Telegram Join My Telegram WhatsApp Join My WhatsApp

LPG ಸಬ್ಸಿಡಿಯಲ್ಲಿ ಬಾರಿ ಬದಲಾವಣೆ ! ವರ್ಷಕ್ಕೆ ಕೇವಲ 4 ಸಿಲಿಂಡರ್ ಗಳಿಗೆ ಮಾತ್ರ ₹300 ಸಬ್ಸಿಡಿ – ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಹೊಸ ನಿಯಮ.

LPG ಸಬ್ಸಿಡಿಯಲ್ಲಿ ಬಾರಿ ಬದಲಾವಣೆ ! ವರ್ಷಕ್ಕೆ ಕೇವಲ 4 ಸಿಲಿಂಡರ್ ಗಳಿಗೆ ಮಾತ್ರ ₹300 ಸಬ್ಸಿಡಿ – ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಹೊಸ ನಿಯಮ.
ದೇಶದ ಕೋಟ್ಯಂತರ ಕುಟುಂಬಗಳಿಗೆ ಮಹತ್ವದ ಸುದ್ದಿ :

ಅಡುಗೆ ಅನಿಲವನ್ನು ಬಳಸುವ ಕೋಟ್ಯಾಂತರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ(PM Ujjwala Yojana) ಸಬ್ಸಿಡಿ ಪಡೆಯುತ್ತಿರುವ ಫಲಾನುಭವಿಗಳಿಗೆ ಹೊಸ ನಿಯಮ ಜಾರಿಯಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬದಲಾವಣೆ ಪ್ರಕಾರ ಉಜ್ವಲ ಯೋಜನೆಯಡಿ ಲಭ್ಯವಾಗುವ LPG  ಸಿಲಿಂಡರ್ ಸಬ್ಸಿಡಿಯ  ಮಿತಿಯನ್ನು ಕಡಿತಗೊಳಿಸಲಾಗಿದ್ದು ವರ್ಷಕ್ಕೆ ಕೇವಲ ನಾಲ್ಕು ತಿಂಗಳಿಗೆ ಮಾತ್ರ ₹300 ಸಬ್ಸಿಡಿ ದೊರೆಯಲಿದೆ  ಎಂಬ ಮಾಹಿತಿ ವ್ಯಾಪಕವಾಗಿ ಹರಡುತ್ತಿದೆ. ಈ ಸುದ್ದಿ ಲಕ್ಷಾಂತರ ಮಹಿಳೆಯರು ಹಾಗೂ ಬಡ ಕುಟುಂಬಗಳ ಗಮನ ಸೆಳೆದಿದ್ದು ಹೊಸ ನಿಯಮದ ಪರಿಣಾಮ ಏನಾಗುತ್ತೆ ಹಲವಾರು ವ್ಯಕ್ತಪಡಿಸುತ್ತಿದ್ದಾರೆ.

ಉಜ್ವಲ ಯೋಜನೆ ದೇಶದ ಬಡ ಕುಟುಂಬಗಳಿಗೆ ಹೇಗೆ ನೆರವಾಗಿದೆ ?

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಭಾರತ ಸರ್ಕಾರದ ಅತ್ಯಂತ ಜನಪ್ರಿಯ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ 2016ರಲ್ಲಿ ಆರಂಭವಾದ ಯೋಜನೆ ಪ್ರಕಾರ ಉದ್ದೇಶ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಹಿಳೆಯರಿಗೆ ಉಚಿತ  LPG ಸಂಪರ್ಕವನ್ನು ಒದಗಿಸುವುದಾಗಿತ್ತು ಹಿಂದೆ ಅನೇಕ ಕುಟುಂಬಗಳು ಅಡುಗೆಗಾಗಿ ಕಟ್ಟಿಗೆ ಕಲ್ಲೆದ್ದರೂ ಹಾಗೂ ಇತರ ಸಾಂಪ್ರದಾಯಿಕ ಇಂಧನಗಳನ್ನು ಬಳಸುತ್ತಿದ್ದರು ಇದರಿಂದ ಮಹಿಳೆಯರ ಆರೋಗ್ಯದ ಮೇಲೆ ದುಷ್ಟ ಪರಿಣಾಮ ಉಂಟಾಗುತ್ತಿತ್ತು ಉಜ್ವಲ ಯೋಜನೆ ಮೂಲಕ ಲಕ್ಷಾಂತರ ಮಹಿಳೆಯರು ಹೊಗೆರಹಿತ ಅಡುಗೆ ವ್ಯವಸ್ತೆಯ ಸೌಲಭ್ಯವನ್ನು ಪಡೆದು ಆರೋಗ್ಯಕರ ಜೀವದತ್ತ ಹೆಜ್ಜೆ ಇಟ್ಟಿದ್ದಾರೆ.

LPG ಬಳಕೆ ಪ್ರಮಾಣ ಮತ್ತು ಸಬ್ಸಿಡಿ ಮಹತ್ವ 

LPG ಸಿಲಿಂಡರ್ಗಳ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಸಬ್ಸಿಡಿ ಅನೇಕ ಕುಟುಂಬಗಳಲ್ಲಿ ಪ್ರಮುಖ ಆರ್ಥಿಕ ನೆರವಾಗಿತ್ತು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳು ಸಬ್ಸಿಡಿ ಹಣದ ಮೂಲಕ ಅಡುಗೆ ಅನಿಲವನ್ನು ಕಡಿಮೆ ವೆಚ್ಚದಲ್ಲಿ ಪಡೆಯುತ್ತಿರುವ ಸಾಧ್ಯವಾಗುತ್ತಿತ್ತು. LPG ಸಿಲಿಂಡರ್ ಖರೀದಿಸಿದ ಬಳಿಕ ಸರ್ಕಾರ ನೀಡುವ ಸಬ್ಸಿಡಿ ಮತ್ತು ನೆರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುವುದರಿಂದ  ಇದು ಪಾರದರ್ಶಕ ಹಾಗೂ ಪರಿಣಾಮಕಾರಿ ವ್ಯವಸ್ಥೆಯಾಗಿ  ಪರಿಣಮಿಸಿತು. ಡೈರೆಕ್ಟ್  ಬೆನಿಫಿಟ್  ಟ್ರಾನ್ಸ್ಫರ್(DBT) ವ್ಯವಸ್ಥೆಯ ಮೂಲಕ ಹಣ ವರ್ಗಾವಣೆ ಯಾವುದರಿಂದ ಮಧ್ಯವರ್ತಿಗಳ ಹಸ್ತಕ್ಷೇಪವು ಕಡಿಮೆಯಾಯಿತು.

ಹೊಸ ನಿಯಮದ ಹಿನ್ನೆಲೆ ಏನು

ಕೇಂದ್ರ ಸರ್ಕಾರದ ವಲಯಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಉಜ್ವಲಾ  ಯೋಜನೆ ಫಲಾನುಭವಿಗಳ LPG ಬಳಕೆಯ  ಮಾದರಿಯನ್ನು ಅಧ್ಯಯನದ ಮಾಡಿದ ಬಳಿಕ ಈ ಬದಲಾವಣೆಯಲ್ಲಿ ಪರಿಣಾಮ ಪರಿಗಣಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಫಲಾನುಭವಿಗಳು ವರ್ಷದಲ್ಲಿ ಸರಸರಿ ನಾಲ್ಕು ಅಷ್ಟೇ ಬಳಸುತ್ತಿರುವುದರಿಂದ ಸಬ್ಸಿಡಿಯನ್ನು ಅದಕ್ಕೆ ಅನುಗುಣವಾಗಿ ಮಿತಿಗೊಳಿಸಲು  ಬಗ್ಗೆ ಚಿಂತನೆ ನಡೆಸಲಾಗಿದೆ. ಸರ್ಕಾರದ ದೃಷ್ಟಿಯಲ್ಲಿ ಇದು ಸಬ್ಸಿಡಿ ವೆಚ್ಚವನ್ನು ನಿಯಂತ್ರಿಸುವ ಕ್ರಮವಾಗಿದ್ದು, ಯೋಜನೆಯ ಫಲಾನುಭವಿಗಳಿಗೆ ಹೆಚ್ಚು ಪರಿಣಾಮಕಾರಿ ಹೊಂದಿದೆ ಎಂದು ವಿವರಿಸಲಾಗಿದೆ.

ಸಬ್ಸಿಡಿ ಮಿತಿಯ ಬದಲಾವಣೆಯನ್ನು ಉಂಟಾಗುವ ಪರಿಣಾಮ 

ವರ್ಷಕ್ಕೆ ನಾಲ್ಕು ಸಿಲಿಂಡರ್ ಗಳಿಗೆ ಮಾತ್ರ ಸಬ್ಸಿಡಿ ದೊರೆಯುವ ನಿಯಮ ಜಾರಿಯಾದರೆ ಅನೇಕ ಕುಟುಂಬಗಳ LPG  ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಹೆಚ್ಚಿನ ಸದಸ್ಯರು ಹೊಂದಿರುವ ಕುಟುಂಬಗಳು ವರ್ಷದಲ್ಲಿ ಹೆಚ್ಚು  ಸಿಲಿಂಡರ್ ಗಳನ್ನು ಬಳಸುತ್ತಾರೆ. ಇಂತಹ ಕುಟುಂಬಗಳಿಗೆ ಮೊದಲ ನಾಲ್ಕು ಸಿಲಿಂಡರ್ ಗಳಿಗೆ ಮಾತ್ರ ಸಬ್ಸಿಡಿಸುವುದರಿಂದ ಉಳಿದ ಸಿಲಿಂಡರ್ ಗಳನ್ನು ಸಂಪೂರ್ಣ ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗುತ್ತದೆ.  ಇದರಿಂದ ಮಾನಸಿಕ ಹಾಗು ವಾರ್ಷಿಕ ಖರ್ಚಿನ ಬೆಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು.

ಸರ್ಕಾರದ ಆರ್ಥಿಕ ಹೊರೆ ಕಡಿತದ ಪ್ರಯತ್ನ

ಸಬ್ಸಿಡಿ ಯೋಜನೆಗಳು ಸರ್ಕಾರದ ಬಜೆಟ್ ನಲ್ಲಿ ದೊಡ್ಡ ಪ್ರಮಾಣದ ವೆಚ್ಚವನ್ನು ಒಳಗೊಂಡಿರುತ್ತದೆ. ಉಜ್ವಲ ಯೋಜನೆಯಡಿ ಕೋಟ್ಯಂತರ ಫಲಾನುಭವಿಗಳಿಗೆ LPG ಸಬ್ಸಿಡಿ ನೀಡಲಾಗುವುದರಿಂದ ಇದರ ಆರ್ಥಿಕ ಹೊರೆ ಸಾಕಷ್ಟು ಹೆಚ್ಚಾಗಿದೆ. ಸಬ್ಸಿಡಿಮಿತಿಯನ್ನು ಖಂಡಿತ ಗೊಳಿಸಲುವ ಮೂಲಕ ಸರ್ಕಾರ ವೆಚ್ಚವನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದೆ ಎನ್ನಲಾಗುತ್ತದೆ. ದೇಶದ ಹಣಕಾಸು ಪರಿಸ್ಥಿತಿ, ಇಂದನ ಆಮದು ವೆಚ್ಚ ಹಾಗೂ ಜಾಗತಿಕ ಮಾರುಕಟ್ಟೆಯ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿರಬಹುದೆ ಎಂಬ ವಿಶ್ಲೇಷಣೆಗಳು ವ್ಯಕ್ತವಾಗಿದೆ.

ಮಹಿಳೆಯರ ಆರೋಗ್ಯ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಉದ್ಯೋಗ ಯೋಜನೆಯ ಮಹತ್ವ

ಉಜ್ವಲಾ ಯೋಜನೆ ಕೇವಲ ಒಂದು ಸಬ್ಸಿಡಿ ಯೋಜನೆಯಲ್ಲ. ಇದು ಗ್ರಾಮೀಣ ಮಹಿಳೆಯರ ಆರೋಗ್ಯ ಮತ್ತು ಜೀವನಮಟ್ಟವನ್ನು ಸುಧಾರಿಸುವ ಸಾಮಾಜಿಕ ಕ್ರಾಂತಿಯಾಗಿ ಪರಿಣಮಿಸಿದೆ. ಕಟ್ಟಿಗೆ ಅಥವಾ ಕಲ್ಲಿದ್ದಲು ಬಳಸಿ ಅಡುಗೆ ಮಾಡುವುದರಿಂದ ಉಂಟಾಗುವ ಹಾಗೆ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು. LPG  ಬಳಕೆಯಿಂದ  ಮನೆಗಳ ಸ್ವಚ್ಛ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮೇಲೆ ಉತ್ತಮ ಪರಿಣಾಮ ಕಂಡುಬಂದಿದೆ. ಇದರಿಂದ ಉಜ್ವಲ ಯೋಜನೆಗೆ ದೇಶದಾದ್ಯಂತ  ವ್ಯಾಪಕ ಬೆಂಬಲ ಬಂದಿದೆ.

DBT ವ್ಯವಸ್ಥೆಯ ಮೂಲಕ ಸಬ್ಸಿಡಿ ವಿತರಣೆ

ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ DBT ವ್ಯವಸ್ಥೆ ಸರ್ಕಾರದ ಪ್ರಮುಖ ಸುಧಾರಣೆಯಾಗಿದೆ. LPG ಸಿಲಿಂಡರ್ ಕಾರ್ಯಸಿದ ನಂತರ ನಿಗದಿತ ಸಬ್ಸಿಡಿ ಮೊತ್ತ ಬ್ಯಾಂಕ್ ಖಾತೆ ವರ್ಗಾವಣೆಯಾಗುತ್ತದೆ ಇದರಿಂದ ಹಣದ ದುರುಪಯೋಗ ಕಡಿಮೆಯಾಗಿದ್ದು ಅರ್ಹ ಫಲಾನುಭವಿಗಳಿಗೆ ನೇರವಾಗಿ ಲಾಭ ತಲುಪುತ್ತಿದೆ. ಹೊಸ ನಿಯಮ ಜಾರಿಯಾದರೂ DBT ವ್ಯವಸ್ಥೆ ಮುಂದುವರಿಯುವುದರಿಂದ  ಸಬ್ಸಿಡಿ ಹಣ  ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

ಸಬ್ಸಿಡಿ ಪಡೆಯಲು ಅಗತ್ಯ ಷರತ್ತುಗಳು 

ಉಜ್ವಲಾ ಯೋಜನೆಯಡಿ ಸಬ್ಸಿಡಿ ಪಡೆಯಲು ಕೇವಲ ಮೂಲಭೂತ ಶರತ್ತುಗಳನ್ನು ಪಾಲಿಸಬೇಕು. ಆಧಾರ ಕಾರ್ಡ್ LPG ಸಂಪರ್ಕದೊಂದಿಗೆ ಲಿಂಕ್ ಆಗಿರಬೇಕು ಬ್ಯಾಂಕ್ ಖಾತೆ ಸಕ್ರಿಯವಾಗಿದ್ದು, LPG ಗ್ರಾಹಕ ಸಂಖ್ಯೆಯೊಂದಿಗೆ ಸಂಪರ್ಕ ಹೊಂದಿರಬೇಕು. DBT ವ್ಯವಸ್ಥೆ ಸಕ್ರಿಯವಾಗಿರಬೇಕು. ಈ ದಾಖಲೆಗಳಲ್ಲಿ ಯಾವುದೇ ಸಮಸ್ಯೆ ಇದ್ದರೆ ಸಬ್ಸಿಡಿ ಹಣ ಜಮಾ ಆಗುವುದರಲ್ಲಿ ವಿಳಂಬವಾಗುವ ಅಥವಾ ತೊಂದರೆ ಉಂಟಾಗುವ ಸಾಧ್ಯತೆ.

ಸಬ್ಸಿಡಿ ಸ್ಥಿತಿಯನ್ನು ಪರಿಶೀಲಿಸುವ ವಿಧಾನ 

ಇಂದಿನ ಡಿಜಿಟಲ್ ಯುಗದಲ್ಲಿ LPG ಸಬ್ಸಿಡಿ ಸುತ್ತಿಯನ್ನು ಪರಿಶೀಲಿಸುವುದು ಸುಲಭವಾಗಿದೆ. MyLPG ಪೋರ್ಟಲ್  ಮೂಲಕ ಫಲಾನುಭವಿಗಳು ತಮ್ಮ ಸಬ್ಸಿಡಿ ಇತಿಹಾಸವನ್ನು ಪರಿಶೀಲಿಸಬಹುದು. LPG ವಿತರಕರ ಅಧಿಕೃತ  ವೆಬ್ಸೈಟ್ಗಳಲ್ಲಿ ಕೂಡ ಸಬ್ಸಿಡಿ ವಿವರಗಳನ್ನು ನೋಡಬಹುದು. ಬ್ಯಾಂಕ್ ಖಾತೆ ಸ್ಟೇಟ್ಮೆಂಟ್ ಪರಿಶೀಲಿಸುವ ಮೂಲಕ DBT ಹಣಜಮ ಆಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬಹುದು. ಈ ವ್ಯವಸ್ಥೆಯನ್ನು ಫಲಾನುಭವಿಗಳಿಗೆ ಹೆಚ್ಚಿನ ಪಾರದರ್ಶಕತೆಯನ್ನು ಒದಗಿಸುತ್ತದೆ.

ಯೋಜನೆ ಭವಿಷ್ಯದ ಬಗ್ಗೆ ಚರ್ಚೆ

ಉಜ್ವಲಾ ಯೋಜನೆ ದೇಶದ ಅತ್ಯಂತ ಯಶಸ್ವಿ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿರುವುದರಿಂದ ಸರ್ಕಾರ ಮುಂದಿನ ದಿನಗಳಲ್ಲಿ ಯೋಜನೆಯನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಗಳಿವೆ. ಸಬ್ಸಿಡಿ ಮಿತಿಯಲ್ಲಿ ಬದಲಾವಣೆ ಮಾಡಿದರು ಬಡ ಕುಟುಂಬಗಳಿಗೆ ಎಲ್‌ಪಿಜಿ ಸೌಲಭ್ಯ ನಿರಂತರವಾಗಿ ಲಭ್ಯವಾಗುವಂತೆ  ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ತಜ್ಞರ ಅಭಿಪ್ರಾಯ ಪಡುತ್ತಿದ್ದಾರೆ. ಯೋಜನೆ ಪರಿಣಾಮ ಕಾರಿತ್ವವನ್ನು ಉಳಿಸಿಕೊಳ್ಳಲು ಸರ್ಕಾರ ಮತ್ತು ಪೆಟ್ರೋಲಿಯಂ ಇಲಾಖೆ ನಿರಂತರ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

LPG ಬಳಕೆಯನ್ನು  ಉತ್ತೇಜಿಸುವ ಅಗತ್ಯ 

ಸ್ವಚ್ಛ ಇಂಧನ ಬಳಕೆಯನ್ನು ಉತ್ತೇಜಿಸುವುದು ದೇಶದ ಪರಿಸರ ಹಾಗೂ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ. LPG ಬಳಕೆಯಿಂದ  ವಾಯುಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ಮನೆಯೊಳಗೆ ಹೊಗೆ ಸಮಸ್ಯೆ ನಿವಾರಣೆ ಆಗುತ್ತದೆ. ಆದ್ದರಿಂದ  LPG ಸಬ್ಸಿಡಿ ಯೋಜನೆಗಳು ಆರ್ಥಿಕ ನೆರವಿನ ಕಾರ್ಯಕ್ರಮವಲ್ಲ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಮಹತ್ವ ವನ್ನು ಹೊಂದಿದೆ.

ಅಂತಿಮ ಮಾತು

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ LPG ಸಬ್ಸಿಡಿ ಮಿತಿಯನ್ನು ವರ್ಷಕ್ಕೆ ನಾಲ್ಕು ಸಿಲಿಂಡರ್ ಗಳಿಗೆ ಇಳಿಸುವ ಕುರಿತು ಹರಿದಾಡುತ್ತಿರುವ ಮಾಹಿತಿಯು ದೇಶದ ಲಕ್ಷಾಂತರ ಫಲಾನುಭವಿಗಳ ಗಮನ ಸೆಳೆದಿದೆ.  ಸರ್ಕಾರದ ಉದ್ದೇಶ ಸಬ್ಸಿಡಿ ವೆಚ್ಚ ನಿಯಂತ್ರಣ ಮತ್ತು ನೈಜ ಬಳಕೆ ಅನುಗುಣವಾಗಿ ಯೋಜನೆಯನ್ನು ನಿರ್ವಹಿಸುವುದಾಗಿದ್ದರು ಇದರ ಪರಿಣಾಮವಾಗಿ ಕೆಲವು ಕುಟುಂಬಗಳ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಅದಾಗಿಯೂ  ₹300 ಸಬ್ಸಿಡಿ ಮುಂದುವರೆಯುತ್ತಿರುವುದರಿಂದ ಫಲಾನುಭವಿಗಳಿಗೆ ಇನ್ನೂ ಆರ್ಥಿಕ ನೆರವು ದೊರೆಯಲಿದೆ. ಉಜ್ವಲಾ ಯೋಜನೆಯ ಪ್ರಯೋಜನೆಗಳನ್ನು ನಿರಂತರವಾಗಿ ಪಡೆಯಲು ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಮತ್ತು LPG ಸಂಪರ್ಕ ವಿವರಗಳನ್ನು ನವೀಕರಿಸಿಕೊಂಡಿರುವುದು ಅಗತ್ಯ ಈ ಯೋಜನೆ ದೇಶದ ಬಡ ಕುಟುಂಬಗಳ ಜೀವನಮಟ್ಟ ಸುಧಾರಣೆಯಲ್ಲಿ ಮುಂದೆಯೂ ಪ್ರಮುಖ ಪಾತ್ರ ವಹಿಸಿದೆ.

 

 

Leave a Comment