PM Awas Yojana 2026: ಉಚಿತ ಮನೆ ಪಡೆಯಲು ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿ, ಅರ್ಹತೆ ದಾಖಲೆಗಳು ಹಾಗೂ ಸಂಪೂರ್ಣ ಮಾಹಿತಿ
ಸ್ವಂತ ಮನೆಯ ಕನಸನ್ನು ನನಸಾಗಿಸುತ್ತಿರುವ ಕೇಂದ್ರ ಸರ್ಕಾರದ ಮಹತ್ವ ಯೋಜನೆ
ಸ್ವಂತ ಮನೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಜೀವನ ದೊಡ್ಡ ಕನಸುಗಳಲ್ಲಿ ಒಂದಾಗಿದೆ. ಉತ್ತಮ ಶಿಕ್ಷಣ, ಸ್ಥಿರ ಉದ್ಯೋಗ ಮತ್ತು ಆರ್ಥಿಕ ಭದ್ರತೆಯ ಜೊತೆಗೆ ಒಂದು ಸುರಕ್ಷಿತ ಮನೆ ಹೊಂದುವುದು ಪ್ರತಿಯೊಬ್ಬರ ಕುಟುಂಬದ ಆಶಯವಾಗಿದೆ. ಆದರೆ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಮನೆ ನಿರ್ಮಾಣ ಅಥವಾ ಮನೆ ಖರೀದಿಸುವುದು ಅನೇಕ ಕುಟುಂಬಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಹಾಗೂ ನಗರ ಪ್ರದೇಶಗಳಲ್ಲಿರುವ ಆರ್ಥಿಕವಾಗಿ ದುರ್ಬಲ ವರ್ಗದ ಕುಟುಂಬದ ತಮ್ಮ ಸ್ವಂತ ಮನೆ ಕಟ್ಟಲು ಕಷ್ಟಪಡುತ್ತಿದ್ದಾರೆ.
ಈ ಸಮಸ್ಯೆಯನ್ನು ಮನಗಂಡು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆ(PM Awas Yojana) ಯನ್ನು ಜಾರಿಗೆ ತಂದಿದೆ ಈ ಯೋಜನೆ ಪ್ರಮುಖ ಉದ್ದೇಶ ದೇಶದ ಪ್ರತಿಯೊಬ್ಬ ಅರ್ಹ ಕುಟುಂಬಕ್ಕೂ ಸುರಕ್ಷಿತ ಮತ್ತು ಶಾಶ್ವತ ವಸತಿ ಸೌಲಭ್ಯ ಒದಗಿಸುವುದಾಗಿದೆ. ಮನೆ ಇಲ್ಲದವರು ಅಥವಾ ಶಿಥಿಲಗೊಂಡ ವಾಸಸುತ್ತಿರುವ ಈ ಯೋಜನೆಯಲ್ಲಿ ಆರ್ಥಿಕ ನೆರವನ್ನು ಪಡೆದು ತಮ್ಮ ಸ್ವಂತ ಮನೆ ನಿರ್ಮಿಸಿಕೊಳ್ಳಬಹುದು.
ಕಳೆದ ಕೆಲವು ವರ್ಷಗಳಲ್ಲಿ ಲಕ್ಷಾಂತರ ಕುಟುಂಬಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದೆ 2026ರಲ್ಲಿಯೂ ಯೋಜನೆ ಅಡಿ ಹೊಸ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ ವಿಶೇಷವೆಂದರೆ ಈಗ ಮೊಬೈಲ್ ಫೋನ್ ಬಳಸಿ ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಒದಗಿಸಿದೆ ಇದರಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ಇರುವುದಿಲ್ಲ. ಇದರಿಂದ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು.
PM Awas Yojana
ಪ್ರಧಾನ ಮಂತ್ರಿ ಆವಾಸ್ ಯೋಜನೆ ಕೇಂದ್ರ ಸರ್ಕಾರದ ಪ್ರಮುಖ ವಸತಿ ಯೋಜನೆಯಾಗಿದೆ. ಈ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮನೆ ನಿರ್ಮಾಣ ಅಥವಾ ಮನೆ ಖರೀದಿಗಾಗಿ ಆರ್ಥಿಕ ನೆರ ಒದಗಿಸಲಾಗಿದೆ. ದೇಶದ ಎಲ್ಲಾ ಅರ್ಹ ಕುಟುಂಬಗಳಿಗೆ ಪಕ್ಕ ಮನೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ.
ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಪ್ರತ್ಯೇಕ ವಿಭಾಗಗಳನ್ನು ರೂಪಿಸಲಾಗಿದೆ. ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ, ಗ್ರಾಮೀಣ(PMAY-G) ಮತ್ತು ನಗರ ಪ್ರದೇಶದ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಬನ್(PMAY-U) ಮೂಲಕ ನೆರವು ನೀಡಲಾಗುತ್ತದೆ.
ಈ ಯೋಜನೆಯ ಮೂಲಕ ಸರ್ಕಾರ ಕೆಲವು ಮನೆ ನಿರ್ಮಾಣಕ್ಕೆ ಹಲವು ನೆರವು ನೀಡುವುದಲ್ಲದೆ ಶೌಚಾಲಯ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಸೌಲಭ್ಯ ಹಾಗೂ ಇತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಒತ್ತು ನೀಡುತ್ತಿದೆ. ಇದರಿಂದ ಫಲಾನುಭವಿಗಳ ಜೀವನ ಮಟ್ಟದಲ್ಲಿ ಸುಧಾರಣೆ ಕಂಡುಬರುತ್ತದೆ.
ಯೋಜನೆ ಪ್ರಮುಖ ಉದ್ದೇಶ
PM Awas Yojana ಯೋಜನೆಯ ಪ್ರಮುಖ ಉಗುರಿ ದೇಶದ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ವಸತಿ ಭದ್ರತೆ ಒದಗಿಸುವುದಾಗಿದೆ. ಮನೆ ಇಲ್ಲದ ಕುಟುಂಬಗಳಿಗೆ ಶಾಶ್ವತ ವಸತಿ ಸೌಲಭ್ಯ ಕಲ್ಪಿಸುವುದು ಯೋಜನೆ ಮೊದಲ ಆದ್ಯತೆಯಾಗಿದೆ.
ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಉತ್ತಮ ಜೀವನಮಟ್ಟ ಕಲ್ಪಿಸುವುದು ಯೋಜನೆಯ ಮತ್ತೊಂದು ಪ್ರಮುಖ ಉದ್ದೇಶವಾಗಿದೆ. ಪಕ್ಕ ಮನೆ ಹೊಂದುವುದರಿಂದ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಸೌಲಭ್ಯಗಳನ್ನು ಕಡಿಮೆ ಮಾಡುವುದು ಬಡತನ ಇರುವ ನಿವಾರಣೆಗೆ ಸಹಾಯ ಮಾಡುವುದು ಹಾಗೂ ಮಹಿಳೆಯರ ಹೆಸರಿನಲ್ಲಿ ಮನೆ ನೋಂದಾವಣೆ ಪ್ರೋತ್ಸಾಹಿಸುವುದು ಕೂಡ ಯೋಜನೆ ಪ್ರಮುಖ ಗುರಿಯಾಗಿದೆ.
PM Awas Yojana ಯೋಜನೆಯ ಪ್ರಯೋಜನಗಳು
ಯೋಜನೆ ಮೂಲಕ ಫಲಾನುಭವಿಗಳಿಗೆ ಅನೇಕ ರೀತಿಯ ಪ್ರಯೋಜನಗಳು ದೊರೆಯುತ್ತದೆ. ಮೊದಲನೇದಾಗಿ ಮನೆ ನಿರ್ಮಾಣಕ್ಕಾಗಿ ಸರ್ಕಾರದಿಂದ ನೇರ ಆರ್ಥಿಕ ನೆರವು ಲಭ್ಯವಾಗುತ್ತದೆ. ಇದರಿಂದ ಮನೆ ನಿರ್ಮಾಣದ ವೆಚ್ಚದ ಭಾರ ಕಡಿಮೆಯಾಗುತ್ತದೆ.
ಸ್ವಂತ ಮನೆ ಹೊಂದುವುದರಿಂದ ಕುಟುಂಬಕ್ಕೆ ಭದ್ರತೆ ಮತ್ತು ಸ್ಥಿರತೆ ದೊರೆಯುತ್ತದೆ. ಮಕ್ಕಳ ಶಿಕ್ಷಣ ಆರೋಗ್ಯ ಹಾಗೂ ಸಾಮಾಜಿಕ ಗೌರವ ಹೆಚ್ಚಲು ಸಹ ಸಹಕಾರಿಯಾಗಿದೆ.
ಬಾಡಿಗೆ ಮನೆಯಲ್ಲಿ ವಾಸಿಸುವ ಕುಟುಂಬಗಳಿಗೆ ಬಾಡಿಗೆ ವೆಚ್ಚದಿಂದ ಮುಕ್ತಿ ದೊರೆಯುತ್ತದೆ. ಇದರಿಂದ ಕುಟುಂಬದ ಆದಾಯವನ್ನು ಇತರೆ ಅಗತ್ಯಗಳಿಗೆ ಬಳಸಿಕೊಳ್ಳಬಹುದು.
ಯೋಜನೆಯಡಿ ಮನೆ ನಿರ್ಮಾಣದ ಜೊತೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಶೌಚಾಲಯ, ಕುಡಿಯುವ ನೀರು ವಿದ್ಯುತ್ ಮತ್ತು ರಸ್ತೆ ಸೌಲಭ್ಯಗಳು ಕುಟುಂಬದ ಜೀವನ ಮಟ್ಟವನ್ನು ಹೆಚ್ಚಿಸುತ್ತದೆ.
ಈ ಯೋಜನೆಯ ಅರ್ಹರು
ಯೋಜನೆ ಪ್ರಯೋಜನ ಪಡೆಯಲು ಕೆಲವು ಅರ್ಹತೆ ಮಾನದಂಡಗಳನ್ನು ಪೂರೈಸಬೇಕು. ಅರ್ಜಿದಾರರ ಕುಟುಂಬದ ಹೆಸರನ್ನು ಈ ದೇಶದ ಯಾವುದೇ ಭಾಗದಲ್ಲಿ ಪಕ್ಕ ಮನೆ ಇರಬಾರದು.
ಆರ್ಥಿಕವಾಗಿ ದುರ್ಬಲ ವರ್ಗದ ಕುಟುಂಬಗಳು ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ಹಾಗೂ ಸರ್ಕಾರ ನಿರ್ಧರಿಸಿದ ಮಾನದಂಡಗಳನ್ನು ಪೂರೈಸುವವರು ಅರ್ಜಿ ಸಲ್ಲಿಸಬಹುದು.
ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ದಿವ್ಯಂಗರು ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಯೋಜನೆಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಶಿಥಿಲಗೊಂಡ ಮನೆಗಳಲ್ಲಿ ವಾಸಿಸುತ್ತಿರುವ ಹಾಗೂ ಮನೆ ಇಲ್ಲದ ಕುಟುಂಬಗಳು ಯೋಜನೆ ಪ್ರಮುಖ ಫಲಾನುಭವಿಗಳಾಗಿರುತ್ತಾರೆ.
ಡಿಜಿಟಲ್ ವ್ಯವಸ್ಥೆಯಿಂದ ಅರ್ಜಿ ಪ್ರಕ್ರಿಯೆ ಸುಲಭ
ಹಿಂದೆ ಸರ್ಕಾರಿ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಲು ಕಚೇರಿಗೆ ಭೇಟಿ ನೀಡಬೇಕಾಗುತ್ತಿತ್ತು. ಆದರೆ ಈಗ ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ಸುಲಭವಾಗಿದೆ. ಮೊಬೈಲ್ ಫೋನ್ ಬಳಸಿ ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸಲು ಅವಕಾಶವನ್ನು ಸರ್ಕಾರ ಒದಗಿಸಿದೆ. ಇದರಿಂದ ಸಮಯ ಮತ್ತು ಹಣ ಎರಡು ಉಳಿಯುತ್ತದೆ.
ಅರ್ಜಿ ಪರಿಶೀಲಿಸುವುದು, ದಾಖಲೆ ಅಪ್ಲೋಡ್ ಮಾಡುವುದು ಹಾಗೂ ಮಾಹಿತಿಯನ್ನು ನವೀಕರಿಸುವುದು ಕೂಡ ಈಗ ಆನ್ಲೈನ್ ಮೂಲಕ ಸಾಧ್ಯವಾಗುತ್ತದೆ.
ಅಗತ್ಯ ದಾಖಲೆಗಳು
ಯಾವುದೇ ಸರ್ಕಾರ ಯೋಜನೆಗೆ ಅರ್ಜಿ ಸಲ್ಲಿಸುವಾಗ ಸರಿಯಾದ ದಾಖಲೆಗಳನ್ನು ಒದಗಿಸುವುದು ಅತ್ಯಂತ ಮುಖ್ಯವಾಗಿದೆ. ದಾಖಲೆಯಲ್ಲಿ ಯಾವುದೇ ತಪ್ಪು ಅಥವಾ ಅಪೂರ್ಣ ಮಾಹಿತಿ ಇದ್ದರೆ ಅರ್ಜಿ ಪರಿಶೀಲನೆ ಹಂತದಲ್ಲಿ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ. ಆದರಿಂದ ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿಕೊಳ್ಳಬೇಕು.
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ
- ಆದಾಯ ಪ್ರಮಾಣ ಪತ್ರ
- ಅರ್ಜಿದಾರರ ಹೆಸರು ವಿಳಾಸ
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
ಅರ್ಜಿ ಸಲ್ಲಿಸುವ ವಿಧಾನ
PM Awas Yojana ಯೋಜನೆಗ ಅರ್ಜಿ ಸಲ್ಲಿಸಲು ಬಯಸುವವರು ಕೆಳಗಿನ ಹಂತಗಳನ್ನು ಅನುಸರಿಸಬೇಕು.
ಹಂತ 1 : ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
ಮೊದಲು PM Awas Yojana ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ. ಅಲ್ಲಿ ಯೋಜನೆ ಸಂಬಂಧಿಸಿದೆ ಎಲ್ಲಾ ಮಾಹಿತಿ ಮತ್ತು ಅರ್ಜಿ ಆಯ್ಕೆಗಳು ಲಭ್ಯವಿರುತ್ತದೆ.
ಹಂತ 2 : ಅರ್ಜಿ ಆಯ್ಕೆಯನ್ನು ಆರಿಸಿ
ಮುಖ ಪುಟದಲ್ಲಿ Citizen Assessment ಅಥವಾ ಸಂಬಂಧಿತ ಅರ್ಜಿ ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ ನಿಮ್ಮ ವರ್ಗಕ್ಕೆ ಅನುಗುಣವಾದ ಆಯ್ಕೆಯನ್ನು ಆರಿಸಿ
ಹಂತ 3 : ಆಧಾರ್ ಸಂಖ್ಯೆ ನಮೂದಿಸಿ
ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ಪರಿಶೀಲಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸಕ್ರಿಯವಾಗಿರಬೇಕು.
ಹಂತ 4 : ಅರ್ಜಿ ನಮೂನೆಯನ್ನು ಭರ್ತಿ ಮಾಡಿ
ಅರ್ಜಿದಾರರ ಹೆಸರು ವಿಳಾಸ ಕುಟುಂಬದ ಸದಸ್ಯರ ಮಾಹಿತಿ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
ಹಂತ 5 : ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆದಾಯ ಪ್ರಮಾಣ ಪತ್ರ, ಫೋಟೋ ಹಾಗೂ ಇತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಹಂತ 6 : ಮಾಹಿತಿ ಪರಿಶೀಲಿಸಿ
ಅರ್ಜಿಯಲ್ಲಿ ನಮೂದಿಸಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಯಾವುದೇ ತಪ್ಪುಗಳಿದ್ದರೂ ತಿದ್ದುಪಡಿ ಮಾಡಿ.
ಹಂತ 7 : ಅರ್ಜಿ ಸಲ್ಲಿಸಿ
ಎಲ್ಲ ವಿವರಗಳು ಸರಿಯಾಗಿದ್ದರೆ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾದ ನಂತರ ನಿಮಗೆ Application number ಅಥವಾReference ID ದೊರೆಯುತ್ತದೆ.
ಹಂತ 8 : ಅರ್ಜಿ ಸ್ಥಿತಿ ಪರಿಶೀಲಿಸಿ
Application ID ಬಳಸಿ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸ್ಥಿತಿಯನ್ನು ಯಾವಾಗಲೂ ಬೇಕಾದರೂ ಪರಿಶೀಲಿಸಬಹುದು
ಸಮರೋಪ
PM Awas Yojana 2026 ಸ್ವಂತ ಮನೆ ಕನಸು ಕಾಣುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಆಶಾಕಿರಣವಾಗಿದೆ ಆರ್ಥಿಕವಾಗಿ ದುರ್ಬಲ ವರ್ಗದವರು ಹಾಗೂ ಮನೆ ಇಲ್ಲದ ಕುಟುಂಬಗಳಿಗೆ ಈ ಯೋಜನೆ ದೊಡ್ಡ ನೆರವಾಗುತ್ತಿದೆ. ಸರ್ಕಾರದ ಆರ್ಥಿಕ ಸಹಾಯದ ಮೂಲಕ ಸುರಕ್ಷಿತ ಮತ್ತು ಶಾಶ್ವತ ಮನೆ ನಿರ್ಮಿಸಿಕೊಳ್ಳುವ ಅವಕಾಶ ಲಭ್ಯವಾಗುತ್ತಿದೆ.
ನೀವು ಯೋಜನೆಯ ಅರ್ಹತೆ ಮಾನದಂಡಗಳು ಪೂರೈಸುತ್ತಿದ್ದರೆ ಅಗತ್ಯ ದಾಖಲೆಗಳು ಸಿದ್ಧಪಡಿಸಿ ಮೊಬೈಲ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಮಾರ್ಗಸೂಚಿಗಳನ್ನು ಪರಿಶೀಲಿಸಿ ಸರಿಯಾದ ಮಾಹಿತಿಯನ್ನು ನೀಡುವುದು ಅತ್ಯಂತ ಮುಖ್ಯವಾಗಿದೆ. ಸರಿಯಾದ ರೀತಿಯಲ್ಲಿ ಅರ್ಜಿ ಸಲ್ಲಿಸಿದರೆ ನಿಮ್ಮ ಸ್ವಂತ ಮನೆ ಕನಸು ಕೂಡ ಶೀಘ್ರದಲ್ಲಿ ನನಸಾಗಬಹುದು.