BOI Bank of India Recruitment 2026: ಬ್ಯಾಂಕ್ ಆಫ್ ಇಂಡಿಯಾದಲ್ಲಿ 779 ಕ್ರೆಡಿಟ್ ಆಫೀಸರ್ ಹುದ್ದೆಗಳ ನೇಮಕಾತಿ – ಪದವೀಧರರಿಗೆ ಸುವರ್ಣ ಅವಕಾಶ!
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬ ಕನಸು ಹೊಂದಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದೀಗ ಸಂತಸದ ಸುದ್ದಿ ಬಂದಿದೆ. ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕರಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 779 ಆಫೀಸರ್ ಹುದ್ದೆಗಳ ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ವೃತ್ತಿ ಜೀವನ ಆರಂಭಿಸುವ ಅವಕಾಶ ದೊರೆಯಲಿದೆ.
ಈ ನೇಮಕಾತಿ ವಿಶೇಷವಾಗಿ ಬ್ಯಾಂಕಿಂಗ್ ಹಣಕಾಸು ಹಾಗೂ ಸಾಲ ನಿರ್ವಹಣಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗೆ ಉತ್ತಮ ಅವಕಾಶವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಉತ್ತಮ ವೇತನ, ವಿವಿಧ ಭತ್ಯೆಗಳು ಉದ್ಯೋಗ ಭದ್ರತೆ ಹಾಗೂ ವೃತ್ತಿ ಜೀವನದಲ್ಲಿ ಬೆಳವಣಿಗೆ ಪಡೆಯುವ ಸಾಧ್ಯತೆಯನ್ನು ಹೊಂದಿರುತ್ತಾರೆ.
BOI Bank of India Recruitment 2026 – ಪ್ರಮುಖ ಮಾಹಿತಿ
ಸಂಸ್ಥೆ : ಬ್ಯಾಂಕ್ ಆಫ್ ಇಂಡಿಯಾ(BOI)
ಹುದ್ದೆಯ ಹೆಸರು : ಕ್ರೆಡಿಟ್ ಆಫೀಸರ್
ಒಟ್ಟು ಹುದ್ದೆಗಳು : 779
ಉದ್ಯೋಗ ಸ್ಥಳ : ಭಾರತದ ಎಲ್ಲಾ ಕಡೆ
ಅರ್ಜಿ ವಿಧಾನ : ಆನ್ಲೈನ್
ಆಯ್ಕೆ ವಿಧಾನ : ಆನ್ಲೈನ್ ಪರೀಕ್ಷೆ ಸಂದರ್ಶನ ದಾಖಲೆ ಪರಿಶೀಲನೆ
ಅರ್ಜಿ ಆರಂಭ : 30 ಜೂನ್ 2026
ಕೊನೆಯ ದಿನಾಂಕ : 20 ಜುಲೈ 2026
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ ಯಾಕೆ ಉತ್ತಮ?
ಬ್ಯಾಂಕ್ ಆಫ್ ಇಂಡಿಯಾ ದೇಶದ ವಿಶ್ವಸಾರ್ಹ ಸಾರ್ವಜನಿಕ ವಲಯದ ಬ್ಯಾಂಕ್ ನಲ್ಲಿ ಒಂದಾಗಿದೆ. ಇಲ್ಲಿ ಕೆಲಸ ಮಾಡುವವರಿಗೆ ಕೇವಲ ಉತ್ತಮ ವೇತನ ಮಾತ್ರವಲ್ಲದೆ, ವಿವಿಧ ಭತ್ಯೆಗಳು, ವೈದ್ಯಕೀಯ ಸೌಲಭ್ಯಗಳು, ನಿವೃತ್ತಿ ಸೌಲಭ್ಯಗಳು ಮತ್ತು ಹಲವು ಅವಕಾಶಗಳು ಸಹ ಲಭ್ಯವಿರುತ್ತದೆ.
ಕ್ರೆಡಿಟ್ ಆಫೀಸರ್ ಹುದ್ದೆ ಬ್ಯಾಂಕಿನ ಪ್ರಮುಖ ಜವಾಬ್ದಾರಿಯ ಹುದ್ದೆಯಾಗಿದ್ದು, ಸಾಲ ಅರ್ಜಿಗಳ ಪರಿಶೀಲನೆ, ಗ್ರಾಹಕರ ಹಣಕಾಸಿನ ಸ್ಥಿತಿಯ ಮೌಲ್ಯಮಾಪನ, ಸಾಲ ಅನುಮೋದನೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಹಾಗೂ ಬ್ಯಾಂಕಿಂಗ್ ನೀತಿಗಳನ್ನು ಅನುಸರಿಸುವ ಜವಾಬ್ದಾರಿಗಳನ್ನು ಒಳಗೊಂಡಿರುತ್ತದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಧಿಕಾರಿಯಾಗಿ ಬೆಳೆಯಲು ಬೆಳೆಸುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಉತ್ತಮ ಅವಕಾಶವಾಗಿದೆ.
BOI Bank of India Recruitment 2026 – ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ ಮತ್ತು ವೇತನ ಮಾಹಿತಿ
ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸುವ 779 ಕ್ರೆಡಿಟ್ ಆಫೀಸರ್ ಹುದ್ದೆಗಳ ನೇಮಕಾತಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಮಹತ್ವದ ಅವಕಾಶವಾಗಿದೆ. ಈ ನೇಮಕಾತಿಯ ಮೂಲಕ ವಿವಿಧ ಸ್ಕೇಲ್ ಗಳಲ್ಲಿ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಹಾಗೂ ಆಯ್ಕೆ ಪ್ರಕ್ರಿಯೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.
ಹುದ್ದೆಯ ವಿವರ
ಬ್ಯಾಂಕ್ ಆಫ್ ಇಂಡಿಯಾ ವಿವಿಧ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕ್ರೆಡಿಟ್ ವಿಭಾಗದಲ್ಲಿ ಬ್ಯಾಂಕಿಂಗ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನೇಮಕಾತಿ ನಡೆಯುತ್ತದೆ.
ನೇಮಕಾತಿ ನಡೆಯುವ ಪ್ರಮುಖ ಸ್ಕೇಲ್ ಗಳು :
- MMGS-||(Middle Management Grade Scale-||)
- MMGS-|||(Middle Management Grade Scale-|||)
- SMGS-|V(Senior Management Grade Scale-|V)
ಒಟ್ಟು ಹುದ್ದೆಗಳು : 779
ಪ್ರತಿ ಸ್ಕೇಲ್ ಗೆ ಅಗತ್ಯವಿರುವ ಅರ್ಹತೆ ಹಾಗೂ ಅನುಭವದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ಆದ್ದರಿಂದ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.
ವಿದ್ಯಾರ್ಹತೆ
ವಿದ್ಯಾರ್ಥಿಗಳು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಅಗತ್ಯ ಅರ್ಹತೆ :
- ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು
- ಬ್ಯಾಂಕಿಂಗ್, ಫೈನಾನ್ಸ್, ಕಾಮರ್ಸ್, ಮ್ಯಾನೇಜ್ಮೆಂಟ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ಆದ್ಯತೆ ದೊರೆಯಬಹುದು.
- ಕೆಲವು ಹುದ್ದೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸದ ಅನುಭವ ಕಡ್ಡಾಯವಾಗಿರಬಹುದು.
ಅನುಭವ
ಕೆಲವು ಸೀನಿಯರ್ ಹುದ್ದೆಗಳಿಗೆ ಈ ಕೆಳಗಿನ ಅನುಭವ ಅಗತ್ಯವಾಗಬಹುದು.
- ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ
- ಕ್ರೆಡಿಟ್ ಪ್ರೊಸೆಸಿಂಗ್ ಅನುಭವ
- ಸಾಲ ನಿರ್ವಹಣೆ ಹಾಗೂ ರಿಸ್ಕ್ ಮ್ಯಾನೇಜ್ಮೆಂಟ್ ಜ್ಞಾನ
- ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡಿದ ಅನುಭವ
ವಯೋಮಿತಿ
ಬ್ಯಾಂಕ್ ಆಫ್ ಇಂಡಿಯಾ ನಿಯಮದ ಪ್ರಕಾರ ಅಭ್ಯರ್ಥಿಗಳು ನಿಗದಿತ ವಯೋಮಿತಿಯೊಳಗಿರಬೇಕು.
- ಕನಿಷ್ಠ ವಯಸ್ಸು : 20 ರಿಂದ 25 ವರ್ಷದೊಳಗೆ ( ಹುದ್ದೆ ಅನುಸಾರ )
- ಗರಿಷ್ಠ ವಯಸ್ಸು : 30 ರಿಂದ 45 ವರ್ಷದೊಳಗೆ ( ಸ್ಕೇಲ್ ಅನುಸಾರ )
ವಯೋಮಿತಿ ಸಡಿಲಿಕೆ :
ಸರ್ಕಾರದ ನಿಯಮಾನಸಾರ ಮೀಸಲಾತಿ ವರ್ಗದ ಅಭ್ಯರ್ಥಿಗೆ ವಯೋಮಿತಿ ಸಡಿಲಿಕೆ ಲಭ್ಯವಾಗಲಿದೆ.
- SC/ST ಅಭ್ಯರ್ಥಿಗಳು
- OBC ಅಭ್ಯರ್ಥಿಗಳು
- PwBD ಅಭ್ಯರ್ಥಿಗಳು
- ಮಾಜಿ ಸೈನಿಕರು
- ಇತರೆ ಮೀಸಲಾತಿ ವರ್ಗಗಳು
ನಿಖರ ವಯೋಮಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸುವುದು ಸೂಕ್ತ.
ವೇತನ
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಗಳಿಗೆ ಉತ್ತಮ ವೇತನದ ಜೊತೆಗೆ ಹಲವು ಆರ್ಥಿಕ ಸೌಲಭ್ಯಗಳು ನೀಡಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗೆ :
- ಆಕರ್ಷಕ ಮೂಲ ವೇತನ
- ತುಟ್ಟಿಭತ್ಯೆ
- ಮನೆ ಬಾಡಿಗೆ ಭತ್ಯೆ
- ನಗರ ಪರಿಹಾರ ಭತ್ಯೆ
- ಪಿಂಚಣಿ ಅಥವಾ ನಿವೃತ್ತಿ ಸಂಬಂಧಿತ ಸೌಲಭ್ಯಗಳು
- ವೈದ್ಯಕೀಯ ಸೌಲಭ್ಯ
- ಪ್ರಮಾಣ ಭತ್ಯೆ
- ರಜೆ ಸೌಲಭ್ಯ
- ಕಾರ್ಯಕ್ಷಮತೆ ಆಧಾರಿತ ಅವಕಾಶ
ಹುದ್ದೆ ಮತ್ತು ಸ್ಕೇಲಿಗೆ ಅನುಗುಣವಾಗಿ ವೇತನದಲ್ಲಿ ವ್ಯತ್ಯಾಸ ಇರಬಹುದು.
BOI Bank of India Recruitment 2026 ಆಯ್ಕೆ ಪ್ರಕ್ರಿಯೆ, ಪರೀಕ್ಷೆಯ ಮಾದರಿ, ಅಗತ್ಯ ದಾಖಲೆಗಳು ಹಾಗೂ ತಯಾರಿ ಸಲಹೆಗಳು
ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸರ್ ನೇಮಕಾತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ. ಎಂಬುದನ್ನು ಮೊದಲೇ ತಿಳಿದುಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಬ್ಯಾಂಕ್ ನೇಮಕಾತಿಗಳಲ್ಲಿ ಅಭ್ಯರ್ಥಿಗಳ ಜ್ಞಾನ, ವೃತ್ತಿಪರ ಕೌಶಲ್ಯ ಮತ್ತು ಸಂದರ್ಶನದಲ್ಲಿನ ಪ್ರದರ್ಶನದ ಆಧಾರದ ಮೇಲೆ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳಲ್ಲಿ ನಡೆಯುವ ಸಾಧ್ಯತೆ ಇದೆ.
1. ಆನ್ಲೈನ್ ಪರೀಕ್ಷೆ
ಮೊದಲ ಹಂತವಾಗಿ ಆನ್ಲೈನ್ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಬ್ಯಾಂಕಿಂಗ್ ಅರಿವು, ತಾರ್ಕಿಕ ಚಿಂತನೆ ಹಾಗೂ ಇಂಗ್ಲಿಷ್ ಭಾಷೆ ಕೌಶಲ್ಯಗಳನ್ನು ಪರೀಕ್ಷಿಸಲಾಗುತ್ತದೆ.
2. ವೈಯಕ್ತಿಕ ಸಂದರ್ಶನ
ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
ಸಂದರ್ಶನದಲ್ಲಿ ಸಾಮಾನ್ಯವಾಗಿ ಈ ವಿಷಯಗಳ ಕುರಿತು ಪ್ರಶ್ನೆಗಳು ಕೇಳಬಹುದು.
- ಬ್ಯಾಂಕಿಂಗ್ ಕ್ಷೇತ್ರದ ಜ್ಞಾನ
- ಕ್ರೆಡಿಟ್ ಫೈನಾನ್ಸ್ ಬಗ್ಗೆ ತಿಳುವಳಿಕೆ
- ಪ್ರಸ್ತುತ ಆರ್ಥಿಕ ಬೆಳವಣಿಗೆಗಳು
- ವೈಯಕ್ತಿಕ ಪರಿಚಯ
- ಸಮಸ್ಯೆ ಪರಿಹರಿಸುವ ಸಾಮರ್ಥ್ಯ
3. ದಾಖಲೆ ಪರಿಶೀಲನೆ
ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಯನ್ನು ಪರಿಶೀಲಿಸಲಾಗುತ್ತದೆ.
ಈ ಹಂತದಲ್ಲಿ ಸಲ್ಲಿಸಿದ ಮಾಹಿತಿಯು ಅಧಿಕೃತ ದಾಖಲೆಗಳಿಗೆ ಹೊಂದಿಕೆಯಾಗಬೇಕು.
4. ವೈದ್ಯಕೀಯ ಪರೀಕ್ಷೆ
ಕೆಲವು ಹುದ್ದೆಗಳಿಗೆ ಬ್ಯಾಂಕ್ ವೈದ್ಯಕೀಯ ಪರೀಕ್ಷೆಯನ್ನು ನಡೆಸುವ ಸಾಧ್ಯತೆ ಇದೆ.
ಅಭ್ಯರ್ಥಿಗಳು ದೈಹಿಕವಾಗಿ ಸೇವೆಗೆ ಯೋಗ್ಯವಾಗಿರಬೇಕು.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ಮೊದಲು ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
- ಆಧಾರ್ ಕಾರ್ಡ್
- SSLC ಅಂಕಪಟ್ಟಿ
- PUC ಅಂಕಪಟ್ಟಿ
- ಪದವಿ ಪ್ರಮಾಣ ಪತ್ರ
- ಅನುಭವ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಅಭ್ಯರ್ಥಿಯ ಸಹಿ
- ಮಾನ್ಯ ಮೊಬೈಲ್ ಸಂಖ್ಯೆ
- ಇತ್ತೀಚಿನ ಪಾಸ್ ಪೋರ್ಟ್ ಗಾತ್ರದ ಫೋಟೋ
- ಇಮೇಲ್ ಐಡಿ
ಅರ್ಜಿ ಸಲ್ಲಿಸುವಾಗ ಸಾಮಾನ್ಯವಾಗಿ ಆಗುವ ತಪ್ಪುಗಳು
ಅನೇಕ ಅಭ್ಯರ್ಥಿಗಳು ಸಣ್ಣ ತಪ್ಪುಗಳಿಂದ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ.
ಈ ತಪ್ಪುಗಳನ್ನು ತಪ್ಪಿಸಿ.
- ತಪ್ಪಾದ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು
- ತಪ್ಪಾದ ಇಮೇಲ್ ಐಡಿ ನೀಡುವುದು
- ಸ್ಪಷ್ಟವಲ್ಲದ ಫೋಟೋ ಅಪ್ಲೋಡ್ ಮಾಡುವುದು
- ಸಹಿಯನ್ನು ತಪ್ಪಾಗಿ ಅಪ್ಲೋಡ್ ಮಾಡುವುದು
- ಕೊನೆಯ ದಿನಾಂಕದವರೆಗೆ ಕಾಯುವುದು
- ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್ ತೆಗೆದುಕೊಳ್ಳದೇ ಇರುವುದು
BOI Bank of India Recruitment 2026 ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು
ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸರ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ವೈಯಕ್ತಿಕ ಮಾಹಿತಿ, ವಿದ್ಯಾರ್ಥಿ ಅನುಭವ ಹಾಗೂ ಅಗತ್ಯ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡುವುದು ಅತ್ಯಂತ ಮುಖ್ಯ. ಸಣ್ಣ ತಪ್ಪುಗಳು ಅರ್ಜಿ ತಿರಸ್ಕಾರವಾಗುವ ಕಾರಣವಾಗಬಹುದು. ಆದ್ದರಿಂದ ಕೆಳಗಿನ ಹಂತಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
BOI Recruitment 2026 – ಪ್ರಮುಖ ದಿನಾಂಕ
ಅಧಿಕೃತ ಅಧಿಸೂಚನೆ ಬಿಡುಗಡೆ : 30 ಜೂನ್ 2026
ಆನ್ಲೈನ್ ಅರ್ಜಿ ಆರಂಭ : 30 ಜೂನ್ 2026
ಅರ್ಜಿ ಸಲ್ಲಿಸುವ ಕೊನೆ ದಿನಾಂಕ : 20 ಜುಲೈ 2026
ಅರ್ಜಿ ಶುಲ್ಕ ಪಾವತಿ ದಿನಾಂಕ : 20 ಜುಲೈ 2026
ಪ್ರವೇಶ ಪತ್ರ ಬಿಡುಗಡೆ : ಪರೀಕ್ಷೆಗೆ ಕೆಲ ದಿನಗಳ ಮೊದಲು
ಆನ್ಲೈನ್ ಪರೀಕ್ಷೆ : ಬ್ಯಾಂಕ್ ಪ್ರಕಟಿಸುವ ದಿನಾಂಕದಂತೆ
ಸೂಚನೆ : ಪರೀಕ್ಷೆಯ ದಿನಾಂಕ ಹಾಗೂ ಪ್ರವೇಶ ಪತ್ರ ಮಾಹಿತಿ ನಂತರ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
- ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ Career ಅಥವಾ Recruitment ವಿಭಾಗವನ್ನು ತೆರೆಯಿರಿ.
- Credit Officer Recruitment 2026 ಎಂಬ ಲಿಂಕ್ ಆಯ್ಕೆ ಮಾಡಿ.
- New Registration ಆಯ್ಕೆ ಮಾಡಿ ಹೊಸ ನೊಂದಣಿ ಪೂರ್ಣಗೊಳಿಸಿ.
- ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಬಳಸಿ OTP ಮೂಲಕ ನೊಂದಣಿ ದೃಢಕರಿಸಿ
- ಅರ್ಜಿ ಫಾರ್ಮ್ ನಲ್ಲಿ ಮಾಹಿತಿಗಳನ್ನು ನಮೂದಿಸಿ
- ಅಗತ್ಯ ದಾಖಲೆಗಳನ್ನು ನಿಗದಿತ ಗಾತ್ರದಲ್ಲಿ ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
- ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ.
- Submit ಬಟನ್ ಕ್ಲಿಕ್ ಮಾಡಿ ಸಲ್ಲಿಸಿ.
- ಆಯ್ಕೆ ಪ್ರಿಂಟ್ ಅಥವಾ PDF ಪ್ರತಿಯನ್ನು ಭವಿಷ್ಯದ ಬಳಕೆಗಾಗಿ ಉಳಿಸಿಕೊಳ್ಳಿ.
ಅರ್ಜಿ ಶುಲ್ಕ
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
- SC/ST/PwBD ಅಭ್ಯರ್ಥಿಗಳು : ಅಧಿಸೂಚನೆಯಲ್ಲಿ ನೀಡಿರುವ ಶುಲ್ಕದಂತೆ.
- General/OBC/EWS ಅಭ್ಯರ್ಥಿಗಳು : ಅಧಿಕೃತ ಸೂಚನೆಯಲ್ಲಿ ನೀಡಿರುವ ಶುಲ್ಕದಂತೆ.
ಗಮನಿಸಿ : ಅರ್ಜಿ ಶುಲ್ಕವನ್ನು ಪಾವತಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಿರುವ ಮೊತ್ತವನ್ನು ಪರಿಶೀಲಿಸಿ.
ಅಭ್ಯರ್ಥಿಗಳಿಗೆ ಕೊನೆಯ ಸಲಹೆ
BOI Bank of India Recruitment 2026 ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಒಟ್ಟು 779 ಕ್ರೆಡಿಟ್ ಆಫೀಸರ್ ಹುದ್ದೆಗಳ ನೇಮಕಾತಿ ನಡೆಯುತ್ತಿರುವುದರಿಂದ ಅಭ್ಯರ್ಥಿಗಳು ಈ ಅವಕಾಶವನ್ನು ಕೈಚೆಲ್ಲದೆ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದು ಉತ್ತಮ.
ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ವಿದ್ಯಾರ್ಹತೆ, ವಯೋಮಿತಿ, ಅನುಭವ ದಾಖಲೆಗಳು, ಹಾಗೂ ಇತರೆ ಅರ್ಹಮಾನದಂಡಗಳನ್ನು ಪರಿಶೀಲಿಸುಕೊಳ್ಳಿ.
ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ಸು ಪಡೆಯಲು ಅಭ್ಯರ್ಥಿಗಳು ಬ್ಯಾಂಕಿಂಗ್ ಜಾಗೃತಿ, ಪ್ರಸ್ತುತ ಘಟನೆ, ರಿಸನಿಂಗ್, ಇಂಗ್ಲಿಷ್ ಮತ್ತು ಗಣಿತ ವಿಷಯಗಳಲ್ಲಿ ನಿಯಮಿತ ಅಭ್ಯಾಸ ಮಾಡಿಕೊಳ್ಳಬೇಕು. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯಲ್ಲಿ ಉತ್ತಮ ಅವಕಾಶ ಅಂಕಗಳನ್ನು ಗಳಿಸಲು ಸಹಾಯವಾಗುತ್ತದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಿರ ಮತ್ತು ಗೌರವಯುತ ಜೀವನ ವೃತ್ತಿ ಜೀವನವನ್ನು ನಿರ್ಮಿಸಿಕೊಳ್ಳುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ನೀವು ಅರ್ಹರಾಗಿದ್ದರೆ ಕೊನೆಯ ದಿನಾಂಕದವರೆಗೆ ಕಾಯದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಪರೀಕ್ಷೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿ ಸರಿಯಾದ ಪರಿಶ್ರಮ ಮತ್ತು ನಿರಂತರ ಆರಂಭದಿಂದ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿ ಹುದ್ದೆ ಪಡೆಯುವ ನಿಮ್ಮ ಕನಸನ್ನು ನನಸಾಗಿಸಬಹುದು.
Apply link : https://ibpsreg.ibps.in/boicojun26/
Official notification PDF : https://bankofindia.bank.in/documents/20121/28761619/Webnotice_2026_27_01-Notice%20(1).pdf/