ರೈಲ್ವೆ ಟಿಕೆಟ್ ವಿತರಕ ನೇಮಕಾತಿ 2026: SSLC/PUC ಪಾಸ್ ಅಭ್ಯರ್ಥಿಗಳಿಗೆ ಅವಕಾಶ? ಅರ್ಹತೆ, ಸಂಬಳ, ಆಯ್ಕೆ ಪ್ರಕ್ರಿಯೆ ಸಂಪೂರ್ಣ ಮಾಹಿತಿ
ಪರಿಚಯ
ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯುವ ಅನೇಕ ಯುವಕರ ಕನಸಾಗಿದೆ ರೈಲ್ವೆ ಲಕ್ಕಿಯಲ್ಲಿ ವಿವಿಧ ರೀತಿಯ ಹುದ್ದೆಗಳು ಲಭ್ಯವಿದ್ದು ಅವುಗಳಲ್ಲಿ ರೈಲ್ವೆ ಟಿಕೆಟ್ ವಿತ್ ಹಾರಕ ಹುದ್ದೆಗಳು ಕೂಡ ಪ್ರಮುಖವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ವೆಬ್ಸೈಟ್ ಗಳಲ್ಲಿ ಈ ಹುದ್ದೆಗಳ ಕುರಿತು ಸಾಕಷ್ಟು ಮಾಹಿತಿ ಹರಿದಾಡುತ್ತಿದ್ದು, ಹಲವಾರು ಅಭ್ಯರ್ಥಿಗಳು ಈ ಹುದ್ದೆಗಳ ನೇಮಕಾತಿ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.
ಆದರೆ ಅಭ್ಯರ್ಥಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯ ಅಂದರೆ ರೈಲ್ವೆ ಟಿಕೆಟ್ ವಿತರಕ ಹುದ್ದೆಗಳು ಭಾರತೀಯ ರೈಲು ಶಾಶ್ವತ ಸರಕಾರಿ ಹುದ್ದೆಗಳಲ್ಲ, ಇವು ಹಲವು ಸಂದರ್ಭಗಳಲ್ಲಿ Automatic Ticket Vending Machine(ATVM)Facilitator ಅಥವಾTicket Distribution Service Provider ಹುದ್ದೆಗಳಾಗಿ ಒಪ್ಪಂದ (Contract Basis) ಆದರದಲಿ ನೇಮಕ ಮಾಡಲಾಗುತ್ತದೆ ಆದ್ದರಿಂದ ಅಭ್ಯರ್ಥಿಗಳು ಯಾವುದೇ ಮಾಹಿತಿಯನ್ನು ನಂಬುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯವಾಗಿದೆ.
ರೈಲ್ವೆ ಟಿಕೆಟ್ ವಿತರಕ ಹುದ್ದೆ ಎಂದರೇನು ?
ರೈಲು ನಿಲ್ದಾಣಗಳಲ್ಲಿ ಪ್ರತಿದಿನ ಸಾವಿರಾರು ಪಯಣಿಕರು ಟಿಕೆಟ್ ಖರೀದಿಸುತ್ತಿದ್ದಾರೆ. ಟಿಕೆಟ್ ಕೌಂಟರ್ ಗಳಲ್ಲಿ ಉಂಟಾಗುವ ಜನದಟ್ಟನೆಗಳನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ Automatic Ticket Vending Machine(ATVM) ಪರಿಚಯಿಸಿದೆ. ಈ ಯಂತ್ರದ ಮೂಲಕ ಪ್ರಯಾಣಿಕರು ಸುಲಭವಾಗಿ ಸಾಮಾನ್ಯ ರೈಲು ಟಿಕೆಟ್ ಗಳನ್ನು ಪಡೆಯಬಹುದು.
ಈ ವ್ಯವಸ್ಥೆಯಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಲು ಹಾಗೂ ATVM ಯಂತ್ರವನ್ನು ನಿರ್ವಹಿಸಲು ಕೆಲ ವಿಭಾಗಗಳಲ್ಲಿ ATVM Facilitator ಅಥವಾTicket Distributor ಹುದ್ದೆಗಳಿಗೆ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ.
ಇಂತಹ ಹುದ್ದೆಗಳಲ್ಲಿ ಕೆಲಸ ಮಾಡುವವರು ರೈಲು ಪ್ರಯಾಣಿಕರಿಗೆ ಟಿಕೆಟ್ ಪಡೆಯಲು ಸಹಾಯ ಮಾಡುವುದರ ಜೊತೆಗೆ ಯಂತ್ರದ ಸರಿಯಾದ ಬಳಕೆ ಕುರಿತು ಮಾರ್ಗದರ್ಶನ ನೀಡುತ್ತಾರೆ.
ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ವಿಷಯಗಳು
- ಈ ಹುದ್ದೆಗಳು ಸಾಮಾನ್ಯವಾಗಿ ಒಪ್ಪಂದ ಆಧಾರದಲ್ಲಿರುತ್ತದೆ.
- ಎಲ್ಲಾ ರೈಲು ವಿಭಾಗದಲ್ಲಿ ಒಂದೇ ಸಮಯದಲ್ಲಿ ನೇಮಕಾತಿ ನಡೆಯುವುದಿಲ್ಲ.
- ಅಧಿಸೂಚನೆಯ ಪ್ರಕಾರ ಅರ್ಹತೆ ಹಾಗೂ ಆಯ್ಕೆ ವಿಧಾನ ಬದಲಾಗಬಹುದು.
- ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ನೋಟಿಫಿಕೇಶನ್ ಸಂಪೂರ್ಣವಾಗಿ ಓದುವುದು ಅಗತ್ಯ.
- ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಮಾಹಿತಿಯನ್ನು ನಂಬಬಾರದು.
ರೈಲ್ವೆ ಟಿಕೆಟ್ ವಿತರಕ ವಿದ್ಯಾರ್ಹತೆ, ವಯೋಮಿತಿ, ಸಂಬಳ, ಅರ್ಜಿ ಶುಲ್ಕ ಹಾಗೂ ಅಗತ್ಯ ದಾಖಲೆಗಳು
ರೈಲು ಟಿಕೆಟ್ ವಿತರಕ ಅಥವಾ ATVM Facilitator ಹುದ್ದೆಗಳಿಗೆ ಅರ್ಜಿ ಸಲ್ಲಿಸುಲು ಬಯಸುವ ಅಭ್ಯರ್ಥಿಗಳು ಮೊದಲು ಸಂಬಂಧಿತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತ ಮಾನದಂಡಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಈ ಹುದ್ದೆಗಳು ಶಾಶ್ವತ ಸರಕಾರಿ ಹುದ್ದೆಗಳಾಗದಿದ್ದರೂ ರೈಲು ಇಲಾಖೆಯ ಕಾರ್ಯ ನಿರ್ವಹಿಸುವ ಅವಕಾಶ ಒದಗಿಸುತ್ತವೆ. ಆದ್ದರಿಂದ ಪ್ರತಿ ಅಭ್ಯರ್ಥಿಯು ಅಧಿಕೃತ ಅಧಿಸೂಚನೆಯ ಪ್ರಕಾರವೇ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಹತೆ
ಸಾಮಾನ್ಯವಾಗಿ ಈ ಹುದ್ದೆಗಳಿಗೆ ಕನಿಷ್ಠ SSLC ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕೆಲವು ರೈಲು ವಿಭಾಗಗಳು ಅಥವಾ ಸೇವಾ ಒದಗಿಸುವ ಸಂಸ್ಥೆಗಳು PUC ಉತ್ತೀರ್ಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಬಹುದು.
ಕೆಲವು ಅಧಿಸೂಚನೆಗಳಲ್ಲಿ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಬಳಕೆಯ ಮೂಲಭೂತ ಜ್ಞಾನ ಕಡ್ಡಾಯ ಅಥವಾ ಆದ್ಯತೆಯಾಗಿ ಉಲ್ಲೇಖಿಸಲಾಗುತ್ತದೆ. ಏಕೆಂದರೆ ಟಿಕೆಟ್ ವಿತರಣೆ ಡಿಜಿಟಲ್ ಪಾವತಿ ಹಾಗೂ ATVM ಯಂತ್ರದ ಕಾರ್ಯಾಚರಣೆಯಲ್ಲಿ ಕಂಪ್ಯೂಟರ್ ಜ್ಞಾನ ಸಹಾಯಕವಾಗುತ್ತದೆ.
ಹೆಚ್ಚುವರಿಯಾಗಿ ಕೆಳಗಿನ ಕೌಶಲ್ಯಗಳು ಇದ್ದರೆ ಉತ್ತಮ.
- ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಮೂಲಭೂತ ಜ್ಞಾನ.
- ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ಕೌಶಲ್ಯ.
- ಡಿಜಿಟಲ್ ಪಾವತಿ ವ್ಯವಸ್ಥೆಗಳ ಅರಿವು
- ಟಿಕೆಟ್ ಯಂತ್ರಗಳನ್ನು ನಿರ್ವಹಿಸುವ ಸಾಮರ್ಥ್ಯ.
- ಜವಾಬ್ದಾರಿಯುತ ಹಾಗೂ ಸಮಯ ಪ್ರಜ್ಞೆಯ ಕೆಲಸದ ಮನೋಭಾವ.
ವಯೋಮಿತಿ
ಸಾಮಾನ್ಯವಾಗಿ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು.
ಕನಿಷ್ಠ ವಯೋಮಿತಿ ಸಂಬಂಧಿತ ಅಧಿಸೂಚನೆ ಹಾಗೂ ಒಪ್ಪಂದದ ನಿಯಮಗಳ ಪ್ರಕಾರ ಬದಲಾಗಬಹುದು. ಕೆಲವು ಅಧಿಸೂಚನೆಗಳಲ್ಲಿ 35, 40 ಅಥವಾ 45 ವರ್ಷದವರೆಗೆ ಅವಕಾಶ ನೀಡುವ ಉದಾಹರಣೆಗಳಿವೆ.
ಸರ್ಕಾರದ ಮೀಸಲಾತಿ ನಿಯಮಗಳು ಅನ್ವಯಿಸಿದರೆ SC, ST, OBC ಹಾಗೂ ಇತರೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಬಹುದು. ಇದರ ಸಂಪೂರ್ಣ ಮಾಹಿತಿ ಅಧಿಕೃತ ಅಧಿಸೂಚನೆಯಲ್ಲಿ ಮಾತ್ರ ಲಭ್ಯವಾಗುತ್ತದೆ.
ವೇತನ ವಿವರ
ಈ ಹುದ್ದೆಗಳು ಶಾಶ್ವತ ಸರ್ಕಾರಿ ಹುದ್ದೆಗಳಲ್ಲದ ಕಾರಣ ಸಂಬಳ ಪ್ರತಿ ಒಪ್ಪಂದದ ಪ್ರಕಾರ ಬದಲಾಗುತ್ತದೆ.
ಕೆಲವು ಪ್ರದೇಶಗಳಲ್ಲಿ ಮಾನಸಿಕ ನಿಗದಿತ ಗೌರವ ಧನ(Fixed Honorarium) ನೀಡಲಾಗುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ಟಿಕೆಟ್ ವಿತರಣೆ ಪ್ರಮಾಣ ಅಥವಾ ಸೇವೆ ಆಧಾರದ ಮೇಲೆ ಪಾವತಿ ಮಾಡಲಾಗುತ್ತದೆ.
ಸಂಬಳದ ಪ್ರಮಾಣ ಕೆಳಗಿನ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
- ರೈಲ್ವೆ ವಿಭಾಗ
- ಒಪ್ಪಂದದ ನಿಯಮಗಳು
- ಕೆಲಸದ ಅವಧಿ
- ಸೇವೆ ಒದಗಿಸುವ ಸಂಸ್ಥೆ ನಿಯಮಗಳು
- ಟಿಕೆಟ್ ವಿತರಣೆಯ ಪ್ರಮಾಣ
ಆದ್ದರಿಂದ ಅಭ್ಯರ್ಥಿಗಳು ಸಂಬಳದ ಬಗ್ಗೆ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿಯನ್ನು ಅಂತಿಮ ಎಂದು ಪರಿಗಣಿಸಬೇಕು.
ಅರ್ಜಿ ಶುಲ್ಕ
ಅರ್ಜಿ ಶುಲ್ಕವು ಪ್ರತಿಯೊಂದು ನೇಮಕಾತಿಯಲ್ಲಿ ಒಂದೇ ರೀತಿಯಾಗಿರುವುದಿಲ್ಲ. ಕೆಲವು ಅಧಿಸೂಚನೆಗಳಲ್ಲಿ ಯಾವುದೇ ಶುಲ್ಕ ಇರುವುದಿಲ್ಲ. ಇನ್ನೂ ಕೆಲವು ನೇಮಕಾತಿಗಳಲ್ಲಿ ನಿಗದಿತ ಮೊತ್ತವನ್ನು ಪಾವತಿಸುವಂತೆ ಸೂಚಿಸಲಾಗುತ್ತದೆ.
ಅಭ್ಯರ್ಥಿಗಳು ಯಾವುದೇ ಅನಧಿಕೃತ ವ್ಯಕ್ತಿ ಅಥವಾ ವೆಬ್ ಸೈಟಿಗೆ ಹಣ ಪಾವತಿಸಬಾರದು. ಅಧಿಕೃತ ಸೂಚನೆಯ ಪ್ರಕಾರ ಮಾತ್ರ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅಗತ್ಯದ ದಾಖಲೆಗಳು
ಅರ್ಜಿ ಸಲ್ಲಿಸುವಾಗ ಅಥವಾ ದಾಖಲೆ ಪರಿಶೀಲನೆ ಮೇಲೆ ಸಾಮಾನ್ಯವಾಗಿ ಕೆಳಗಿನ ದಾಖಲೆಗಳನ್ನು ಕೇಳಬಹುದು
- SSLC ಅಂಕಪಟ್ಟಿ
- PUC ಅಥವಾ ಹೆಚ್ಚಿನ ವಿದ್ಯಾರ್ಹತೆ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಮತದಾರರ ಗುರುತಿನ ಚೀಟಿ ಅಥವಾ ಇತರೆ ಗುರುತಿನ ದಾಖಲೆ
- ಪಾಸ್ ಪೋರ್ಟ್ ಗಾತ್ರದ ಇತ್ತೀಚಿನ ಭಾವಚಿತ್ರ
- ಜಾತಿ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಕಂಪ್ಯೂಟರ್ ಕೋರ್ಸ್ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
ಅರ್ಜಿ ಸಲ್ಲಿಕೆ ದಿನಾಂಕ
ಪ್ರಸ್ತುತ ಬೆಂಗಳೂರು – ಹುಬ್ಬಳ್ಳಿ ರೈಲ್ವೆ ವಿಭಾಗಕ್ಕೆ Ticket Distribution /ATVM Facilitior ಹುದ್ದೆಗಳ ಅಧಿಕೃತ ಅರ್ಜಿ ದಿನಾಂಕ ಪ್ರಕಟವಾಗಿಲ್ಲ.
ಅರ್ಜಿ ಪ್ರಾರಂಭ ದಿನಾಂಕ, ಕೊನೆಯ ದಿನಾಂಕ, ದಾಖಲೆ ಪರಿಶೀಲನೆ ದಿನಾಂಕ, ಆಯ್ಕೆ ಪ್ರಕ್ರಿಯೆ ಇವುಗಳ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಲಿದೆ.
ಆದ್ದರಿಂದ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮಾಹಿತಿ ಗಿಂತ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ಮಾತ್ರ ಅರ್ಜಿ ಸಲ್ಲಿಸುವುದು ಉತ್ತಮ.
ರೈಲ್ವೆ ಟಿಕೆಟ್ ವಿತರಕರ ಪ್ರಮುಖ ಕೆಲಸಗಳು
ಈ ಹುದ್ದೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಪ್ರಯಾಣಿಕರಿಗೆ ಟಿಕೆಟ್ ಸೇವೆ ಒದಗಿಸುವುದರ ಜೊತೆಗೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ.
1. ಪ್ರಯಾಣಿಕರಿಗೆ ಟಿಕೆಟ್ ವಿತರಿಸುವುದು
ಪ್ರಯಾಣಿಕರು ATVM ಯಂತ್ರದ ಮೂಲಕ ರೈಲು ಟಿಕೆಟ್ ಪಡೆಯಲು ಸಹಾಯ ಮಾಡುವುದು ಪ್ರಮುಖ ಕರ್ತವ್ಯವಾಗಿದೆ. ಮೊದಲ ಬಾರಿಗೆ ಯಂತ್ರ ಬಳಸುವವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು.
2.ATVM ಯಂತ್ರವನ್ನು ನಿರ್ವಹಿಸುವುದು
Automatic Ticket Vending Machine(ATVM) ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಿಯೇ ಎಂಬುದನ್ನು ಗಮನಿಸುವುದು ಹಾಗೂ ಅದರ ದೈನಂದಿನ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು.
3. ಡಿಜಿಟಲ್ ಪಾವತಿಗೆ ಸಹಾಯ
ಕೆಲವು ಯಂತ್ರಗಳಲ್ಲಿ UPI, ಡೆಬಿಟ್ ಕಾರ್ಡ್ ಅಥವಾ ಸ್ಮಾರ್ಟ್ ಕಾರ್ಡ್ ಮೂಲಕ ಪಾವತಿ ಮಾಡುವ ಅವಕಾಶವಿರುತ್ತದೆ. ಪ್ರಯಾಣಿಕರಿಗೆ ಈ ಸೇವೆಗಳನ್ನು ಬಳಸಲು ಸಹಾಯ ಮಾಡುವುದು.
4. ತಾಂತ್ರಿಕ ಸಮಸ್ಯೆಗಳ ಮಾಹಿತಿ ನೀಡುವುದು
ಯಂತ್ರದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡು ಬಂದರೆ ಸಂಬಂಧಿತ ರೈಲು ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಬೇಕು.
5. ಪ್ರಯಾಣಿಕರಿಗೆ ಮಾರ್ಗದರ್ಶನ
ಸರಿಯಾದ ಫ್ಲಾಟ್ ಫಾರ್ಮ್, ಟಿಕೆಟ್ ಪ್ರಕಾರ, ಸ್ಥಳೀಯ ರೈಲುಗಳ ಮಾಹಿತಿ ಹಾಗೂ ಸಾಮಾನ್ಯ ಪ್ರಶ್ನೆಗಳಿಗೂ ಉತ್ತರ ನೀಡುವ ಜವಾಬ್ದಾರಿಯೂ ಇರುತ್ತದೆ.
6. ಸ್ವಚ್ಛತೆ ಮತ್ತು ಸುರಕ್ಷತೆ
ಈ ಯಂತ್ರ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಲು ಸಹಕರಿಸುವುದು ಹಾಗೂ ಯಂತ್ರವನ್ನು ಸುರಕ್ಷಿತವಾಗಿ ಬಳಸುವಂತೆ ಸಾರ್ವಜನಿಕರಿಗೆ ತಿಳಿಸುವುದು.
ಆಯ್ಕೆ ಪ್ರಕ್ರಿಯೆ
ಈ ಹುದ್ದೆಗಳ ಆಯ್ಕೆ ಇದನ್ನು ಪ್ರತಿ ಅಧಿಸೂಚನೆ ಪ್ರಕಾರ ಬದಲಾಗಬಹುದು. ಸಾಮಾನ್ಯವಾಗಿ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ.
- ದಾಖಲೆಗಳ ಪರಿಶೀಲನೆ
- ಮೆರಿಟ್ ಆಧಾರಿತ ಆಯ್ಕೆ
- ಸಂದರ್ಶನ
- ಲಿಖಿತ ಪರೀಕ್ಷೆ
ರೈಲ್ವೆ ಟಿಕೆಟ್ ವಿತಕರ ಹುದ್ದೆಯ ಪ್ರಯೋಜನಗಳು
ಈ ಹುದ್ದೆಗಳಲ್ಲಿ ಕೆಲಸ ಮಾಡುವುದರಿಂದ ಹಲವು ಅನುಭವಗಳನ್ನು ಪಡೆಯಬಹುದು
- ರೈಲ್ವೆ ಇಲಾಖೆಯೊಂದಿಗೆ ಕೆಲಸ ಮಾಡುವುದು ಅವಕಾಶ
- ಸಾರ್ವಜನಿಕ ಸೇವೆಯಲ್ಲಿ ಅನುಭವ
- ಕಂಪ್ಯೂಟರ್ ಹಾಗೂ ಟಿಕೆಟ್ ನಿರ್ವಹಣೆ ಅನುಭವ
- ಡಿಜಿಟಲ್ ಪಾವತಿ ವ್ಯವಸ್ಥೆಗಳ ಬಗ್ಗೆ ಪ್ರಯೋಗಿಕ ಜ್ಞಾನ
- ರೈಲು ನಿಲ್ದಾಣದ ಕಾರ್ಯ ವೈಖಾರಿಯ ಅರಿವು
- ಭವಿಷ್ಯದ ಉದ್ಯೋಗಗಳಿಗೆ ಉಪಯುಕ್ತ ಅನುಭವ
- ಸಂವಹನ ಕೌಶಲ್ಯ ಹೆಚ್ಚಿಸಿಕೊಳ್ಳುವ ಅವಕಾಶ
ಅರ್ಜಿ ಸಲ್ಲಿಸುವ ವಿಧಾನ
ಪ್ರಸ್ತುತ ಬೆಂಗಳೂರು – ಹುಬ್ಬಳ್ಳಿ ರೈಲು ವಿಭಾಗಕ್ಕೆ ಟಿಕೆಟ್ ವಿತರಕ ಹುದ್ದೆಗಳ ಅಧಿಸೂಚನೆಯ ಪ್ರಕಟವಾಗಿಲ್ಲ. ಅಧಿಸೂಚನೆ ಪ್ರಕಟವಾದ ನಂತರ ಅಭ್ಯರ್ಥಿಗಳು ಅದರಲ್ಲಿರುವ ಸೂಚನೆ ಪ್ರಕಾರ ಅರ್ಜಿ ಸಲ್ಲಿಸಬೇಕು.
ಸಾಮಾನ್ಯವಾಗಿ ಅರ್ಜಿ ಸಲ್ಲಿಸುವ ವಿಧಾನ ಹೀಗಿರಬಹುದು :
- ಅಧಿಕೃತ ಅಧಿಸೂಚನೆಯನ್ನು ಓದಿ
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿಸಿ
- ಅರ್ಜಿಯನ್ನು ಸಲ್ಲಿಸಿ
ಅಧಿಕೃತ ಅಧಿಸೂಚನೆ ಪ್ರಕಟವಾದ ಬಳಿಕ ಏನು ಮಾಡಬೇಕು ?
ಬೆಂಗಳೂರು – ಹುಬ್ಬಳ್ಳಿ ವಿಭಾಗ ಅಥವಾ ಇತರೆ ರೈಲು ವಿಭಾಗದಲ್ಲಿ ಅಧಿಸೂಚನೆ ಪ್ರಕಟವಾದ ತಕ್ಷಣ ಅಭ್ಯರ್ಥಿಗಳು ಈ ಕ್ರಮವನ್ನು ಅನುಸರಿಸಬೇಕು.
- ಅಧಿಸೂಚನೆಯ ಸಂಪೂರ್ಣವಾಗಿ ಓದಬೇಕು
- ಅರ್ಹತೆಯನ್ನು ಪರಿಶೀಲಿಸಬೇಕು.
- ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.
- ಕೊನೆ ದಿನಾಂಕ ಮುನ್ನ ಅರ್ಜಿ ಸಲ್ಲಿಸಬೇಕು.
- ದಾಖಲೆ ಪರಿಶೀಲನೆ ಅಥವಾ ಸಂದರ್ಶನದ ದಿನಾಂಕವನ್ನು ಗಮನದಲ್ಲಿಡಬೇಕು.
ಕೊನೆಯ ಮಾತು
ರೈಲ್ವೆ ಟಿಕೆಟ್ ವಿತರಕ ಅಥವಾ ATVM Facilitator ಹುದ್ದೆಗಳ ರೈಲು ಇಲಾಖೆಯೊಂದಿಗೆ ಕೆಲಸ ಮಾಡುವ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಸಾರ್ವಜನಿಕರೊಂದಿಗೆ ಕಾರ್ಯನಿರ್ವಹಿಸುವ ಅನುಭವ, ಟಿಕೆಟ್ ನಿರ್ವಹಣೆ ಹಾಗೂ ಡಿಜಿಟಲ್ ಸೇವೆಗಳ ಅರಿವು ಪಡೆಯಲು ಈ ಹುದ್ದೆಗಳು ಸಹಾಯಕವಾಗುತ್ತದೆ.
ಆದರೆ ಅಭ್ಯರ್ಥಿಗಳು ಒಂದು ಪ್ರಮುಖ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು. ಪ್ರಸ್ತುತ ಬೆಂಗಳೂರು – ಹುಬ್ಬಳ್ಳಿ ರೈಲು ವಿಭಾಗಕ್ಕೆ ಈ ಹುದ್ದೆಗಳ ಅಧಿಕೃತ ಅಧಿಸೂಚನೆ ಪ್ರಕಟವಾಗಿಲ್ಲ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಯಾವುದೇ ಮಾಹಿತಿಯನ್ನು ನೇರವಾಗಿ ನಂಬದೇ ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರವೇ ಅರ್ಜಿ ಸಲ್ಲಿಸುವುದು ಉತ್ತಮ.
ಈ ಲೇಖನದಲ್ಲಿ ನೀಡಿರುವ ಮಾಹಿತಿ ಪ್ರಸ್ತುತ ಲಭ್ಯ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ಹೊಸ ಆಧಿಸೂಚನೆ ಪ್ರಕಟವಾದರೆ ಅರ್ಹತೆ, ವಯೋಮಿತಿ, ಆಯ್ಕೆ ವಿಧಾನ, ಸಂಬಳ ಹಾಗೂ ಅರ್ಜಿ ದಿನಾಂಕ ಅಭ್ಯರ್ಥಿಗಳು ಅಧಿಕೃತ ಮಾಹಿತಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು.