ನಗರ ಸಿವಿಲ್ ಕೋರ್ಟ್ ನೇಮಕಾತಿ 2026 : 10ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ 88 ಸರಕಾರಿ ಹುದ್ದೆಗಳ ಭರ್ತಿ – ಸಂಪೂರ್ಣ ಮಾಹಿತಿ
ನಗರ ಸಿವಿಲ್ ಕೋರ್ಟ್ ನೇಮಕಾತಿ 2026
ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಮತ್ತೊಂದು ಉತ್ತಮ ಅವಕಾಶ ದೊರೆತಿದೆ. ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ವತಿಯಿಂದ Peon ಹಾಗೂ Driver ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿಯ ಮೂಲಕ ಒಟ್ಟು 88 ಶಾಶ್ವತ ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಅಭ್ಯರ್ಥಿಗಳನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸರ್ಕಾರಿ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವ ಹಾಗೂ ಹತ್ತನೇ ತರಗತಿ ಉತ್ತೀರ್ಣ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಸರಕಾರದ ನಿಯಮನುಸಾರ ವೇತನ ಭತ್ಯೆಗಳು, ವಾರ್ಷಿಕ ವೇತನ ಹೆಚ್ಚಳ, ರಜೆಸೌಲಭ್ಯ ಹಾಗೂ ಭವಿಷ್ಯದ ಬಡ್ತಿ ಅವಕಾಶವನ್ನು ದೊರೆಯಲಿದೆ.
ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ದಿನಾಂಕ ವಿದ್ಯಾರ್ಹತೆ, ವಯೋಮಿತಿ, ವೇತನ, ಆಯ್ಕೆ ವಿಧಾನ, ಅಗತ್ಯ ದಾಖಲೆಗಳು, ಕೆಲಸದ ಜವಾಬ್ದಾರಿಗಳು ಸೇರಿದಂತೆ ಸಂಪೂರ್ಣ ಮಾಹಿತಿ ವಿವರಿಸಲಾಗಿದೆ.
ಪ್ರಮುಖ ಮಾಹಿತಿ
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ಈ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳನ್ನು ಅಭ್ಯರ್ಥಿಗಳು ಗಮನದಲ್ಲಿಡಬೇಕು.
ಅರ್ಜಿ ಸಲ್ಲಿಕೆ ಆರಂಭ : 01 ಜುಲೈ 2026
ಅರ್ಜಿ ಸಲ್ಲಿಸುವ ಕೊನೆ ದಿನಾಂಕ : 30 ಜುಲೈ 2026
ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮಾತ್ರ
ಕೊನೆ ದಿನಾಂಕದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ
ಹುದ್ದೆಗಳ ವಿವರ
ಈ ನೇಮಕಾತಿಯ ಮೂಲಕ ಎರಡು ವಿಧದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
Peon
- ಹುದ್ದೆಗಳ ಸಂಖ್ಯೆ – 81
Driver
- ಹುದ್ದೆಗಳ ಸಂಖ್ಯೆ – 7
ಒಟ್ಟು ಹುದ್ದೆಗಳು – 88
ಎರಡು ಹುದ್ದೆಗಳು ಕರ್ನಾಟಕದ ನ್ಯಾಯಾಂಗ ಇಲಾಖೆ ಶಾಶ್ವತ ಹುದ್ದೆಗಳಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ಎಲ್ಲ ಸೌಲಭ್ಯಗಳು ಅನ್ವಯಿಸಲಾಗುತ್ತದೆ.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ವಯೋಮಿತಿಯನ್ನು ಹೊಂದಿರಬೇಕು.
- ಕನಿಷ್ಠ ವಯಸ್ಸು – 18 ವರ್ಷ
- ಗರಿಷ್ಠ ವಯಸ್ಸು – 40 ವರ್ಷ
ಕರ್ನಾಟಕ ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ SC, ST, Cat-1,OBC ಹಾಗೂ ಇತರೆ ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ದೊರೆಯಲಿದೆ.
ವಿದ್ಯಾರ್ಹತೆ
Peon ಹುದ್ದೆ
Peon ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು :
- ಎಸ್ ಎಸ್ ಎಲ್ ಸಿ (10 ನೇ ತರಗತಿ) ಉತ್ತೀರ್ಣರಾಗಿರಬೇಕು.
- ಕನ್ನಡ ಓದಲು ಬರೆಯಲು ತಿಳಿದಿರಬೇಕು.
ಈ ಹುದ್ದೆಗೆ ಹೆಚ್ಚಿನ ವಿದ್ಯಾರ್ಹತೆ ಅವಶ್ಯಕತೆ ಇಲ್ಲದಿರುವುದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಅನೇಕ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.
Driver ಹುದ್ದೆ
ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು :
- ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು.
- ಮಾನ್ಯ ವಾದ Heavy Vehicle Driving License ಇರಬೇಕು
- ವಾಹನ ಚಾಲನೆಯಲ್ಲಿ ಅನುಭವಿ ಇದ್ದರೆ ಅದು ಹೆಚ್ಚುವರಿ ಪ್ರಯೋಜನವಾಗಬಹುದು.
ನಗರ ಸಿವಿಲ್ ಕೋರ್ಟ್ ಎಂದರೇನು ?
ನಗರ ಸಿವಿಲ್ ನ್ಯಾಯಾಲಯವು ಕರ್ನಾಟಕ ನ್ಯಾಯಾಂಗ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ಸಾರ್ವಜನಿಕರಿಗೆ ಸಂಬಂಧಿಸಿದ ವಿವಿಧ ನಾಗರಿಕ ಪ್ರಕರಣಗಳು ನ್ಯಾಯಾಂಗ ಆಡಳಿತ ಹಾಗೂ ಕಾನೂನು ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಜವಾಬ್ದಾರಿಯೇ ಈ ಸಂಸ್ಥೆಯದಾಗಿದೆ.
ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ನ್ಯಾಯಾಲಯದ ದೈನಂದಿನ ಆಡಳಿತ ಸುಗಮವಾಗಿ ನಡೆಯುವಂತೆ ಸಹಕರಿಸುತ್ತದೆ. ಆದ್ದರಿಂದ Peon ಹಾಗೂ Driver ಹುದ್ದೆಗಳು ನ್ಯಾಯಾಲಯದ ಕಾರ್ಯನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ಉದ್ಯೋಗ ಯಾರಿಗೆ ಸೂಕ್ತ ?
ಈ ನೇಮಕಾತಿ ವಿಶೇಷವಾಗಿ ಕೆಳಗಿನ ಅಭ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಲಿದೆ.
- ಹತ್ತನೇ ತರಗತಿ ಉತ್ತೀರ್ಣರಾದವರು
- ಸರ್ಕಾರಿ ಉದ್ಯೋಗ ಬಯಸುವವರು
- ಕರ್ನಾಟಕದಲ್ಲಿ ಶಾಶ್ವತ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು
- Driver License ಹೊಂದಿರುವವರು
- ಉದ್ಯೋಗ ಭದ್ರತೆ ಬಯಸುವವರು
- ಕಡಿಮೆ ವಿದ್ಯಾರ್ಹತೆಯಲ್ಲಿಯೇ ಉತ್ತಮ ವೇತನ ಬಯಸುವರು
ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ವಿಷಯಗಳು
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು.
- ವಿದ್ಯಾರ್ಹತೆ
- ವಯೋಮಿತಿ
- ಮೀಸಲಾತಿ
- ದಾಖಲೆಗಳು
- ಅರ್ಜಿ ಶುಲ್ಕ
- ಆಯ್ಕೆ ವಿಧಾನ
ಇವುಗಳನ್ನು ಪರಿಶೀಲಿಸಿದ ನಂತರ ಅರ್ಜಿ ಸಲ್ಲಿಸುವುದು ಉತ್ತಮ.
ವೇತನ ವಿವರ
ಸರ್ಕಾರಿ ಉದ್ಯೋಗದ ಪ್ರಮುಖ ಆಕರ್ಷಣೆ ಉತ್ತಮ ವೇತನ ಮತ್ತು ಉದ್ಯೋಗ ಭದ್ರತೆ ನಗರ ಸಿವಿಲ್ ನ್ಯಾಯಾಲಯದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗೆ ಕರ್ನಾಟಕ ಸರಕಾರದ ವೇತನ ಶ್ರೇಣಿಯ ಪ್ರಕಾರ ಸಂಬಳ ನೀಡಲಾಗುತ್ತದೆ. ಮೂಲವೇತನದ ಜೊತೆಗೆ ವಿವಿಧ ಸರ್ಕಾರಿ ಭತ್ಯೆಗಳು ಲಭ್ಯವಾಗುತ್ತದೆ.
Pron ಹುದ್ದೆ ವೇತನ
- ವೇತನ ಶ್ರೇಣಿ : ₹27,000 ರಿಂದ ₹52,000 ವರೆಗೆ
Driver ಹುದ್ದೆ ವೇತನ
- ವೇತನ ಶ್ರೇಣಿ : 27,000 ರಿಂದ 67,000 ವರೆಗೆ
ಮೂಲವೇತನದ ಜೊತೆಗೆ ಕೆಳಕಂಡ ಸೌಲಭ್ಯಗಳು ನಿಯಮಾನಸಾರ ತೊರೆಯಬಹುದು.
- ಡಿಎ (Dearness Allowance )
- ಎಚ್ ಆರ್ ಎ (House Rent Allowance )
- ವೈದ್ಯಕೀಯ ಭತ್ಯೆ
- ಪ್ರಮಾಣ ಭತ್ಯೆ
- ಇತರೆ ಸರ್ಕಾರದ ಭತ್ಯೆ
ಇವುಗಳಿಂದ ಒಟ್ಟಾರೆ ಮಾನಸಿಕ ಆದಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಆಯ್ಕೆ ವಿಧಾನ
ನಗರ ಸಿವಿಲ್ ಕೋರ್ಟ್ ನೇಮಕಾತಿ ಅಭ್ಯರ್ಥಿಗಳನ್ನು ಪಾರದರ್ಶಕ ವಿಧಾನದಲ್ಲಿ ಆಯ್ಕೆ ಮಾಡಲಾಗುತ್ತದೆ. ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆ ಬದಲಾಗಬಹುದು.
- ಅರ್ಜಿಗಳ ಪರಿಶೀಲನೆ
- ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಅಗತ್ಯ ದಾಖಲೆಗಳ ಪಟ್ಟಿ :
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಸಹಿ
- ಇತ್ತೀಚಿನ ಪಾಸ್ಪೋರ್ಟ್ ಗಾತದ ಫೋಟೋ
- ಚಾಲಕ ಹುದ್ದೆಗೆ ಮಾನ್ಯ Heavy Licences
- ಇತರೆ ಅಗತ್ಯ ಪ್ರಮಾಣ ಪತ್ರಗಳು
ದಾಖಲೆಗಳಲ್ಲಿನ ಹೆಸರು ಜನ್ಮ ದಿನಾಂಕ ಮತ್ತು ಇತರೆ ವಿವರಗಳು ಒಂದೇ ರೀತಿಯಲ್ಲಿ ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು.
Peon ಹುದ್ದೆಯ ಕೆಲಸದ ವಿವರ
ಈ ಹುದ್ದೆಯ ನ್ಯಾಯಾಲಯದ ದೈನಂದಿನ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮುಖ್ಯ ಕರ್ತವ್ಯಗಳು:
- ನ್ಯಾಯಾಲಯದ ದಾಖಲೆಗಳನ್ನು ಸುರಕ್ಷಿತವಾಗಿ ಸಾಗಿಸುವುದು
- ಕಡತಗಳನ್ನು ವಿವಿಧ ವಿಭಾಗಗಳಿಗೆ ತಲುಪಿಸುವುದು
- ಕಚೇರಿ ಸ್ವಚ್ಛತೆ ಕಾಪಾಡುವುದು
- ನ್ಯಾಯಾಲಯದ ಸಿಬ್ಬಂದಿಗೆ ಅಗತ್ಯ ಸಹಾಯ ಮಾಡುವುದು
- ಅಧಿಕೃತ ದಾಖಲೆಗಳನ್ನು ಸರಿಯಾದ ಸ್ಥಳದಲ್ಲಿ ಇರಿಸುವುದು
- ಸಭೆ ಹಾಗೂ ನ್ಯಾಯಾಲಯದ ಕಾರ್ಯಗಳಿಗೆ ಅಗತ್ಯ ಮಾಡುವುದು
- ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶನ ನೀಡುವುದು
ಈ ಹುದ್ದೆಯಲ್ಲಿ ಸಮಯ ಪಾಲನೆ ಜವಾಬ್ದಾರಿ ಮತ್ತು ಪ್ರಾಮಾಣಿಕತೆ ಅತ್ಯಂತ ಮುಖ್ಯ .
Driver ಹುದ್ದೆಯ ಕೆಲಸದ ವಿವರ
ಚಾಲಕ ಹುದ್ದೆಯೂ ಅತ್ಯಂತ ಜವಾಬ್ದಾರಿಯುತ್ತ ಹುದ್ದೆಯಾಗಿದೆ.
ಮುಖ್ಯ ಕರ್ತವ್ಯಗಳು :
- ನ್ಯಾಯಾಲಯದ ಅಧಿಕೃತ ವಾಹನಗಳನ್ನು ಸುರಕ್ಷಿತವಾಗಿ ಚಾಲನೆ ಮಾಡುವುದು
- ಅಧಿಕಾರಿಗಳನ್ನು ಅಧಿಕೃತ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವುದು
- ವಾಹನದ ನಿಯಮಿತ ನಿರ್ವಹಣೆ ಮಾಡುವುದು
- ವಾಹನವನ್ನು ಸ್ವಚ್ಛವಾಗಿ ಇರಿಸುವುದು
- ಸಂಚಾರ ನಿಯಮಗಳನ್ನು ಪಾಲಿಸುವುದು
- ವಾಹನ ದಾಖಲೆಗಳನ್ನು ನವೀಕರಿಸಿಟ್ಟುಕೊಳ್ಳುವುದು
- ತುರ್ತು ಪರಿಸ್ಥಿತಿಯಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದು
ಅರ್ಜಿ ಸಲ್ಲಿಸುವಾಗ ಸಾಮಾನ್ಯವಾಗಿ ಆಗುವ ತಪ್ಪುಗಳು
ಅನೇಕ ಅಭ್ಯರ್ಥಿಗಳು ಸಣ್ಣ ತಪ್ಪುಗಳಿಂದ ಅರ್ಜಿ ತಿರಸ್ಕೃತವಾಗುವ ಪರಿಸ್ಥಿತಿ ಎದುರಾಗುತ್ತದೆ.
ಆದ್ದರಿಂದ ಈ ತಪ್ಪುಗಳನ್ನು ತಪ್ಪಿಸಿ.
- ತಪ್ಪಾದ ಮೊಬೈಲ್ ಸಂಖ್ಯೆ ನೀಡುವುದು
- ತಪ್ಪಾದ ಇಮೇಲ್ ಐಡಿ ನಮೂದಿಸುವುದು
- ಸ್ಪಷ್ಟವಲ್ಲದ ದಾಖಲೆಗಳನ್ನು ಅಪ್ಲೋಡ್ ಮಾಡುವುದು
- ತಪ್ಪಾದ ಫೋಟೋ ಅಪ್ಲೋಡ್ ಮಾಡುವುದು
- ಸಹಿ ಸರಿಯಾಗಿ ಅಪ್ಲೋಡ್ ಮಾಡದಿರುವುದು
- ಕೊನೆ ದಿನಾಂಕದ ನಂತರ ಅರ್ಜಿ ಸಲ್ಲಿಸಲು ಪ್ರಯತ್ನಿಸುವುದು
- ಅಪೂರ್ಣ ಮಾಹಿತಿಯನ್ನು ಸಲ್ಲಿಸುವುದು
ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ನೀಡುವ ಮಾಹಿತಿಯು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಅರ್ಜಿ ಸಲ್ಲಿಸುವ ಹಂತಗಳು
ಹಂತ 1: ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
ಹಂತ 2 : “City Civil Court Recruitment 2026″ ಅಥವಾ ಸಂಬಂಧಿತ ನೇಮಕಾತಿ ಲಿಂಕ್ ಆಯ್ಕೆ ಮಾಡಿ.
ಹಂತ 3 : ಹೊಸ ಬಳಕೆದಾರರಾಗಿದ್ದರೆ ಮೊದಲು ನೊಂದವಣಿ ಪೂರ್ಣಗೊಳಿಸಿ.
ಹಂತ 4 : ಅರ್ಜಿ ನಮೂನೆಯಲ್ಲಿ ಹೆಸರು, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್, ಹಾಗೂ ವಿದ್ಯಾರ್ಹತೆ ವಿವರಗಳನ್ನು ಭರ್ತಿ ಮಾಡಿ.
ಹಂತ 5 : ಅಗತ್ಯ ದಾಖಲೆಗಳು ಫೋಟೋ ಮತ್ತು ಸಹಿಯನ್ನು ಸೂಚಿಸಿರುವ ಗಾತ್ರದಲ್ಲಿ ಅಪ್ಲೋಡ್ ಮಾಡಿ.
ಹಂತ 6 : ಅರ್ಜಿ ಶುಲ್ಕ ಅನ್ವಯಿಸಿದರೆ ಆನ್ಲೈನ್ ಮೂಲಕ ಪಾವತಿಸಿ.
ಹಂತ 7 : ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮವಾಗಿ Sumbit ಮಾಡಿ.
ಹಂತ 8 : ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಪ್ರಿಂಟ್ ಅಥವಾ PDF ಪ್ರತಿಯನ್ನು ಉಳಿಸಿಕೊಳ್ಳಿ.
ಪರೀಕ್ಷೆಗೆ ಉಪಯುಕ್ತ ಸಲಹೆಗಳು
ಸರ್ಕಾರಿ ಉದ್ಯೋಗ ಪಡೆಯಲು ಸರಿಯಾದ ತಯಾರಿ ಬಹಳ ಮುಖ್ಯ.
- ಪ್ರತಿದಿನ ಪ್ರಚಲಿತ ವಿದ್ಯಮಾನಗಳನ್ನು ಓದಿ.
- ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ.
- ಕನ್ನಡ, ಇಂಗ್ಲಿಷ್, ಗಣಿತ ಮತ್ತು Reasoning ವಿಷಯಗಳಿಗೆ ಸಮಯ ಮೀಸಲಿಡಿ.
- Mock Test ಬರೆಯುವ ಅಭ್ಯಾಸ ಬೆಳೆಸಿಕೊಳ್ಳಿ.
- ಸಮಯ ನಿರ್ವಹಣೆಗೆ ಆದ್ಯತೆ ನೀಡಿ.
ಅಂತಿಮ ಮಾತು
ಬೆಂಗಳೂರ್ ನಗರ ಸಿವಿಲ್ ನ್ಯಾಯಾಲಯದ ಈ ನೇಮಕಾತಿಯು 10ನೇ ತರಗತಿ ವಿ ತೀರ್ಮಾನ ಅಭ್ಯರ್ಥಿಗಳಿಗೆ ಉತ್ತಮ ಸರಕಾರಿ ಉದ್ಯೋಗವಕಾಶವಾಗಿದೆ.Peon ಹಾಗೂ Driver ಹುದ್ದೆಗಳ ಮೂಲಕ ಒಟ್ಟು 88 ಹುದ್ದೆಗಳು ಭರ್ತಿಯಾಗಲಿದ್ದು ಉತ್ತಮ ವೇತನ, ಉದ್ಯೋಗ ಭದ್ರತೆ, ವಾರ್ಷಿಕ ವೇತನ ಹೆಚ್ಚಳ ಮತ್ತು ವಿವಿಧ ಸರ್ಕಾರಿ ಸೌಲಭ್ಯಗಳು ದೊರೆಯಲಿದೆ.
ಅರ್ಹ ಅಭ್ಯರ್ಥಿಗಳು 01 ಜುಲೈ 2026 ರಿಂದ 30 ಜುಲೈ 2026ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ನಂತರವೇ ಅರ್ಜಿ ಸಲ್ಲಿಸುವುದು ಉತ್ತಮ.
APPLICATION LINK : https://bengaluru.dcourts.gov.in/recruitment-status-ccc/