಮಾಡಿ
  •  ನೊಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ
  •  ಅರ್ಜಿ ನಮೂನೆ ಭರ್ತಿ ಮಾಡಿ
  •  ದಾಖಲೆಗಳನ್ನು ಅಪ್ಲೋಡ್ ಮಾಡಿ
  •  ಅರ್ಜಿಯನ್ನು ಪರಿಶೀಲಿಸಿ
  •  ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರಿಂಟ್ ಅಥವಾ PDF ಪ್ರತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು 

Air India ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಲವು ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.

  • SSLC ಅಂಕಪಟ್ಟಿ
  • PUC ಅಂಕಪಟ್ಟಿ
  •  ಪದವಿ ಪ್ರಮಾಣ ಪತ್ರ
  •  ಆಧಾರ್  ಕಾರ್ಡ್
  •  ಪಾಸ್ ಪೋರ್ಟ್ ಗಾತ್ರದ ಫೋಟೋ
  •  ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  •  ರೆಸ್ಯೂಮ್

ಮಹಿಳಾ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ 

Air India ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೂ ಹೆಚ್ಚಿನ ಅವಕಾಶವಿದೆ. ವಿಶೇಷವಾಗಿ ಕ್ಯಾಬಿನ್ ಕ್ರೂ, ಕಸ್ಟಮರ್ ಸರ್ವಿಸ್ ಹಾಗೂ ಪ್ಯಾಸೆಂಜರ್ ಸರ್ವಿಸ್ ವಿಭಾಗಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೂ ಉತ್ತಮ ವೃತ್ತಿ ನಿರ್ಮಿಸಿಕೊಳ್ಳಬಹುದು.

ವೃತ್ತಿಪರ ತರಬೇತಿ, ಸುರಕ್ಷಿತ ಕೆಲಸದ ವಾತಾವರಣ ಹಾಗೂ ಆಕರ್ಷಕ ವೇತನದಿಂದಾಗಿ ಅನೇಕ ಮಹಿಳೆಯರು ವಿಮಾನಯಾನ ಕ್ಷೇತ್ರವನ್ನು ವೃತ್ತಿಯಾಗಿ ಆಯ್ಕೆ ಮಾಡುತ್ತಿದ್ದಾರೆ.

ಹೊಸಬರಿಗೆ ಇರುವ ಅವಕಾಶಗಳು 

ಅನುಭವಿಲ್ಲದ ಅಭ್ಯರ್ಥಿಗಳಿಗೂ ಹಲವು ಉದ್ಯೋಗಗಳಲ್ಲಿ ಅವಕಾಶ ನೀಡಲಾಗುತ್ತಿದೆ. ಆಯ್ಕೆಯಾದ ನಂತರ ಸಂಸ್ಥೆ ಅಗತ್ಯ ತರಬೇತಿಯನ್ನು ನೀಡುತ್ತದೆ.

ಆದ್ದರಿಂದ ಪಿಯುಸಿ, ಡಿಪ್ಲೋಮಾ ಅಥವಾ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

Air India ಉದ್ಯೋಗಕ್ಕೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳು

ವಿಮಾನಯಾನ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕೆಲವು ಪ್ರಮುಖ ಕೌಶಲ್ಯಗಳು ಅಗತ್ಯವಾಗುತ್ತದೆ.

ಉತ್ತಮ ಸಂವಹನ ಕೌಶಲ್ಯ, ಗ್ರಾಹಕ ಸೇವಾ ಮನೋಭಾವ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ತಂಡದೊಂದಿಗೆ ಕೆಲಸ ಮಾಡುವ ಕೌಶಲ್ಯ, ಸಮಯ ನಿರ್ವಹಣೆ, ಒತ್ತಡದ  ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ, ವೃತ್ತಿಪರ ನಡುವಳಿಕೆ, ಈ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಸಾಧನೆ ಮಾಡಬಹುದು.

ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ವಿಷಯಗಳು 

ಅಭ್ಯರ್ಥಿಗಳ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು.

ಅರ್ಜಿ ನಮೂನೆಯಲ್ಲಿ ಸರಿಯಾದ ಮಾಹಿತಿಯನ್ನು ಮಾತ್ರ ನಮೂದಿಸಬೇಕು.

ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.

ಕೊನೆಯ ದಿನಾಂಕದವರೆಗೆ ಕಾಯದ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.

ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಮತ್ತು ಸೂಚನೆಗಳನ್ನು ನಿಯಮಿತವಾಗಿ ಪರಿಶೀಸಬೇಕು.

ಕೊನೆಯ ಮಾತು 

Air India Recruitment 2026 ನೇಮಕಾತಿಯು ವಿಮಾನಯಾನ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ಉತ್ತಮ ವೇತನ, ವೃತ್ತಿಪರ ತರಬೇತಿ, ವೃತ್ತಿ ಬೆಳವಣಿಗೆಗೆ ಅವಕಾಶಗಳು ಮತ್ತು ಪ್ರತಿಷ್ಠ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಈ ನೇಮಕಾತಿಯ ಪ್ರಮುಖ ಆಕರ್ಷಣೆಗಳಾಗಿವೆ.

ನೀವು ಪಿಯುಸಿ, ಡಿಪ್ಲೋಮಾ ಅಥವಾ ಪದವಿ ಪಾಸ್ ಆಗಿದ್ದರೆ ಮತ್ತು ವಿಮಾನಯಾನ ಕ್ಷೇತ್ರದಲ್ಲಿ ಯಶಸ್ಸು ವೃತ್ತಿಜೀವನ  ನಿರ್ಮಿಸಿಕೊಳ್ಳುವ  ಕನಸು ಹೊಂದಿದ್ದರೆ ನಿಮ್ಮ ಅರ್ಹತೆ ಅನುಗುಣವಾದ ಹುದ್ದೆಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. Air India ಎಂತಹ ಪ್ರತಿಷ್ಟ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವುದು ನಿಮ್ಮ ವೃತ್ತಿ ಜೀವನಕ್ಕೆ ಹೊಸ ದಿಕ್ಕು ಮತ್ತು ಹೊಸ ಅವಕಾಶಗಳನ್ನು ತೆರೆದಿಡಿದಿದೆ.

 

Leave a Comment