Telegram Join My Telegram WhatsApp Join My WhatsApp

PM ಮಹಿಳೆಯರಿಗೆ ವರ್ಷಕ್ಕೆ ₹12,000 ಆರ್ಥಿಕ ನೆರವು? ವೈರಲ್ ಸುದ್ದಿಯ ಹಿಂದಿನ ಸತ್ಯ ಏನು? ಮಹಿಳೆ ಸಬಲೀಕರಣದ ಮಹತ್ವ ಮತ್ತು ಸರ್ಕಾರದ  ಯೋಜನೆಗಳ ಸಂಪೂರ್ಣ ಮಾಹಿತಿ 

ಮಹಿಳೆಯರಿಗೆ ವರ್ಷಕ್ಕೆ ₹12,000ಮಹಿಳೆಯರಿಗೆ ವರ್ಷಕ್ಕೆ ₹12,000 ಆರ್ಥಿಕ ನೆರವು ಎಂಬ ಸುದ್ದಿ ಏಕೆ ವೈರಲಾಗಿದೆ? 

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳು ವಾಟ್ಸಾಪ್ ಗುಂಪುಗಳು ಹಾಗೂ ವಿವಿಧ ವೆಬ್ಸೈಟ್ಗಳಲ್ಲಿ ಮಹಿಳೆಯರಿಗೆ ವರ್ಷಕ್ಕೆ ₹12,000 ನೆರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಹೊಸ ಯೋಜನೆ ಜಾರಿಗೆ ತಂದಿದ್ದು ಅರ್ಹ ಮೈಲೇರಿಗೆ ಪ್ರತಿ ತಿಂಗಳು ₹1,000 ಅಥವಾ ವರ್ಷಕ್ಕೆ ₹12,000 ನೀಡಲಾಗುತ್ತದೆ ಎಂಬ ರೀತಿಯ ಸಂದೇಶಗಳು ಜನರ ಗಮನಸಲಿದಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸದಸ್ಯರು ಈ ಸುದ್ದಿಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಮಾಹಿತಿಯ ಪರಿಣಾಮವಾಗಿ ಅನೇಕ ಮಹಿಳೆಯರು ಇದು ನಿಜವೇ? ಹೊಸ ಯೋಜನೆ ಘೋಷಣೆ ಆಯಿತೇ? ಅರ್ಜಿ ಸಲ್ಲಿಸಲು ಯಾವ ದಾಖಲೆ ಬೇಕು? ಯಾರು ಅರ್ಹರು?  ಎಂಬ ಪ್ರಶ್ನೆಗಳು ಕೇಳಲು ಆರಂಭಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಮಾಹಿತಿಯನ್ನು ಅದರ ಮೂಲವನ್ನು ಪರಿಶೀಲಿಸುವುದು ಅತ್ಯಂತ ಮುಖ್ಯವಾಗಿದೆ. ಏಕಂದರೆ ಇತ್ತೀಚಿನ ದಿನಗಳಲ್ಲಿ ಹಲವಾರು ನಕಲಿ ಯೋಜನೆಯಗಲ ಸುದ್ದಿಗಳನ್ನು  ಜನರು ಅನುಭವಿಸುತ್ತಿದ್ದಾರೆ.

ಮಹಿಳಾ ಸಬಲೀಕರಣದ ಕಡೆ ಸರ್ಕಾರದ ಹೆಚ್ಚುತ್ತಿರುವ ಗಮನ 

ಭಾರತದಲ್ಲಿ ಮಹಿಳಾ ಸಬಲೀಕರಣ ಕಳೆದ ಒಂದು ದಶಕದಿಂದ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ದೇಶದ ಅಭಿವೃದ್ಧಿಯ ಮಹಿಳೆಯರ ಪಾತ್ರ ಅತ್ಯಂತ ಮಹತ್ವವಾಗಿದ್ದು ಮಹಿಳೆಯರು ಆರ್ಥಿಕವಾಗಿ ಬಲಿಷ್ಠರಾದರೆ ಕುಟುಂಬ ಸಮಾಜ ಮತ್ತು ರಾಷ್ಟ್ರದ ಪ್ರಗತಿ ವೇಗವಾಗಿ ನಡೆಯುತ್ತದೆ. ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ಕಾರಣದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಕಲ್ಯಾಣಕ್ಕಾಗಿ  ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

ಇಂದಿನ ಕಾಲದಲ್ಲಿ ಮಹಿಳೆಯರು ಕೇವಲ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವುದಲ್ಲದೆ ಉದ್ಯೋಗ, ಉದ್ಯಮ, ಶಿಕ್ಷಣ, ಕೃಷಿ ಮತ್ತು ಸೇವಾ ಕ್ಷೇತ್ರಗಳಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಿನ ಕುಟುಂಬದ ಜೀವನ ಮಟ್ಟ ಸುಧಾರಿಸುತ್ತದೆ. ಮಕ್ಕಳ ಶಿಕ್ಷಣ ಆರೋಗ್ಯ ಮತ್ತು ಭವಿಷ್ಯದ ಭದ್ರತೆಗೂ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತದೆ. ಆದ್ದರಿಂದ ಮಹಿಳೆಯರಿಗೆ ನೇರ ಹಣಕಾಸು ನೆರವು ನೀಡು ಯೋಜನೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಆಸಕ್ತಿ ಮೂಡಿ ಇರುವುದು ಸಹಜವಾಗಿದೆ.

ಮಹಿಳೆಯರಿಗೆ ನೇರ ಹಣ ವರ್ಗಾವಣೆ  ಯೋಜನೆಗಳ ಅಗತ್ಯತೆ 

ಕೇಂದ್ರ ಸರ್ಕಾರ ಕಳೆದ ಕೆಲವು ವರ್ಷಗಳಿಂದ ನೇರ ಲಾಭ ವರ್ಗಾವಣೆ ವ್ಯವಸ್ತೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಡೈರೆಕ್ಟರ್ ಬೆನಿಫಿಟ್ ಟ್ರಾನ್ಸ್ಫರ್ (DBT) ವ್ಯವಸ್ಥೆಯ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣಜಮ ಮಾಡಲಾಗುತ್ತದೆ. ಈ ಸಮಸ್ಯೆಯಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗಿದ್ದು ಭ್ರಷ್ಟಾಚಾರ ನಿಯಂತ್ರಣಕ್ಕೂ ಸಹಾಯವಾಗಿದೆ.

ನೇರ ಹಣ ವರ್ಗಾವಣೆ ಯೋಜನೆಗಳ ಪ್ರಮುಖ ಉದ್ದೇಶ ಫಲಾನುಭವಿಗಳಿಗೆ ತ್ವರೀತ ಹಾಗೂ ಪಾರದರ್ಶಕ ರೀತಿಯ ನೆರವು ಒದಗಿಸುವುದಾಗಿದೆ. ಹಿಂದೆ ವಿವಿಧ ಯೋಜನೆಗಳ ಹಣ ಫಲಾನುಭವಿಗಳಿಗೆ ತಲುಪುವಲ್ಲಿ ವಿಳಂಬವಾಗುತ್ತಿತ್ತು ಕೆಲವೊಮ್ಮೆ ಮಧ್ಯವರ್ತಿಗಳ ದುರುಪಯೋಗ ಆಗಿತ್ತು. ಆದರೆ ಈಗ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುವುದರಿಂದ ಮಹಿಳೆಯರು ಸ್ವತಃ ತಮ್ಮ ಹಣವನ್ನು ನಿರ್ವಹಿಸಬಹುದು.

ಮಹಿಳೆಯರ ಹೆಸರಿನ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುವುದರಿಂದ ಅವರ ಆರ್ಥಿಕ ಸ್ವಾತಂತ್ರ್ಯ ಹೆಚ್ಚುತ್ತದೆ. ಕುಟುಂಬದ ಅಗತ್ಯಗಳಿಗೆ ಅನುಗುಣವಾಗಿ ಹಣವನ್ನು ಬಳಸಲು ಅವಕಾಶ ಸಿಗುತ್ತದೆ. ಜೊತೆಗೆ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಅರಿವು ಹೆಚ್ಚುವುದಕ್ಕೂ ಇದು ಕಾರಣವಾಗುತ್ತದೆ.

ವರ್ಷಕ್ಕೆ ₹12,000 ನೆರವು ಸಿಕ್ಕರೆ ಕುಟುಂಬಕ್ಕೆ ಆಗುವ ಪ್ರಯೋಜನಗಳು 

ಒಂದು ಕುಟುಂಬದಲ್ಲಿ ಮಹಿಳೆಯರಿಗೆ ವರ್ಷಕ್ಕೆ 12,000 ಅಥವಾ ಪ್ರತಿ ತಿಂಗಳು 1000 ಸಹಾಯಧನ ದೊರೆಯುತ್ತದೆ ಅದು ಸಣ್ಣ ಮೊತ್ತವೆಂದು ಅವರು ಭಾವಿಸಬಹುದು. ಆದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಈ ಮತ್ತು ಬಹಳ ಉಪಯುಕ್ತವಾಗಬಹುದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕಡಿಮೆ ಆದೆ ಹೊಂದಿರುವ ಕುಟುಂಬಗಳಲ್ಲಿ ಈ ಹಣ ಹಲವು ಅಗತ್ಯಗಳನ್ನು ಪೂರೈಸಲು ನೆರವಾಗುತ್ತದೆ.

ಮನೆ ಬಳಕೆ ದಿನನಿತ್ಯದ ವಸ್ತುಗಳು ಖರೀದಿ, ಮಕ್ಕಳ ಶಿಕ್ಷಣ ವೆಚ್ಚ, ಔಷಧಿಗಳ ಖರೀದಿ ಹಾಗೂ ತುರ್ತು ಸಂದರ್ಭಗಳ ನಿರ್ವಹಣೆ ಸಹಾಯಕವಾಗಬಹುದು. ಅನೇಕ ಮಹಿಳೆಯರು ಸ್ವಸಹಾಯ ಸಂಘಗಳಲ್ಲಿ ಸದಸ್ಯರಾಗಿದ್ದು ಇಂತಹ ನೆರವನ್ನು ಉಳಿತಾಯ ರೂಪದಲ್ಲಿಯೂ ಬಳಸಬಹುದು. ಪ್ರತಿ ತಿಂಗಳು ಅಭ್ಯಾಸದಿಂದ ಭವಿಷ್ಯದಲ್ಲಿ ದೊಡ್ಡ ಆರ್ಥಿಕ ಭದ್ರತೆ ನಿರ್ಮಾಣವಾಗುತ್ತದೆ.

ಆರ್ಥಿಕ  ನೆರವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚುತ್ತದೆ. ತಮ್ಮ ಅಗತ್ಯಗಳಿಗೆ ಕುಟುಂಬದ ಇತರ ಇತರ ಸದಸ್ಯರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರಬೇಕಾದ ಪರಿಸ್ಥಿತಿ ಕಡಿಮೆ ಆಗುತ್ತದೆ. ಇದರಿಂದ ಮಹಿಳೆಯರ ಸಾಮಾಜಿಕ ಸ್ಥಾನಮಾನವೂ ಬಲಗೊಳ್ಳುತ್ತದೆ.

ಮಹಿಳಾ ಕಲ್ಯಾಣಕ್ಕಾಗಿ ಈಗಾಗಲೇ ಜಾರಿಯಲ್ಲಿರುವ ಪ್ರಮುಖ ಯೋಜನೆಗಳು

ಭಾರತದಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಮಹತ್ವದ ಯೋಜನೆಗಳು ಈಗಾಗಲೇ ಜಾರಿಯಲ್ಲಿದೆ. ಈ ಯೋಜನೆಗಳು ವಿವಿಧ ರೀತಿಯ ನೆರವುಗಳನ್ನು ಒದಗಿಸುತ್ತಿದೆ. ಕೆಲವು ಯೋಜನೆಗಳು ಆರೋಗ್ಯ, ಕೆಲವು ಶಿಕ್ಷಣ, ಇನ್ನೂ ಕೆಲವು ಆರ್ಥಿಕ ಸಬಲೀಕರಣದ ಮೇಲೆ ಕೇಂದ್ರೀಕೃತವಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಬಡ ಕುಟುಂಬಗಳ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣುಮಕ್ಕಳ ಭವಿಷ್ಯದ ಉಳಿತಾಯಕ್ಕಾಗಿ ಸಹಕಾರಿಯಾಗಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಮೂಲಕ ಲಕ್ಷಾಂತರ ಮಹಿಳೆಯರು ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ. ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ ಮೂಲಕ ಗರ್ಭಿಣಿಯರಿಗೆ ಆರ್ಥಿಕ ನೆರವು ನೀಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಸ್ವಸಾಯ ಸಂಘಗಳಿಗೆ ವಿವಿಧ ರೀತಿಯ ಬೆಂಬಲ ನೀಡಲಾಗಿದೆ. ರಾಜ್ಯ ಸರ್ಕಾರಗಳು ಮಹಿಳೆಯರಿಗೆ ಮಾನಸಿಕ ಆರ್ಥಿಕ ನೆರವು, ಉಚಿತ ಪ್ರಯಾಣ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವ ಯೋಜನೆಯನ್ನು ಜಾರಿಗೊಳಿಸಿವೆ.

ಯೋಜನೆಗಳಿಗೆ ಸಾಮಾನ್ಯವಾಗಿ ಅಗತ್ಯವಾಗುವ ದಾಖಲೆಗಳು

ಸರ್ಕಾರದ  ಯಾವುದೇ ಕಲ್ಯಾಣ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಕೆಲವು ಮೂಲ ದಾಖಲೆಗಳ ಅಗತ್ಯವಿರುತ್ತದೆ ಫಲಾನುಭವಿಗಳ ಗುರುತು ವಿಳಾಸ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಲು ಈ ದಾಖಲೆಗಳನ್ನು ಬಳಸಲಾಗುತ್ತದೆ.

ಆಧಾರ್  ಕಾರ್ಡ್ ಬಹುತೇಕ ಯೋಜನೆಗಳಿಗೆ ಪ್ರಮುಖ ದಾಖಲೆಯಾಗಿದೆ. ಬ್ಯಾಂಕ್ ಖಾತೆಯೊಂದಿಗೆ ಆದರ ಜೋಡಣೆ ಮಾಡಿರುವುದು ಹಲವು ಸಂದರ್ಭಗಳಲ್ಲಿ ಅಗತ್ಯವಾಗುತ್ತದೆ. ರೇಷನ್ ಕಾರ್ಡ್ ಕುಟುಂಬದ ಆರ್ಥಿಕ ಸ್ಥಿತಿ ಮತ್ತು ಸದಸ್ಯರ ವಿವರಗಳನ್ನು ದೃಢೀಕರಿಸಲು ಉಪಯೋಗವಾಗುತ್ತದೆ.

ಬ್ಯಾಂಕ್ ಪಾಸ್ ಬುಕ್, ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ ಹಾಗೂ ಪಾಸ್ಪೋರ್ಟ್ ಗಾತ್ರದ ಭಾವಚಿತ್ರಗಳನ್ನು ಸಾಮಾನ್ಯವಾಗಿ ಬೇಕಾಗುತ್ತದೆ. ಯೋಜನೆಯ ಸ್ವರೂಪಕ್ಕೆ ಅನುಗುಣವಾಗಿ ಹೆಚ್ಚುವರಿ ದಾಖಲೆಗಳನ್ನು ಕೂಡ ಕೇಳಬಹುದು.

ಹಣ ಜಮಾ ಆಗಿದೆ ಎಂಬುದನ್ನು ಹೇಗೆ ಪರಿಶೀಲಿಸಬಹುದು ?

ಸರ್ಕಾರದ ಯೋಜನೆಗಳ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂಬುದನ್ನು ಪರಿಶೀಲಿಸಲು ಹಲವು ವಿಧಾನಗಳಿವೆ. ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ ಮಾಡಿಸುವ ಮೂಲಕ ವ್ಯವಹಾರಗಳ ವಿವರಗಳನ್ನು ನೋಡಬಹುದು. ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಹಣ ಜಮಾ ಆದಾಗ ಸಂದೇಶ ಬರುತ್ತದೆ.

ಎಟಿಎಂ ಮೂಲಕ ಮಿನಿ ಸ್ಟೇಟ್ಮೆಂಟ್ ಪಡೆಯುವ ಮೂಲಕ ಇತ್ತೀಚಿನ ವ್ಯವಹಾರಗಳನ್ನು ಪರಿಶೀಲಿಸಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಸೇವ ಕೇಂದ್ರಗಳು, ಗ್ರಾಮ ಒನ್, ಕರ್ನಾಟಕ ಒನ್, ಹಾಗೂ ಇತರ ನಾಗರಿಕ ಸೇವಾ ಕೇಂದ್ರಗಳ ಮೂಲಕ ಮಾಹಿತಿ ಪಡೆಯಬಹುದು.

ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುವ ಅವರು ಮೊಬೈಲ್ ಬ್ಯಾಂಕಿಂಗ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ತಮ್ಮ ಖಾತೆಯ ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು.

ಈ ಯೋಜನೆಗೆ ಅರ್ಜಿ  ಸಲ್ಲಿಸುವ ವಿಧಾನ 

ಅರ್ಜಿಯನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಸಲ್ಲಿಸಬಹುದು. ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು, ಬೇಕಾದ ದಾಖಲೆಗಳನ್ನು( ಆಧಾರ್ ಕಾರ್ಡು, ಶಿಕ್ಷಣ ಪ್ರಮಾಣ ಪತ್ರಗಳು, ಫೋಟೋ ಇತ್ಯಾದಿ) ಜೋಡಿಸಿ ಇರಬೇಕು, ಅರ್ಜಿ ಶುಲ್ಕವಿದ್ದರೆ ಪಾವತಿಸಿ, ಕಲಿಕೆ ನಂತರ ಸ್ವೀಕೃತ ಸಂಖ್ಯೆ ಅಥವಾ ರಸೀದಿಯನ್ನು ಉಳಿಸಿಕೊಳ್ಳಬೇಕು. ಹೀಗೆ ಎಲ್ಲರೂ ತಪ್ಪು ಮಾಡದೆ ಅರ್ಜಿ ಸಲ್ಲಿಸಬೇಕು. ತಪ್ಪು ಮಾಡಿದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ.

ಅಂತಿಮ ಮಾತು 

ಮಹಿಳೆಯರಿಗೆ ವರ್ಷಕ್ಕೆ ₹12,000 ಆರ್ಥಿಕ ನೆರವು ನೀಡಲಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ   ನಗರದಲ್ಲಿ ವ್ಯಾಪಕವಾಗಿ ಹರಡುತ್ತಿದ್ದರು ಯಾವುದೇ ಹೊಸ ಯೋಜನೆಗೆ ಸಂಬಂಧಿಸಿ ಪ್ರಕಟಣೆ ಹೊರಬಂದ ನಂತರವೇ ಅದನ್ನು ನಂಬುವುದು ಸೂಕ್ತ. ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಹಲವು ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಿದ್ದು ಲಕ್ಷಾಂತರ ಮಹಿಳೆಯರು ಅವುಗಳ ಪ್ರಯೋಜನ ಪಡೆಯುತ್ತಿದ್ದಾರೆ.

ಯಾವುದೇ ಹೊಸ ಯೋಜನೆ ಕುರಿತು ಮಾಹಿತಿ ದೊರೆತಾಗ ಅದರ ಸತ್ಯತೆಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ. ಅಧಿಕೃತ ಮೂಲಗಳಿಂದ ಮಾಹಿತಿ ಪಡೆದು ಅರ್ಹತೆ ಹಾಗೂ ನಿಯಮಗಳನ್ನು ತಿಳಿದುಕೊಂಡ ನಂತರ ಅರ್ಜಿ ಸಲ್ಲಿಸಬೇಕು. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಪ್ರಗತಿಗಾಗಿ ಸರ್ಕಾರದ ಯೋಜನೆಗಳು ಮಹತ್ವದ ಪಾತ್ರ ವಹಿಸಿದ್ದು, ಭವಿಷ್ಯದಲ್ಲಿಯೂ ಇನ್ನಷ್ಟು ಅವಕಾಶಗಳು ಲಭ್ಯವಾಗುವ ನೀರಿಕ್ಷೆ ಇದೆ.

Leave a Comment