Telegram Join My Telegram WhatsApp Join My WhatsApp

SSB ನೇಮಕಾತಿ 2026 – 1200 ಹೆಚ್ಚು ಹುದ್ದೆಗಳ ಭರ್ತಿ…! 10ನೇ, 12ನೇ,ITI ಡಿಪ್ಲೋಮಾ ಹಾಗೂ ಪದವೀಧರರಿಗೆ ಭರ್ಜರಿ ಅವಕಾಶ

SSB ನೇಮಕಾತಿ 2026 – 1200 ಹೆಚ್ಚು ಹುದ್ದೆಗಳ ಭರ್ತಿ…! 10ನೇ, 12ನೇ,ITI ಡಿಪ್ಲೋಮಾ ಹಾಗೂ ಪದವೀಧರರಿಗೆ ಭರ್ಜರಿ ಅವಕಾಶ

ಕೇಂದ್ರ ಸರಕಾರದ ಅಡಿಯಲ್ಲಿ ಉತ್ತಮ ಉದ್ಯೋಗ ಪಡೆಯಬೇಕು ಎಂಬ ಕನಸು ಸಾವಿರಾರು ಯುವಕರಿಗೆ ಇದೆ. ವಿಶೇಷವಾಗಿ ರಕ್ಷಣಾ ಹಾಗೂ ಭದ್ರತಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆ ಅನೇಕ ಅಭ್ಯರ್ಥಿಗಳಿಗೆ  ಕಾಣಸಿಗುತ್ತದೆ. ಇದೀಗ ಅಂತ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ ದೊರೆತಿದ್ದು, Sashastra Seema Bal(SSB) ವತಿಯಿಂದ 2026 ನೇ ಸಾಲಿನ ಭರ್ಜರಿ ನೇಮಕಾತಿ ಪ್ರಕ್ರಿಯೆ ಆರಂಭವಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ದೇಶದ ಗಡಿ ಭದ್ರತೆ ಮತ್ತು ರಾಷ್ಟ್ರೀಯ ಸುರಕ್ಷತೆಯಲ್ಲಿ ಮಹತ್ವದ ಪಾತ್ರ ವಹಿಸುವ SSB  ನಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕತಿಯಲ್ಲಿ ಹತ್ತನೇ ತರಗತಿ ಪಾಸ್ ಆದವರು, 12ನೇ ತರಗತಿ ಪಾಸ್ ಆದವರು, ಪದವಿದಾರರು ತನಕ ಅನೇಕ ಅಭ್ಯರ್ಥಿಗಳಿಗೆ ಅವಕಾಶ  ಕಲ್ಪಿಸಲಾಗಿದೆ.

SSB ಭಾರತ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಅರೇಸೈನಿಕ ಪಡೆಗಳಲ್ಲಿ ಒಂದಾಗಿದೆ. ದೇಶದ ಗಡಿ ಪ್ರದೇಶಗಳ ಭದ್ರತೆ, ಕಾನೂನು ಸುವ್ಯವಸ್ಥೆ ಮತ್ತು ದೇಶದ ಸುರಕ್ಷತೆಯನ್ನು ಕಾಪಾಡುವ ಮಹತ್ವದ ಜವಾಬ್ದಾರಿ ಈ ಪಡೆಯ ಮೇಲಿದೆ. ಅದರಿಂದ SSB ಉದ್ಯೋಗಗಳು ದೇಶ ಸೇವೆಯ ಜೊತೆಗೆ ಉತ್ತಮ ವೃತ್ತಿ ಜೀವನ ನಿರ್ಮಿಸಲು ಸಹಾಯಕವಾಗುತ್ತದೆ.

ಈ ನೇಮಕತಿಯಲ್ಲಿ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಹಲವು  ಹುದ್ದೆಗಳು ಖಾಲಿ ಇದ್ದು ದೇಶದ ವಿವಿಧ ರಾಜ್ಯಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪುರುಷರು  ಹಾಗೂ ಮಹಿಳೆಯರು ಎರಡು ವರ್ಗದ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಯಾವ ಯಾವ ಹುದ್ದೆಗಳು ಖಾಲಿ ಇವೆ 

SSB ನೇಮಕಾತಿಯಲ್ಲಿ ಹಲವು ವಿಭಾಗಗಳ ಹುದ್ದೆಗಳು ಸೇರಿವೆ. ತಾಂತ್ರಿಕ ಮತ್ತು ಆತಾಂತ್ರಿಕ  ವಿಭಾಗಗಳಲ್ಲಿಯೂ ನೇಮಕಾತಿ ನಡೆಯುತ್ತಿದೆ. ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಕೌಶಲ್ಯದ ಆಧಾರದ ಮೇಲೆ ವಿವಿಧ ಹುದ್ದೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ನೇಮಕತಿಯಲ್ಲಿ ಪ್ರಮುಖವಾಗಿ ಸೇರಿರುವ ಹುದ್ದೆಗಳು :

ಕಾನ್ಸ್ಟೇಬಲ್ (Driver), ಕಾನ್ಸ್ಟೇಬಲ್ (Tradesman), ಕಾನ್ಸ್ಟೇಬಲ್(Vaterinary), ಹೆಡ್ ಕಾನ್ಸ್ಟೇಬಲ್, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (ASI), ಸಬ್ ಇನ್ಸ್ಪೆಕ್ಟರ್(SI), ಸ್ಟಾಪ್ ನರ್ಸ್, ಪಾಯೋ ನಿಯರ್, ಕಮ್ಯುನಿಕೇಶನ್ ವಿಭಾಗದ ಹುದ್ದೆಗಳು ಸೇರಿದಂತೆ ಹಲವು ಅವಕಾಶ  ಲಭ್ಯವಿದೆ.

ಪ್ರತಿ ಹುದ್ದೆವು ವಿಭಿನ್ನ ಜವಾಬ್ದಾರಿಗಳನ್ನು ಹೊಂದಿದ್ದು, ಅಭ್ಯರ್ಥಿಗಲು ತಮ್ಮ  ವಿದ್ಯಾರ್ಹತೆ  ಹಾಗೂ ಮತ್ತು ಆಸಕ್ತಿಗೆ ಅನುಕೂಲವಾಗಿ ಹುದ್ದೆ ಆಯ್ಕೆ ಮಾಡಿಕೊಳ್ಳಬಹುದು.

ಹುದ್ದೆಗಳ ಸಂಖ್ಯೆಯ ವಿವರ

ವಿವಿಧ ವರದಿಗಳ ಪ್ರಕಾರ SSB ನಲ್ಲಿ  12,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿ ನಡೆಯುವ ಸಾಧ್ಯತೆ ಇದೆ. ಇದರಲ್ಲೂ ಪ್ರಮುಖವಾಗಿ ಕಾನ್ಸ್ಟೇಬಲ್ ಮತ್ತು ತಾಂತ್ರಿಕ ವಿಭಾಗದ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇವೆ ಎಂದು ತಿಳಿದು ಬಂದಿದೆ.

ConstableTradesman&Driver ಹುದ್ದೆಗಳಿಗೆ ಸುಮಾರು 827 ಸ್ಥಾನ ಲಭಿಸಿದ್ದು, Head Constable ಹುದ್ದೆಗಳಿಗೆ ಸುಮಾರು 23 ಅವಕಾಶಗಳಿವೆ. Sub inspector ಹುದ್ದೆಗಳಿಗೆ ಸುಮಾರು 51 ಸ್ಥಾನಗಳು ಖಾಲಿ ಇವೆ. ಇದಲ್ಲದೆ ಇತರೆ ತಾಂತ್ರಿಕ ಹಾಗೂ ಆಡಳಿತಮಕ ವಿಭಾಗದಲ್ಲಿಯೂ ನೇಮಕಾತಿ ನಡೆಯಲಿವೆ.

ಈ ಬಾರಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಲಭ್ಯವಿರುವುದರಿಂದ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವ ಅವಕಾಶ ಹೆಚ್ಚಾಗಿದೆ.

 ವಿದ್ಯಾರ್ಹತೆ ಏನು? 

SSB ನೇಮಕಾತಿಯಲ್ಲಿ ಹುದ್ದೆಗಳ ಪ್ರಕಾರ  ವಿದ್ಯಾರ್ಹತೆ ಬದಲಾಗುತ್ತದೆ. ಕೆಲವು ಹುದ್ದೆಗಳಿಗೆ ಕೇವಲ 10ನೇ ತರಗತಿ ಪಾಸಾದರೆ, ಕೆಲವು ತಾಂತ್ರಿಕ ಉದ್ದೇಶಗಳಿಗೆ ಡಿಪ್ಲೋಮಾ ಅಥವಾ ಪದವಿ ಅಗತ್ಯವಿರುತ್ತದೆ.

10ನೇ ತರಗತಿ ಪಾಸ್ ಅಭ್ಯರ್ಥಿಗಳು ಕಾನ್ಸ್ಟೇಬಲ್ ಟ್ರೇಡ್ಸ್ ಮ್ಯಾನ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 12ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ ಹೆಡ್ ಕಾನ್ಸ್ಟೇಬಲ್ ಹಾಗೂ ಕೆಲವು ತಾಂತ್ರಿಕ ವಿಭಾಗಗಳಲ್ಲಿ ಅವಕಾಶ ಲಭ್ಯವಿದೆ.

ITI ಪಾಸ್ ಅಭ್ಯರ್ಥಿಗಳಿಗೆ ಟ್ರೇಡ್ಸ್ ಮ್ಯಾನ್ ಹಾಗು ತಾಂತ್ರಿಕ ವಿಭಾಗಗಳಿಗೆ ಹೆಚ್ಚಿನ ಅವಕಾಶ ದೊರೆಯುತ್ತದೆ. ಎಲೆಕ್ಟ್ರಿಕಲ್, ವಿಟ್ಟರ್, ವೆಲ್ಡರ್, ಮೋಟರ್ ಮೆಕಾನಿಕ್, ಕಾರ್ಪೆಂಟರ್ ಪ್ಲಂಬರ್ ಸೇರಿದಂತೆ ವಿವಿಧ ಟ್ರೇಡ್ ಗಳಲ್ಲಿ ITI ಪೂರೈಸಿದವರು ಅರ್ಜಿ ಸಲ್ಲಿಸಬಹುದು.

ಡಿಪ್ಲೋಮಾ ಹಾಗೂ ಪದವೀಧರ ಅಭ್ಯರ್ಥಿಗಳಿಗೆ  ASI ಮತ್ತು SI ಹುದ್ದೆಗಳಿಗೆ ಅವಕಾಶ ನೀಡಲಾಗುತ್ತದೆ ಸಿವಿಲ್ ಇಂಜಿನಿಯರಿಂಗ್,  ಎಲೆಕ್ಟ್ರಾನಿಕ್, ಕಂಪ್ಯೂಟರ್ ಸೈನ್ಸ್, ಇಂಫಾರ್ಮೇಷನ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳು ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಸ್ಟಾಪ್ ನೋಟ್ಸ್ ಹುದ್ದೆಗಳಿಗೆ GNM Nursing ಅಥವಾ ಸಂಬಂಧಿತ ವೈದ್ಯಕೀಯ ವಿದ್ಯಾರ್ಹತೆ ಕಡ್ಡಾಯವಾಗಿರಬಹುದು.

ವಯೋಮಿತಿ ವಿವರ

SSB ನೇಮಕಾತಿಗೆ ಕನಿಷ್ಠ ವಯಸ್ಸು ಸಾಮಾನ್ಯವಾಗಿ 18 ವರ್ಷವಾಗಿರುತ್ತದೆ. ಗರಿಷ್ಠ ವಯಸ್ಸು ಹುದ್ದೆಗಳ ಪ್ರಕಾರ ಬದಲಾಗಬಹುದು. ಹೆಚ್ಚಿನ ಹುದ್ದೆಗಳಿಗೆ ಗರಿಷ್ಠ 25 ರಿಂದ 30 ವರ್ಷಗಳ ವಯೋಮಿತಿ ನಿಗದಿಪಡಿಸಲಾಗುತ್ತದೆ.

ಸರ್ಕಾರದ ನಿಯಮಾನುಸಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. OBC ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ, SC/ST ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ  ದೊರೆಯುತ್ತದೆ.

ಮಾಜಿ ಸೈನಿಕರು ಮತ್ತು ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ಹೆಚ್ಚು ಸಡಿಲಿಕೆ ನೀಡಲಾಗುತ್ತದೆ.

 ವೇತನ ಎಷ್ಟು ಸಿಗಲಿದೆ…?

SSB  ಉದ್ಯೋಗದಲ್ಲಿ ಉತ್ತಮ ವೇತನ ಮತ್ತು ವಿವಿಧ ಸೌಲಭ್ಯಗಳು ದೊರೆಯುತ್ತದೆ. 7th Pay Commission ಪ್ರಕಾರ ಅಭ್ಯರ್ಥಿಗಳಿಗೆ ಸಂಬಳ ನೀಡಲಾಗುತ್ತದೆ.

ಕಾನ್ಸ್ಟೇಬಲ್ ಹುದ್ದೆಗಳಿಗೆ ಆರಂಭಿಕ ವೇತನ ಸುಮಾರು₹ 21,700 ರಿಂದ ಆರಂಭವಾಗಬಹುದು. ಹೆಡ್ ಕಾನ್ಸ್ಟೇಬಲ್ ಮತ್ತು ASI ಹುದ್ದೆಗಳಿಗೆ ಹೆಚ್ಚಿನ ಸಂಬಳ ದೊರೆಯುತ್ತದೆ SI ಹುದ್ದೆಗಳಿಗೆ ₹ 35,400  ರಿಂದ ₹ 69 100  ಅಥವಾ ಅದಕ್ಕಿಂತ ಹೆಚ್ಚಿನ ವೇತನ ಸಿಗುವ ಸಾಧ್ಯತೆ ಇದೆ.

ಇದರ ಜೊತೆಗೆ Dearness Allowance(DA), House Rent Allowance, Pension ಸೌಲಭ್ಯಗಳು ಕೂಡ ದೊರೆಯುತ್ತದೆ.

ಗಡಿ ಪ್ರದೇಶಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ವಿಶೇಷ ಭತ್ಯೆಗಳನ್ನು  ನೀಡಲಾಗುತ್ತದೆ. ಆದರಿಂದ SSB ಉದ್ಯೋಗಗಳು ಆರ್ಥಿಕವಾಗಿ ಉತ್ತಮ ಭವಿಷ್ಯ ನೀಡುವ ಸರಕಾರಿ ಉದ್ಯೋಗಗಳಾಗಿವೆ. 

 ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?

SSB ನೇಮಕಾತಿ ಆಯ್ಕೆ ಪ್ರಕ್ರಿಯೆ ಹಲವಾರು ಹಂತಗಳನ್ನು ಒಳಗೊಂಡಿರುತ್ತದೆ.  ಅಭ್ಯರ್ಥಿಗಳು ಪ್ರತಿಯೊಂದು ಹಂತದಲ್ಲೂ ಅರ್ಹತೆ ಪಡೆಯಬೇಕು.

ಮೊದಲಿಗೆ ಲಿಖಿತ ಪರೀಕ್ಷೆ ನಡೆಯುತ್ತದೆ. ಸಾಮಾನ್ಯ ಜ್ಞಾನ, ಗಣಿತ, ತಾರ್ಕಿಕ, ಚಿಂತನೆ, ಇಂಗ್ಲಿಷ್ ಮತ್ತು ತಾಂತ್ರಿಕ ವಿಷಯಗಳ ಮೇಲೆ ಪ್ರಶ್ನೆಗಳು ಕೇಳಬಹುದು.

ಅದರ ನಂತರ Physical Efficiency Test(PET) ಮತ್ತು Physical Standard Test(PST) ನಡೆಯುತ್ತದೆ. ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಮತ್ತು ಎತ್ತರ, ತೂಕ,  ಎದೆಯ ಅಳತೆ ಮುಂತಾದ ಮಾನದಂಡಗಳನ್ನು ಪರಿಶೀಲಿಸಲಾಗುತ್ತದೆ.

ಕೆಲವು ಹುದ್ದೆಗಳಿಗೆ ಟ್ರೇಡ್  ಟೆಸ್ಟ್  ಕೂಡ ನಡೆಯಲಾಗುತ್ತದೆ. ಡ್ರೈವರ್ ಹುದ್ದೆಗಳಿಗೆ ಡ್ರೈವರ್ ಸ್ಕಿಲ್ ಟೆಸ್ಟ್ ಕಡ್ಡಾಯವಾಗಿರುತ್ತದೆ.

ಕೊನೆಯಲ್ಲಿ ವೈದಿಕೀಯ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆ ನಡೆಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ದೈಹಿಕ ಅರ್ಹತೆಗಳ ಮಹತ್ವ 

SSB ಅರೆಸೈನಿಕ ಪಡೆ ಆದ್ದರಿಂದ ದೈಹಿಕ ಸಾಮರ್ಥ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಅಭ್ಯರ್ಥಿಗಳು ಆರೋಗ್ಯವಂತವರಾಗಿರಬೇಕು ಮತ್ತು ನಿಗದಿತ ಮಾನದಂಡಗಳನ್ನು ಪೂರೈಸಬೇಕು.

ಪುರುಷ ಅಭ್ಯರ್ಥಿಗಳಿಗೆ ನಿರ್ದಿಷ್ಟ ಎತ್ತರ ಮತ್ತು ಎದೆ ಅಳತೆ ಕಡ್ಡಾಯ ವಾಗಿರುತ್ತದೆ  ಮಹಿಳಾ ಅಭ್ಯರ್ಥಿಗಳಿಗೂ ಪ್ರತ್ಯೇಕ ದೈಹಿಕ ಮಾನದಂಡಗಳು ನಿಗದಿಯಾಗಿರುತ್ತದೆ.

PET ಪರೀಕ್ಷೆಯಲ್ಲಿ ಓಟ,  ಉದ್ದ ಜಿಗಿತ ಎತ್ತರ ಜಿಗಿತ ಸೇರಿದಂತೆ ಹಲವು ಪರೀಕ್ಷೆಗಳು ನಡೆಯುತ್ತದೆ  ಆದ್ದರಿಂದ ಅಭ್ಯರ್ಥಿಗಳು ಮುಂಚಿತವಾಗಿ ದೈಹಿಕ ಅಭ್ಯಾಸ ಆರಂಭಿಸುವುದು ಉತ್ತಮ.

ಅರ್ಜಿ ಸಲ್ಲಿಸುವ ವಿಧಾನ 

ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಬೇಕಾಗುತ್ತದೆ. ಅಧಿಕೃತ ಅಧಿಸೂಚನೆ ಬಿಡುಗಡೆಯಾದ ನಂತರ ಅರ್ಜಿ ಪ್ರಕ್ರಿಯೆ ಆರಂಭವಾಗುತ್ತದೆ.

ಮೊದಲಿಗೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ Recruitment ವಿಭಾಗ ತೆರೆಯಬೇಕು. ಅಂತರಬೇಕಾದ ಹುದ್ದೆ ಆಯ್ಕೆ ಮಾಡಿಕೊಂಡು ಅಜ್ಜಿ ನಮೂನೆಯನ್ನು ಭರ್ತಿ ಮಾಡಬೇಕು.

ಅಭ್ಯರ್ಥಿಗಳ ತಮ್ಮ ವೈಯಕ್ತಿಕ ಮಾಹಿತಿ ವಿದ್ಯಾರ್ಹತೆ ವಿವರ, ವಿಳಾಸ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಸರಿಯಾಗಿ ನಮೂದಿಸಬೇಕು.

ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಶುಲ್ಕ ಪಾವತಿಸಬೇಕು. ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿ ಕೊನೆಯಲಿ ಅರ್ಜಿ ಸಬ್ಮಿಟ್ ಮಾಡಬೇಕು.

ಬೇಕಾಗುವ ದಾಖಲೆಗಳು

ಅರ್ಜಿ ಸಲ್ಲಿಸುವ ಕೆಲವು ಪ್ರಮುಖ ದಾಖಲೆಗಳು ಅಗತ್ಯವಿರುತ್ತದೆ. ಅಭ್ಯರ್ಥಿಗಲು ಅಗತ್ಯ ದಾಖಲೆಗಳು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳಬೇಕು.

ಆದರ್ ಕಾರ್ಡ್, SSLC ಅಂಕಪಟ್ಟಿ, PUC ಅಥವಾ ITI ಪ್ರಮಾಣ ಪತ್ರ, ಡಿಪ್ಲೋಮಾ ಅಥವಾ ಪದವಿ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ, ಪಾಸ್ಪೋರ್ಟ್ ಸೈಜ್ ಫೋಟೋ, ಸಹಿ, ಮೊಬೈಲ್ ನಂಬರ್ ಹಾಗೂ ಇಮೇಲ್ ID  ಅಗತ್ಯವಿರುತ್ತದೆ. ಕೆಲವು ಹುದ್ದೆಗಳಿಗೆ ಅನುಭವ ಪ್ರಮಾಣ ಪತ್ರ ಬೇಕಾಗುತ್ತದೆ.

 

ಮಹಿಳೆಯರಿಗೆ ಅವಕಾಶ

ಈ ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ.  ವಿಶೇಷವಾಗಿ ವೈದ್ಯಕೀಯ ಕಮ್ಯುನಿಕೇಶನ್ ಮತ್ತು ಆಡಳಿತ ವಿಭಾಗಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಹಾಗೂ ಸಾಧ್ಯತೆ ಇದೆ.

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಅರೆ ಸೈನಿಕ ಪಡೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದರಿಂದ ಕೇಂದ್ರ ಸರಕಾರ ಮಹಿಳಾ ನೇಮಕಾತಿಗೂ ಹೆಚ್ಚಿನ ಆದ್ಯತೆ  ನೀಡುತ್ತಿದೆ.

ಪರೀಕ್ಷೆಗಾಗಿ ಹೇಗೆ ತಯಾರಿ ಮಾಡಿಕೊಳ್ಳಬೇಕು.?

ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗಾಗಿ ಪ್ರತಿದಿನ ಓದು ಅಭ್ಯಾಸ ಬೆಳೆಸಿಕೊಳ್ಳಬೇಕು. ಸಾಮಾನ್ಯ ಜ್ಞಾನ, ಕರೆಂಟ್ ಅಫೀರೆನ್ಸ್, ಗಣಿತ ಮತ್ತು Reasonig ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಬೇಕು.

ಇಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷಾ ಮಾದರಿಯ ಬಗ್ಗೆ ಉತ್ತಮ ಅರಿವು  ದೊರೆಯುತ್ತದೆ.

ದೈಹಿಕ ಪರೀಕ್ಷೆಗಾಗಿ ಪ್ರತಿದಿನ ಊಟ ಮತ್ತು ವ್ಯಾಯಾಮ ಮಾಡುವುದು ಅತ್ಯಂತ ಮುಖ್ಯವಾಗಿದೆ.

ಕೊನೆಯ ಮಾತು

SSB ನೇಮಕಾತಿ 2026 ಕೇಂದ್ರ ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. 10 ನೇ, 12 ನೇ, ITI, ಡಿಪ್ಲೋಮ ಹಾಗೂ ಪದವೀಧರ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಲ್ಲಿ ಅವಕಾಶ ಕಲ್ಪಿಸಲಾಗಿರುವುದರಿಂದ ಸಾವಿರಾರು ಯುವಕರು ಈ ನೇಮಕಾತಿಯ ಪ್ರಯೋಜನ ಪಡೆಯಬಹುದು.

ಉತ್ತಮ ವೇತನ, ಸರ್ಕಾರಿ ಸೌಲಭ್ಯಗಳು, ದೇಶ ಸೇವೆಯ ಅವಕಾಶ ಮತ್ತು ಉತ್ತಮ Career growth ಇರುವುದರಿಂದ ಈ ನೇಮಕಾತಿ ಯುವಕರ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಾಗಿದೆ.  ಆದ್ದರಿಂದ ಅರ್ಹ ಅಭ್ಯರ್ಥಿಗಳು ಅಧಿಕೃತ ಆದಿಸೂಚನೆ ಬಿಡುಗಡೆಯಾದ ತಕ್ಷಣ ಅರ್ಜಿ ಸಲ್ಲಿಸಿ, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವುದು ಉತ್ತಮ.

 

 

 

 

 

Leave a Comment