ಡ್ರೈವರ್ ಹುದ್ದೆಗಳ ನೇಮಕಾತಿಡ್ರೈವರ್ ಹುದ್ದೆಗಳ ನೇಮಕಾತಿಡ್ರೈವರ್ ಹುದ್ದೆಗಳ ನೇಮಕಾತಿ – 10ನೇ ಪಾಸಾದವರಿಗೆ ಸುವರ್ಣ ಅವಕಾಶ..!
ಪರಿಚಯ
ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ Cochin Shipyard Limited (CSL) ಇದೀಗ ಡ್ರೈವರ್ ಹುದ್ದೆಗಳ ನೇಮತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಹತ್ತನೇ ತರಗತಿ ಪಾಸ್ ಆಗಿರುವ ಹಾಗೂ ಮಾನ್ಯ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತಮ ವೇತನ ಕೇಂದ್ರ ಸರ್ಕಾರದ ಸಂಸ್ಥೆಯಿಂದ ಕೆಲಸ ಮಾಡುವ ಅವಕಾಶ ಹಾಗೂ ಸ್ಥಿರ ಉದ್ಯೋಗ ಸೌಲಭ್ಯಗಳ ಕಾರಣದಿಂದಾಗಿ ನೇಮಕಾತಿಗೆ ಸಾಕಷ್ಟು ಬೇಡಿಕೆ ಇರುವ ಸಾದ್ಯತೆ ಇದೆ.
ಪ್ರಸ್ತುತ Cochin Shipyard Limited ಸಂಸ್ಥೆ ಒಟ್ಟು 2 ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೊದಲು ಅರ್ಹತೆ, ವಯೋಮಿತಿ, ಅನುಭವ, ಆಯ್ಕೆ ಪ್ರಕ್ರಿಯೆ ಹಾಗೂ ಅಧಿಕೃತ ಸೂಚನೆಯಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದೆ.
Cochin Shipyard Limited ಬಗ್ಗೆ ಮಾಹಿತಿ
Cochin Shipyard Limited ಭಾರತ ಸರ್ಕಾರದ ಪ್ರಮುಖ shipyard ಸಂಸ್ಥೆಗಳಲ್ಲಿ ಒಂದು. ಈ ಸಂಸ್ಥೆ ಹಡಗು ನಿರ್ಮಾಣ, ಹಡಗು ದುರಸ್ತಿ ಹಾಗೂ ಸಮುದ್ರ ಸಾರಿಗೆ ಕ್ಷೇತ್ರದಲ್ಲಿ ದೇಶದ ಪ್ರಮುಖ ಪಾತ್ರವಹಿಸಿದೆ. ಕೇರಳದ ಕೊಚ್ಚಿ ನಗರದಲ್ಲಿ ಸ್ಥಾಪಿತವಾಗಿರುವ ಈ ಸಂಸ್ಥೆ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ದೇಶದ ಅನೇಕ ತಾಂತ್ರಿಕ ಹಾಗೂ ಆಡಳಿತಾತ್ಮಕ ಹುದ್ದೆಗಳಿಗೆ ಉದ್ಯೋಗಾವಕಾಶಗಳನ್ನು ನೀಡುತ್ತದೆ.
Cochin Shipyard Limited ನಲ್ಲಿ ಉದ್ಯೋಗ ಪಡೆಯುವುದು ಅನೇಕ ಅಭ್ಯರ್ಥಿಗಳ ಕನಸಾಗಿದ್ದು, ಸಂಸ್ಥೆ ಉತ್ತಮ ವೇತನ, ಭದ್ರ ಉದ್ಯೋಗ, ಪಿಂಚಣಿ ಸೌಲಭ್ಯ ಹಾಗೂ ಇತರೆ ಅನೇಕ ಸರ್ಕಾರಿ ಸೌಲಭ್ಯಗಳನ್ನು ಒದಗಿಸುತ್ತದೆ. ಈಗ ಡ್ರೈವರ್ ಹುದ್ದೆಗಳ ನೇಮಕಾತಿ ಪ್ರಕಟವಾಗಿರುವುದರಿಂದ ಚಾಲನಾ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಹುದ್ದೆಯ ಸಂಪೂರ್ಣ ಮಾಹಿತಿ
ಈ ನೇಮಕಾತಿಯಲ್ಲಿ ಡ್ರೈವರ್ ಹುದ್ದೆಗಳಿಗೆ ಒಟ್ಟು 2 ಹುದ್ದೆಗಳು ಖಾಲಿ ಇದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಕೊಚ್ಚಿನ ಕೇರಳದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದೆ. ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಸಂಸ್ಥೆಯು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 09 ಜೂನ್ 2026 ಎಂದು ನಿಗದಿಪಡಿಸಿದೆ. ಮತ್ತು ವಿದ್ಯಾರ್ಹತೆ 10ನೇ ತರಗತಿ ಪಾಸಾದರೆ ಸಾಕು. ಮಾನಸಿಕ ವೇತನ ₹ 27000 ನೀಡಲಾಗುತ್ತದೆ.
ಕೇರಳದಲ್ಲಿ ಉದ್ಯೋಗ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಬೇರೆ ರಾಜ್ಯದ ಅಭ್ಯರ್ಥಿಗಳಿಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅನುಭವ ಹೊಂದಿರುವ ಚಾಲಕರಿಗೆ ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತಿರುವುದು ವಿಶೇಷವಾಗಿದೆ.
ಇತ್ತೀಚಿನ ದಿನಗಳಲ್ಲಿ ಚಾಲನಾ ವೃತ್ತಿಗೆ ಹೆಚ್ಚಿನ ಬೇಡಿಕೆ ಇದೆ. ಅನುಭವ ಹೊಂದಿರುವ ಚಾಲಕರಿಗೆ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉತ್ತಮ ಅವಕಾಶ ದೊರೆಯುತ್ತಿದೆ. ವಿಶೇಷವಾಗಿ ಸುರಕ್ಷಿತ ಚಾಲನೆ ಹಾಗೂ ರಸ್ತೆ ನಿಯಮಗಳ ಅರಿವು ಹೊಂದಿರುವ ಅವರಿಗೂ ಉತ್ತಮ ಉದ್ಯೋಗ ಭವಿಷ್ಯ ಇದೆ.
ವಿದ್ಯಾರ್ಹತೆ ಏನು ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಲವು ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರಬೇಕು. ಸರ್ಕಾರ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಹತ್ತನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಮಾನ್ಯ Light Motor Vihicle ( LMV) Driving License ಕಡ್ಡಾಯವಾಗಿದೆ.
ಅಭ್ಯರ್ಥಿಗಳಿಗೆ ಕನಿಷ್ಠ 10 ವರ್ಷಗಳ ಚಾಲನಾ ಅನುಭವವಿರಬೇಕು ಎಂದು ಸಂಸ್ಥೆ ತಿಳಿಸಿದೆ. ಅನುಭವ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದ್ದು, ಅನುಭವವಿಲ್ಲದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಚಾಲನಾ ಕೌಶಲ್ಯ, ರಸ್ತೆ ನಿಯಮಗಳ ಅರಿವು, ವಾಹನ ನಿರ್ವಹಣೆಯ ತಿಳುವಳಿಕೆ ಹಾಗೂ ಸುರಕ್ಷಿತ ಚಾಲನೆ ಬಗ್ಗೆ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಆದ್ಯತೆ ದೊರೆಯುವ ಸಾಧ್ಯತೆ ಇದೆ.
ಡ್ರೈವಿಂಗ್ ಲೈಸೆನ್ಸ್ ಮಹತ್ವ
ಡ್ರೈವರ್ ಹುದ್ದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಡ್ರೈವಿಂಗ್ ಲೈಸೆನ್ಸ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಅಭ್ಯರ್ಥಿಗಳ ಬಳಿ ಮಾನ್ಯ ಡ್ರೈವಿಂಗ್ ಲೈಸೆನ್ಸ್ ಇರಬೇಕು. ಲೈಸೆನ್ಸ್ ಅವಧಿ ಮುಗಿದಿದ್ದರೆ ಅಥವಾ ಅಮಾನ್ಯವಾಗಿದ್ದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ.
ಕೆಲವೊಮ್ಮೆ ಅಭ್ಯರ್ಥಿಗಳು Learning License ಅಥವಾ ತಾತ್ಕಾಲಿಕ ಲೈಸನ್ಸ್ ಹೊಂದಿರುತ್ತದೆ. ಇಂತಹ ಲೈಸೆನ್ಸ್ ಗಳನ್ನು ಸಾಮಾನ್ಯವಾಗಿ ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಅರ್ಜಿ ಸಲ್ಲಿಸುವುದು ಲೈಸೆನ್ಸ್ ಮಾನ್ಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಅನುಭವದ ಮಹತ್ವ
ಈ ನೇಮಕಾತಿಯಲ್ಲಿ ಚಾಲನಾ ಅನುಭವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕನಿಷ್ಠ 10 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ವಾಹನಗಳನ್ನು ಸುರಕ್ಷಿತವಾಗಿ ನಿರ್ವಹಿಸುವ ಜವಾಬ್ದಾರಿ ಇರುವುದರಿಂದ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅನುಭವ ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಯ ಹೆಸರು, ಕೆಲಸ ಮಾಡಿದ ಅವಧಿ, ಸಂಸ್ಥೆಯ ಹೆಸರು ಹಾಗೂ ಅಧಿಕಾರಿಯ ಸಹಿ ಇರಬೇಕು. ಸರಿಯಾದ ಪ್ರಮಾಣ ಪತ್ರ ಇಲ್ಲದಿದ್ದರೆ ಅನುಭವ ಪರಿಗಣಿಸಲಾಗುವುದಿಲ್ಲ.
ಚಾಲನಾ ಅನುಭವ ಹೊಂದಿರುವ ಅಭ್ಯರ್ಥಿಗಳು ಸಾಮಾನ್ಯವಾಗಿ ವಾಹನ ನಿರ್ವಹಣೆ, ರಸ್ತೆ ಸುರಕ್ಷತೆ, ಸಂಚಾರ ನಿಯಮಗಳು ಹಾಗೂ ತುರ್ತು ಪರಿಸ್ಥಿತಿಗಳ ನಿರ್ವಹಣೆ ಬಗ್ಗೆ ಉತ್ತಮ ಅರಿವು ಹೊಂದಿರುತ್ತಾರೆ. ಇದೇ ಕಾರಣಕ್ಕೆ ಅನುಭವವನ್ನು ಕಡ್ಡಾಯ ಅರ್ಹತೆಯಾಗಿ ಪರಿಗಣಿಸಲಾಗಿದೆ.
ವಯೋಮಿತಿ ವಿವರ
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 55 ವರ್ಷದೊಳಗಿರಬೇಕು. ಸರ್ಕಾರದ ನಿಯಮನುಸಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
SC/ST ಅಭ್ಯರ್ಥಿಗಳು, OBC ಅಭ್ಯರ್ಥಿಗಳು ಹಾಗೂ ಇತರೆ ಮೀಸಲಾತಿ ವರ್ಗದ ಅಭ್ಯರ್ಥಿಗಳು ಸರ್ಕಾರದ ನಿಯಮದಂತೆ ವಯೋಮಿತಿ ಸಡಿಲಿಕೆ ಪಡೆಯಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಉತ್ತಮ.
ವೇತನ ಹಾಗೂ ಸೌಲಭ್ಯಗಳು
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸುಮಾರು₹ 27000 ವೇತನ ನೀಡಲಾಗುತ್ತದೆ. ಜೊತೆಗೆ ಸಂಸ್ಥೆಯ ನಿಯಮನುಸಾರ ಇತರೆ ಸೌಲಭ್ಯಗಳು ದೊರೆಯಬಹುದು.
ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಾಮಾನ್ಯವಾಗಿ PF, ವೈದ್ಯಕೀಯ ಸೌಲಭ್ಯ, ರಜೆ ಸೌಲಭ್ಯ, ಪ್ರಯಣ ಭತ್ಯೆ ಹಾಗೂ ಇತರೆ ಅನೇಕ ಪ್ರಯೋಜನಗಳು ದೊರೆಯುತ್ತದೆ. Cochin Shipyard Limited ಕೂಡ ತನ್ನ ಸಿಬ್ಬಂದಿಗೆ ಉತ್ತಮ ಸೌಲಭ್ಯಗಳು ಒದಗಿಸುವ ಸಂಸ್ಥೆಯಾಗಿದೆ.
ಆಯ್ಕೆ ಪ್ರಕ್ರಿಯೆ
ಈ ನೇಮಕತಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಾಯೋಗಿಕ ಚಾಲನಾ ಪರೀಕ್ಷೆ, ದಾಖಲೆ ಪರಿಶೀಲನೆ ಹಾಗೂ ಅನುಭವ ಪರಿಶೀಲನೆಯ ಮೂಲಕ ನಡೆಯಲಿದೆ. ಚಾಲನಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ವಾಹನ ನಿಯಂತ್ರಣ, ರಸ್ತೆ ಸುರಕ್ಷತೆ ಹಾಗೂ ಚಾಲನಾ ಕೌಶಲ್ಯಗಳನ್ನು ಪರೀಕ್ಷಿಸಲಾಗುತ್ತದೆ. ಉತ್ತಮ ಚಾಲನಾ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ದೊರೆಯುವ ಸಾಧ್ಯತೆ ಇದೆ.
ಪ್ರಮುಖ ದಾಖಲೆಗಳು
ಅರ್ಜಿದಾರರು ಅರ್ಜಿ ಸಲ್ಲಿಸುವ ಮೊದಲು ಕೆಲವು ಪ್ರಮುಖ ದಾಖಲೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು. SSLC ಅಥವಾ ಹತ್ತನೇ ತರಗತಿಯ ಅಂಕಪಟ್ಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಅನುಭವ ಪ್ರಮಾಣ ಪತ್ರ, ಪಾಸ್ಪೋರ್ಟ್ ಸೈಜ್ ಫೋಟೋ, ಸಹಿ, ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ಕಡ್ಡಾಯವಾಗಿರುತ್ತದೆ. ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡದಿದ್ದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ.
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅಭ್ಯರ್ಥಿಗಲು ಮೊದಲು Cochin Shipyard Limited ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ Recruitment ವಿಭಾಗ ತೆರೆಯಬೇಕು. ನಂತರ Driver Recruitment 2026 ಲಿಂಕ್ ಕ್ಲಿಕ್ ಮಾಡಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಬಳಿಕ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು Submit ಮಾಡಬೇಕು. ಕೊನೆಯಲ್ಲಿ ಅರ್ಜಿ ಪ್ರಿಂಟ್ ತೆಗೆದು ಇಟ್ಟುಕೊಳ್ಳುವುದು ಉತ್ತಮ.
ಅರ್ಜಿ ಸಲ್ಲಿಸುವ ಗಮನಿಸಬೇಕಾದ ಅಂಶಗಳು
ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಬಾರದು. ಮತ್ತು ಹೆಸರು, ಜನ್ಮ ದಿನಾಂಕ ಹಾಗೂ ಲೈಸನ್ಸ್ ಸಂಖ್ಯೆ ಸರಿಯಾಗಿರಬೇಕು. ಅನುಭವ ಪ್ರಮಾಣ ಪತ್ರವನ್ನು ಸರಿಯಾಗಿ ಅಪ್ಲೋಡ್ ಮಾಡಬೇಕು. ಮತ್ತು ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಸಕ್ರಿಯವಾಗಿರಬೇಕು. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಬೇಕು.
ಮಹಿಳೆಯರು ಅರ್ಜಿ ಸಲ್ಲಿಸಬಹುದೇ ?
ಮಾನ್ಯ ಚಾಲನಾ ಲೈಸೆನ್ಸ್ ಹಾಗೂ ಅಗತ್ಯ ಅನುಭವ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಮಹಿಳಾ ಚಾಲಕರಿಗೂ ಸರ್ಕಾರಿ ಸಂಸ್ಥೆಯಲ್ಲಿ ಹೆಚ್ಚಿನ ಅವಕಾಶ ದೊರೆಯುತ್ತಿವೆ.
ಅರ್ಜಿ ತಿರಸ್ಕೃತವಾಗುವ ಕಾರಣ
ತಪ್ಪು ಮಾಹಿತಿ ನೀಡುವುದು ಮತ್ತು ಅಪೂರ್ಣ ದಾಖಲೆಗಳು, ಸಾಮಾನ್ಯ ಲೈಸನ್ಸ್, ಅನುಭವ ಪ್ರಮಾಣ ಪತ್ರ ಕೊರತೆ, ಅರ್ಹತೆ ಇಲ್ಲದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು. ಹೀಗಾಗಿ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಹೆಚ್ಚು.
ಚಾಲನಾ ಪರೀಕ್ಷೆಯಲ್ಲಿ ಏನು ಕೇಳಬಹುದು
ಚಾಲನಾ ಪರೀಕ್ಷೆಯಲ್ಲಿ ವಾಹನ ನಿಯಂತ್ರಣ, ಪಾರ್ಕಿಂಗ್, ರಿವರ್ಸ್ ಡ್ರೈವಿಂಗ್, ಟ್ರಾಫಿಕ್ ನಿಯಮಗಳು ಹಾಗೂ ಸುರಕ್ಷಿತ ಚಾಲನೆ ಬಗ್ಗೆ ಪರೀಕ್ಷೆ ನಡೆಸಬಹುದು.
ಅಭ್ಯರ್ಥಿಗಳು ಪರೀಕ್ಷೆ ಮುಂಚಿತವಾಗಿ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
ಕೊನೆಯ ಮಾತು
Cochin Shipyard Limited ಸಂಸ್ಥೆ Driver ಹುದ್ದೆಗಳ ನೇಮಕಾತಿ 10ನೇ ಪಾಸ್ ಹಾಗೂ ಅನುಭವ ಹೊಂದಿರುವ ಚಾಲಕರಿಗೆ ಅತ್ಯುತ್ತಮ ಅವಕಾಶವಾಗಿದೆ. ಉತ್ತಮ ವೇತನ ಕೇಂದ್ರ ಸರಕಾರ ಸಂಸ್ಥೆಯಲ್ಲಿ ಉದ್ಯೋಗ ಹಾಗೂ ಭದ್ರ ಭವಿಷ್ಯ ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 09 ಜೂನ್ 2026 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಮುಖ್ಯವಾಗಿದೆ.
ಚಾಲನಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಜೀವನ ಬದಲಾಯಿಸಬಹುದಾದ ಅವಕಾಶವಾಗಿದ್ದು, ಭದ್ರ ಸರಕಾರಿ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಲು ಸಹಕಾರಿ ಆಗಲಿದೆ.